ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ರಾಜಕೀಯ ಪ್ರವೇಶಿಸಬೇಕಾ' ಟ್ವಿಟ್ಟರ್ ಪೋಸ್ಟ್: ಯದುವೀರ್ ಒಡೆಯರ್ ಸ್ಪಷ್ಟನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 27: ಮೈಸೂರು ರಾಜ ವಂಶಸ್ಥ ಯದುವೀರ್ ಒಡೆಯರ್ ಅವರು ಬುಧವಾರ ಟ್ವಿಟ್ಟರ್ ಖಾತೆಯಲ್ಲಿ ನಾನು ರಾಜಕೀಯಕ್ಕೆ ಪ್ರವೇಶಿಸಬೇಕಾ ಎಂದು ಸಾರ್ವಜನಿಕರ ಅಭಿಪ್ರಾಯ ಕೇಳಿದ್ದು ಭಾರಿ ಸಂಚಲನವನ್ನೇ ಸೃಷ್ಟಿಸಿತ್ತು. ಆದರೆ ಈ ಪೋಸ್ಟ್ ಕುರಿತು ಯದುವೀರ್ ಒಡೆಯರ್ ಅವರೇ ಖುದ್ದು ಸ್ಪಷ್ಟನೆ ನೀಡಿದ್ದಾರೆ.

"ಶುಡ್ ಐ ಜಾಯಿನ್ ಪಾಲಿಟಿಕ್ಸ್? ಎಂಬ ಪ್ರಶ್ನೆ ಕೇಳಿರುವುದು ನಕಲಿ ಅಕೌಂಟ್ ನಿಂದ ಎಂದು ಸ್ವತಃ ಯದುವೀರ್ ಒಡೆಯರ್ ಅವರು ತಿಳಿಸಿದ್ದಾರೆ. "ಯದುವೀರ್ ಕೆ.ಸಿ.ಒಡೆಯರ್" ಹೆಸರಿನಲ್ಲಿ ತೆರೆಯಲಾಗಿರುವ ಟ್ವಿಟರ್ ಅಕೌಂಟ್ ನಲ್ಲಿ ಯದುವೀರ್ ಅವರಿಗೆ ಸಂಬಂಧಿಸಿದ ಹಲವು ಪೋಸ್ಟ್ ಗಳನ್ನು ಈಗಾಗಲೇ ಹಾಕಲಾಗಿದೆ.

ಮೈಸೂರು ರಾಜ ವಂಶಸ್ಥ ಯದುವೀರ್ ರಾಜಕೀಯಕ್ಕೆ ಅಖಾಡಕ್ಕೆ?ಮೈಸೂರು ರಾಜ ವಂಶಸ್ಥ ಯದುವೀರ್ ರಾಜಕೀಯಕ್ಕೆ ಅಖಾಡಕ್ಕೆ?

ಈ ನಡುವೆ ಕಳೆದ ಕೆಲವು ದಿನಗಳ ಹಿಂದೆ "ನಾನು ರಾಜಕೀಯಕ್ಕೆ ಬರಬೇಕಾ?" ಎಂದು ಪ್ರಶ್ನಿಸಿ ಪೋಸ್ಟ್‍ ಮಾಡಲಾಗಿದೆ. ಅಲ್ಲದೇ ಈ ಪೋಸ್ಟ್ ಗೆ ಹಲವರು ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ.

Mysuru: Yaduveer Wadiyar Has Clarifies Of Twitter Post

ಆದರೆ ತಮ್ಮ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಅಕೌಂಟ್ ತೆರೆದಿರುವ ವಿಷಯನ್ನು ಗಮನಿಸಿದ ಯದುವೀರ್ ಒಡೆಯರ್, ಟ್ವಿಟ್ಟರ್ ನಲ್ಲಿ ತಮ್ಮ ಹೆಸರಿನಲ್ಲಿರುವುದು ಫೇಕ್ ಅಕೌಂಟ್ ಎಂದು ಸ್ಕ್ರೀನ್ ಶಾಟ್ ತೆಗೆದು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

English summary
Yaduveer Wadiyar Has made it clear about his fake account post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X