• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಸಾವರ್ಕರ್‌ ರಥಯಾತ್ರೆಗೆ ಯಡಿಯೂರಪ್ಪ ಚಾಲನೆ

|
Google Oneindia Kannada News

ಮೈಸೂರು, ಆಗಸ್ಟ್‌ 23: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಂಗಳವಾರ ಮೈಸೂರಿನಲ್ಲಿ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಕಟು ವಿಮರ್ಶಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರಿನಲ್ಲಿ ಸಾವರ್ಕರ್ ಫೌಂಡೇಶನ್ ಆಯೋಜಿಸಿರುವ ರಥಯಾತ್ರೆಗೆ ಚಾಲನೆ ನೀಡಲಾಗಿದೆ.

ಯಡಿಯೂರಪ್ಪಗೆ ಉನ್ನತ ಹುದ್ದೆ: ಇಬ್ಬರಿಗೆ ಶುರುವಾಯಿತೇ ನಡುಕ?ಯಡಿಯೂರಪ್ಪಗೆ ಉನ್ನತ ಹುದ್ದೆ: ಇಬ್ಬರಿಗೆ ಶುರುವಾಯಿತೇ ನಡುಕ?

ಯಡಿಯೂರಪ್ಪ ಅವರು ಮೈಸೂರು ಅರಮನೆಯ ಉತ್ತರ ದ್ವಾರ, ಬಲರಾಮ ದ್ವಾರದ ಬಳಿ ಇರುವ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ರಥಯಾತ್ರೆಗೆ ಚಾಲನೆ ನೀಡಿದರು. ರಥಯಾತ್ರೆಯು ಆಗಸ್ಟ್ 30 ರವರೆಗೆ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ. ಇದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಹೊರಡುವ ಮೊದಲು ಮೈಸೂರು ನಗರದ ಕೆಲವು ಭಾಗಗಳಲ್ಲಿ ಪ್ರವಾಸ ಮಾಡಲಿದೆ.

ಪ್ರತಿಷ್ಠಾನದ ಸಂಚಾಲಕ ರಜತ್ ಮಾತನಾಡಿ, ವೀರ ಸಾವರ್ಕರ್ ಅವರು ಪ್ರತಿಪಾದಿಸಿದ ತತ್ವ ಮತ್ತು ಮೌಲ್ಯಗಳ ಪ್ರಚಾರಕ್ಕಾಗಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ನಮ್ಮ ಸ್ವಾತಂತ್ರ್ಯ ಚಳವಳಿಗೆ ವೀರ್ ಸಾವರ್ಕರ್ ಅವರ ಕೊಡುಗೆಗಳನ್ನು ಅನೇಕ ಕಾರಣಗಳಿಗಾಗಿ ರಾಜಕಾರಣಿಗಳು ದುರ್ಬಲಗೊಳಿಸುತ್ತಿದ್ದಾರೆ. ಅವರು ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ನಿಸ್ವಾರ್ಥವಾಗಿ ಹೋರಾಡಿದರು ಮತ್ತು ಬ್ರಿಟಿಷರ ವಿರುದ್ಧ ಹೋರಾಡಲು ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿದರು ಎಂದು ಅವರು ಹೇಳಿದರು.

ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಎನ್ನುವ ಭಂಡತನ : ಸಿದ್ದು ವಿರುದ್ಧ ವಿಜಯೇಂದ್ರ ಕಿಡಿಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಎನ್ನುವ ಭಂಡತನ : ಸಿದ್ದು ವಿರುದ್ಧ ವಿಜಯೇಂದ್ರ ಕಿಡಿ

ಸಾವರ್ಕರ್‌ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೊಟ್ಟೆ ಎಸೆತದ ಆಕ್ರೋಶ ಎದುರಿಸಿದ್ದರಿಂದ ಮಡಿಕೇರಿ ಚಲೋ ಆರಂಭಿಸಿದ್ದ ಸಿದ್ದು ವಿರುದ್ಧ ಈಗ ಸಾವರ್ಕರ್‌ ರಥಯಾತ್ರೆ ಆರಂಭಿಸಲಾಗಿದೆ ಎನ್ನಲಾಗಿದೆ. ಮೈಸೂರು, ಆಗಸ್ಟ್‌ 23: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಂಗಳವಾರ ಮೈಸೂರಿನಲ್ಲಿ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಕಟು ವಿಮರ್ಶಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರಿನಲ್ಲಿ ಸಾವರ್ಕರ್ ಫೌಂಡೇಶನ್ ಆಯೋಜಿಸಿರುವ ರಥಯಾತ್ರೆಗೆ ಚಾಲನೆ ನೀಡಲಾಗಿದೆ.

ಯಡಿಯೂರಪ್ಪ ಅವರು ಮೈಸೂರು ಅರಮನೆಯ ಉತ್ತರ ದ್ವಾರ, ಬಲರಾಮ ದ್ವಾರದ ಬಳಿ ಇರುವ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ರಥಯಾತ್ರೆಗೆ ಚಾಲನೆ ನೀಡಿದರು. ರಥಯಾತ್ರೆಯು ಆಗಸ್ಟ್ 30 ರವರೆಗೆ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ. ಇದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಹೊರಡುವ ಮೊದಲು ಮೈಸೂರು ನಗರದ ಕೆಲವು ಭಾಗಗಳಲ್ಲಿ ಪ್ರವಾಸ ಮಾಡಲಿದೆ.

ಪ್ರತಿಷ್ಠಾನದ ಸಂಚಾಲಕ ರಜತ್ ಮಾತನಾಡಿ, ವೀರ ಸಾವರ್ಕರ್ ಅವರು ಪ್ರತಿಪಾದಿಸಿದ ತತ್ವ ಮತ್ತು ಮೌಲ್ಯಗಳ ಪ್ರಚಾರಕ್ಕಾಗಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ನಮ್ಮ ಸ್ವಾತಂತ್ರ್ಯ ಚಳವಳಿಗೆ ವೀರ್ ಸಾವರ್ಕರ್ ಅವರ ಕೊಡುಗೆಗಳನ್ನು ಅನೇಕ ಕಾರಣಗಳಿಗಾಗಿ ರಾಜಕಾರಣಿಗಳು ದುರ್ಬಲಗೊಳಿಸುತ್ತಿದ್ದಾರೆ. ಅವರು ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ನಿಸ್ವಾರ್ಥವಾಗಿ ಹೋರಾಡಿದರು ಮತ್ತು ಬ್ರಿಟಿಷರ ವಿರುದ್ಧ ಹೋರಾಡಲು ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿದರು ಎಂದು ಅವರು ಹೇಳಿದರು.

ಸಾವರ್ಕರ್‌ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೊಟ್ಟೆ ಎಸೆತದ ಆಕ್ರೋಶ ಎದುರಿಸಿದ್ದರಿಂದ ಮಡಿಕೇರಿ ಚಲೋ ಆರಂಭಿಸಿದ್ದ ಸಿದ್ದು ವಿರುದ್ಧ ಈಗ ಸಾವರ್ಕರ್‌ ರಥಯಾತ್ರೆ ಆರಂಭಿಸಲಾಗಿದೆ ಎನ್ನಲಾಗಿದೆ.

ಕೆಲವರಿಂದ ದೇಶಕ್ಕೆ ಕೆಟ್ಟ ಹೆಸರು

ಕೆಲವರಿಂದ ದೇಶಕ್ಕೆ ಕೆಟ್ಟ ಹೆಸರು

ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಭಾರತ ವಿಶ್ವಗುರುವಾಗಲು ದೊಡ್ಡ ಹೆಜ್ಜೆ ಇಡುತ್ತಿದೆ. ಅಲ್ಲದೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಆದರೆ ಕೆಲವರಿಂದ ದೇಶಕ್ಕೆ ಕೆಟ್ಟ ಹೆಸರು ಬರುತ್ತಿದೆ. ಕ್ಷುಲ್ಲಕ ರಾಜಕಾರಣಕ್ಕಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವರ್ಕರ್‌ ವಿರುದ್ಧ ಅವಹೇಳನ ಮಾಡಲಾಗುತ್ತಿದೆ. ಸವಾರ್ಕರ್‌ ಅವರನ್ನು ವಿರೋಧಿಸುವ ಮೊದಲು ಅವರು ಬಸವಣ್ಣನವರ ವಿಚಾರಧಾರೆಗಳನ್ನು ಓದಿಕೊಳ್ಳಬೇಕು ಎಂದರು.

ಸಾವರ್ಕರ್‌ ಬಗ್ಗೆ ತಿಳಿವಳಿಕೆ ಕಡಿಮೆ

ಸಾವರ್ಕರ್‌ ಬಗ್ಗೆ ತಿಳಿವಳಿಕೆ ಕಡಿಮೆ

ಸಾವರ್ಕರ್‌ ಅವರನ್ನು ಇವನಾರವ ಎನ್ನದೆ ಇವ ನಮ್ಮವ ಎನ್ನಬೇಕು. ಇಂದಿನ ಯುವಕರಿಗೆ ಸಾವರ್ಕರ್‌ ಬಗ್ಗೆ ತಿಳಿವಳಿಕೆ ಕಡಿಮೆ. ಸ್ವಾತಂತ್ರ್ಯ ಹೋರಾಟದೊಂದಿಗೆ ಹಿಂದೂ ಧರ್ಮದ ರಕ್ಷಣೆಗೆ ಪಣತೊಟ್ಟಿದ್ದ ಅವರನ್ನು ಇಂದು ಎಲ್ಲರೂ ಸ್ಮರಿಸಬೇಕು. ಹೀಗಾಗಿಯೇ ಇಂದಿರಾ ಗಾಂಧಿ, ರಾಷ್ಟ್ರಪತಿ ರಾಧಾಕೃಷ್ಣನ್‌ ಸೇರಿ ಹಲವು ಮಹನೀಯರು ಸಾವರ್ಕರ್‌ ಅವರನ್ನು ಹೊಗಳಿದ್ದಾರೆ. ಭಾರತೀಯರಿಗೆ ಸಾವರ್ಕರ್‌ ವಿಚಾರಗಳು ದಾರಿದೀಪ ಎಂದು ಹೇಳಿದರು.

ಟೆರಿಷಿಯನ್‌ ಕಾಲೇಜು ಮಾರ್ಗವಾಗಿ ಆರಂಭ

ಟೆರಿಷಿಯನ್‌ ಕಾಲೇಜು ಮಾರ್ಗವಾಗಿ ಆರಂಭ

ಎಂಟು ದಿನಗಳ ಕಾಲ ನಡೆಯುವ ರಥಯಾತ್ರೆಯು ಸಾವರ್ಕರ್‌ ಅವರ ಜೀವನ ಚರಿತ್ರೆ ದೇಶ ಪ್ರೇಮದ ಸಂದೇಶವನ್ನು ಸಾರಲಿದೆ. 23ರಂದು ಮೈಸೂರಿನ ಟೆರಿಷಿಯನ್‌ ಕಾಲೇಜು ಮಾರ್ಗವಾಗಿ ಕ್ಯಾತಮಾರನಹಳ್ಳಿ, ತಿಲಕ್‌ ನಗರ, ಚಾಮುಂಡಿಪುರಂ, ವಿವೇಕಾನಂದ ನಗರ ಸೇರಿದಂತೆ ನರಸಿಂಹರಾಜ, ಚಾಮರಾಜ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಂಚರಿಸಲಿದೆ. 24ರಂದು ಎಚ್‌.ಡಿ.ಕೋಟೆ, ಸರಗೂರ, 25,26ರಂದು ನಂಜನಗೂಡು ಮೂಲಕ ಚಾಮರಾಜನಗರ ಜಿಲ್ಲೆ, 27ರಿಂದ 29ರವರೆಗೆ ಮಂಡ್ಯ ಜಿಲ್ಲೆಯಲ್ಲಿ ಯಾತ್ರೆ ನಡೆಯಲಿದೆ. 30ರಂದು ಮತ್ತೆ ಮೈಸೂರಿಗೆ ಬಂದು ಸಮಾರೋಪವಾಗುತ್ತದೆ.

ಸಾವರ್ಕರ್‌ ಪ್ರತಿಷ್ಠಾನದ ಯಶಸ್ವಿನಿ, ಪ್ರತಾಪ್‌ ಸಿಂಹ ಹಾಜರು

ಸಾವರ್ಕರ್‌ ಪ್ರತಿಷ್ಠಾನದ ಯಶಸ್ವಿನಿ, ಪ್ರತಾಪ್‌ ಸಿಂಹ ಹಾಜರು

ರಥಯಾತ್ರೆ ವೇಳೆ ಸಚಿವರಾದ ನಾರಾಯಣಗೌಡ, ಎಸ್‌.ಟಿ. ಸೋಮಶೇಖರ್, ಸಾವರ್ಕರ್‌ ಪ್ರತಿಷ್ಠಾನದ ಅಧ್ಯಕ್ಷೆ ಯಶಸ್ವಿನಿ, ರಥಯಾತ್ರೆ ಸಂಚಾಲಕ ರಜತ್‌, ಸಂಸದ ಪ್ರತಾಪ್‌ ಸಿಂಹ, ಶಾಸಕ ಎಲ್‌. ನಾಗೇಂದ್ರ, ಹರ್ಷವರ್ಧನ, ಬಿಜೆಪಿ ನಗರ ಘಟಕ ಅಧ್ಯಕ್ಷ ಶ್ರೀವತ್ಸ, ನಿಗಮ ಮಂಡಳಿ ಅಧ್ಯಕ್ಷ ಎಸ್‌. ಮಹದೇವಯ್ಯ, ಎಂ. ಶಿವಕುಮಾರ್‌ ಇತರರಿದ್ದರು.

ಬಿ. ಎಸ್. ಯಡಿಯೂರಪ್ಪ
Know all about
ಬಿ. ಎಸ್. ಯಡಿಯೂರಪ್ಪ
English summary
Former Karnataka Chief Minister BS Yeddyurappa has launched the Savarkar Rath Yatra in Mysore on Tuesday. This Rally will cover Mysore, Mandya and Chamarajanagar districts till August 30th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X