ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯದುವೀರರ ಪಟ್ಟಾಭಿಷೇಕ, ಕ್ಷಣಕ್ಷಣದ ವರದಿ

|
Google Oneindia Kannada News

ಮೈಸೂರು, ಮೇ 28 : ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಪಟ್ಟಾಭಿಷೇಕದ ವಿಧಿವಿಧಾನಗಳು ಗುರುವಾರ ಬೆಳಗ್ಗೆಯಿಂದಲೇ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಆರಂಭವಾಗಿದೆ. ಶುಭ ಕರ್ಕಾಟಕ ಲಗ್ನದಲ್ಲಿ 22 ವರ್ಷದ ಯದುವೀರ ಅರಸ್ ಅವರಿಗೆ ಚಿನ್ನದ ಬಾಸಿಂಗ ಕಟ್ಟುವ ಮೂಲಕ ಪಟ್ಟಾಭಿಷೇಕ ನಡೆಸಲಾಯಿತು. [ಪಟ್ಟಾಭಿಷೇಕದ ಚಿತ್ರಗಳು]

ಗುರುವಾರ ಬೆಳಗ್ಗೆ 5 ಗಂಟೆಗೆ ಯದುವೀರ ಒಡೆಯರ್‌ ಅವರಿಗೆ ಮಂಗಳಸ್ನಾನ ಮಾಡಿಸುವ ಮೂಲಕ ಇಂದಿನ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ಮಂಗಳ ಸ್ನಾನದ ಬಳಿಕ ಗಣಪತಿ ಪೂಜೆ ಮಾಡಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ರಾಜ ಪೋಷಕು ತೊಟ್ಟು ಕಂಗೊಳಿಸುತ್ತಿದ್ದ ಯದುವೀರ ಒಡೆಯರ್ 9.40ರ ಶುಭ ಕರ್ಕಾಟಕ ಲಗ್ನದಲ್ಲಿ ಬೆಳ್ಳಿಯ ಸಿಂಹಾಸನ ಏರಿದರು. [ಬುಧವಾರ ಅರಮನೆಯಲ್ಲಿ ಏನೇನಾಯ್ತು?]

Chamaraja Wadiyar

ಬೆಳಗ್ಗೆ 9.30 ರಿಂದ 10.30ರವರೆಗೆ ಸಲ್ಲುವ ಶುಭ ಕರ್ಕಾಟಕ ಲಗ್ನದಲ್ಲಿ ಪಟ್ಟಾಭಿಷೇಕದ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿಲ್ಲ. ಸಂಜೆ 6.30ಕ್ಕೆ ದರ್ಬಾರ್ ಸಭಾಂಗಣದಲ್ಲಿ ಆರತಕ್ಷತೆ ಏರ್ಪಡಿಸಲಾಗಿದ್ದು ಇದನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಪಟ್ಟಾಭಿಷೇಕದ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ.

ಸಮಯ 11 ಗಂಟೆ : 'ಅರಮನೆ ಮತ್ತು ಸರ್ಕಾರದ ನಡುವಿನ ಆಸ್ತಿ ವಿವಾದವನ್ನು ಅರಮನೆ ಬಯಸಿದರೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುತ್ತೇವೆ' ಎಂದು ಕಂದಾಯ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್ ಹೇಳಿದರು.

ಸಮಯ 10.35 : ಮೈಸೂರು ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಸಿ.ಶಿಖಾ, ಎಸ್ಪಿ ಬಿ.ದಯಾನಂದ ಅವರು ಯದುವೀರ ಒಡೆಯರ್ ಅವರಿಗೆ ಅಭಿನಂದನೆ ಸಲ್ಲಿಸಿದರು

dk shivakumar

ಸಮಯ 10.30 : ಸಮಾರಂಭಕ್ಕೆ ಆಗಮಿಸಿರುವ ಗಣ್ಯರು ಮಹಾರಾಜರಿಗೆ ಶುಭಾಶಯ ಸಲ್ಲಿಸುತ್ತಿದ್ದಾರೆ

ಸಮಯ 10.12 : 16 ದೇವಾಲಯಗಳ ಪ್ರಸಾದವನ್ನು ಮಹಾರಾಜರಿಗೆ ಸಮರ್ಪಣೆ ಮಾಡಲಾಗಿದೆ

ಸಮಯ 10.05 : ಯದುವಂಶದ 27ನೇ ಅರಸನಾಗಿ ಯದುವೀರ ಒಡೆಯರ್ ಅವರಿಗೆ ಸಾಮ್ರಾಜ್ಯ ಪಟ್ಟಾಭಿಷೇಕ ನಡೆಯಿತು [ಯುವರಾಜ ಯದುವೀರ್ ಪರಿಚಯ]

ಸಮಯ 10.01 : ಯದುವೀರ ಒಡೆಯರ್ ವಿವರವುಳ್ಳ ಚಿನ್ನದ ಬಾಸಿಂಗ ಕಟ್ಟುವ ಮೂಲಕ ಪಟ್ಟಾಭಿಷೇಕ ನಡೆಸಲಾಯಿತು [ಮೈಸೂರು ಮಹಾರಾಜರ 550 ವರ್ಷಗಳ ಭವ್ಯ ಇತಿಹಾಸ]

urs

ಸಮಯ 10 ಗಂಟೆ : ಬ್ರಿಜೇಶ್ ಪಟೇಲ್, ಸಚಿವರಾದ ಶ್ರೀನಿವಾಸ ಪ್ರಸಾದ್, ಆರ್.ವಿ.ದೇಶಪಾಂಡೆ ಅರಮನೆಗೆ ಆಗಮಿಸಿದರು

ಸಮಯ 9.49 : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪುತ್ರ ಎಚ್.ಡಿ.ರೇವಣ್ಣ ಜೊತೆಗೆ ಅರಮನೆಗೆ ಆಗಮಿಸಿದರು

ಸಮಯ 948 : ರಾಜಪುರೋಹಿತರ ಮಂತ್ರಘೋಷದ ನಡುವೆ ಯದುವೀರ ಒಡೆಯರ್ ಬೆಳ್ಳಿಯ ಭದ್ರಾಸನ ವೇರಿದರು

ಸಮಯ 9.40 : ಮಂತ್ರ ಘೋಷ, ಸೇರಿದ ಜನರ ಚಪ್ಪಾಳೆ ನಡುವೆ ಭದ್ರಾಸನ ಏರಿದ ಯದುವೀರ ಒಡೆಯರ್

ಸಮಯ 9.36 : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಚಿವರಾದ ರೋಷನ್ ಬೇಗ್, ಡಿಕೆ ಶಿವಕುಮಾರ್ ಮುಂತಾದವರು ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಆಗಮಿಸಿದರು

ಸಮಯ 9.15 : ಯದುವೀರ ಅರಸ್ ಭದ್ರಾಸನಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ

ಸಮಯ 9 ಗಂಟೆ : ಯದುವೀರ ಒಡೆಯರ್ ಅವರು 101 ಕಲಶಗಳ ಪೂಜೆಯನ್ನು ನೇರವೇರಿಸುತ್ತಿದ್ದಾರೆ

ಸಮಯ 8.30 : ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಯದುವೀರ್‌ ಕೃಷ್ಣದತ್ತ ನರಸಿಂಹರಾಜ ಒಡೆಯರ್ ಅವರ ಭಾವಿ ಪತ್ನಿ ತ್ರಿಶಿಕಾ ಕುಮಾರಿ ಮತ್ತು ಅವರ ಕುಟುಂಬಸ್ಥರು ಪಾಲ್ಗೊಂಡಿದ್ದಾರೆ.

ಸಮಯ 8 ಗಂಟೆ : ಅರಮನೆಯಲ್ಲಿ ರಾಮತಾರಕ ಹೋಮ, ಕಲಶ ಪೂಜೆಗಳು ಆರಂಭ

ಸಮಯ 7.30 : ಅರಮನೆಯಲ್ಲಿ 41 ವರ್ಷಗಳ ನಂತರ ಪಟ್ಟಾಭಿಷೇಕ ನಡೆಯುತ್ತಿದೆ. 1974ರ ಸೆ. 23ರಂದು ಜಯಚಾಮರಾಜೇಂದ್ರ ಒಡೆಯರ್ ನಿಧನರಾದರು. ಅದೇ ವರ್ಷ 1974ರ ಅ. 16ರಂದು ಶ್ರೀಕಂಠದತ್ತ ಒಡೆಯರ್‌ ಅವರಿಗೆ ಪಟ್ಟಾಭಿಷೇಕ ನಡೆದಿತ್ತು.

ಸಮಯ 7 ಗಂಟೆ : ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಪಟ್ಟಾಭಿಷೇಕಕ್ಕೆ ಗಂಗಾಜಲ ತರುವ ಕಾರ್ಯಕ್ರಮಕ್ಕೆ ಚಾಲನೆ.

English summary
Yaduveer Krishnadatta Chamaraja Wadiyar was crowned as the new Maharaja at the Amba Vilas Palace in Mysuru on Thursday, May 28, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X