ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಾಪ್‌ ಸಿಂಹ ಗೆಲುವಿನ ಮೇಲೆ ನನ್ನ ಭವಿಷ್ಯ ನಿರ್ಮಾಣ:ಯಡಿಯೂರಪ್ಪ

|
Google Oneindia Kannada News

Recommended Video

Lok Sabha elections 2019 : ಶಿವಮೊಗ್ಗ ಪ್ರಚಾರಕ್ಕೆ ಬಿಎಸ್‍ವೈ ಏಕೆ ಹೋಗಿಲ್ಲ, ಗೊತ್ತಾ?

ಮೈಸೂರು, ಏಪ್ರಿಲ್ 14:ಮೈಸೂರಿನಲ್ಲಿ ಪ್ರತಾಪ್ ಸಿಂಹ ಸೋಲಾದರೆ, ಅದು ನನ್ನ ಸೋಲು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೈಸೂರಿನಲ್ಲಿ ಪ್ರತಾಪ್ ಸಿಂಹ ಪರ ಪ್ರಚಾರಕ್ಕೆ ಆಗಮಿಸಿ ಸಮಾವೇಶದಲ್ಲಿ ಮಾತನಾಡಿದ ಅವರು, ವೀರಶೈವ ಸಮಾಜದಲ್ಲಿ ಗೊಂದಲವನ್ನು ಉಂಟುಮಾಡುವ ಪಿತೂರಿ ನಡೆಯುತ್ತಿದೆ. ಯಾವುದಾದರೂ ಕಾರಣಕ್ಕೆ ಪ್ರತಾಪ್‌ಸಿಂಹಗೆ ಹಿನ್ನಡೆ ಉಂಟಾದರೆ ಅದು ಯಡಿಯೂರಪ್ಪನ ಸೋಲು.ಪ್ರತಾಪ್‌ಸಿಂಹ ಗೆಲುವಿನ ಮೇಲೆ ನನ್ನ ಭವಿಷ್ಯ ನಿರ್ಮಾಣವಾಗುತ್ತದೆ ಎಂದರು.

ತಂದೆ, ಮಕ್ಕಳನ್ನು ಗೆಲ್ಲಿಸುವುದೇ ಕುಮಾರಸ್ವಾಮಿ ಚಿಂತೆಯಾಗಿದೆ : ಬಿಎಸ್‌ವೈತಂದೆ, ಮಕ್ಕಳನ್ನು ಗೆಲ್ಲಿಸುವುದೇ ಕುಮಾರಸ್ವಾಮಿ ಚಿಂತೆಯಾಗಿದೆ : ಬಿಎಸ್‌ವೈ

ಶಿವಮೊಗ್ಗಕ್ಕೆ ಪ್ರಚಾರಕ್ಕೆ ನಾನು ಹೋಗಿಲ್ಲ. ಬೇರೆ ಪಕ್ಷದ ನಾಯಕರು ಅಲ್ಲೇ ಇದ್ದಾರೆ. ಇಷ್ಟಾದರೂ ರಾಘವೇಂದ್ರ ಗೆಲ್ಲಲಿದ್ದಾರೆ ಎನ್ನುವ ಅದಮ್ಯ ವಿಶ್ವಾಸವಿದೆ. ಚಾಮರಾಜನಗರದಲ್ಲಿ ಶ್ರೀನಿವಾಸ್ ಪ್ರಸಾದ್ ಸ್ಪರ್ಧೆಗೆ ನಾನೇ ಒತ್ತಾಯ ಮಾಡಿದ್ದು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪ್ರಸಾದ್ ರನ್ನು ನಾನು ಒತ್ತಾಯ ಮಾಡಿ ಸ್ಪರ್ದಿಸುವಂತೆ ಹೇಳಿದ್ದೆ. ನಮ್ಮ ಸಮಾಜ ಶ್ರೀನಿವಾಸ್ ಪ್ರಸಾದ್ ಅವರನ್ನು ಬೆಂಬಲಿಸಬೇಕು ಎಂದು ಬಿಎಸ್ ವೈ ಮನವಿ ಮಾಡಿದರು.

Yadiyurappa asked people to vote for BJP candidates

ಚಾಮುಂಡೇಶ್ವರಿ ಸೋಲನ್ನು ಸಿದ್ದರಾಮಯ್ಯ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ರಾಜಕೀಯ ದೊಂಬರಾಟವನ್ನ ಸಿದ್ದರಾಮಯ್ಯ ನೋಡಿದ್ದಾರೆ. 20 ಜನ ಕಾಂಗ್ರೆಸ್ ಎಂಎಲ್ಎಗಳು ಅಸಮಾಧಾನಗೊಂಡು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಚುನಾವಣಾ ನಂತರ ಮೈತ್ರಿ ಸರ್ಕಾರ ಮುಳುಗಲಿದೆ ಎಂದರು.

 ತಾಕತ್ತಿದ್ದರೆ ಮೇ 23ರ ಒಳಗೆ ಕೇಸ್ ಓಪನ್ ಮಾಡಲಿ: ಎಚ್‌ಡಿಕೆಗೆ ಯಡಿಯೂರಪ್ಪ ಸವಾಲು ತಾಕತ್ತಿದ್ದರೆ ಮೇ 23ರ ಒಳಗೆ ಕೇಸ್ ಓಪನ್ ಮಾಡಲಿ: ಎಚ್‌ಡಿಕೆಗೆ ಯಡಿಯೂರಪ್ಪ ಸವಾಲು

ಈಗಾಗಲೇ ರಾಜ್ಯ ಸರ್ಕಾರದ 20 ಶಾಸಕರು ಕುಮಾರಸ್ವಾಮಿ ಆಡಳಿತದ ಅಸಮಾಧಾನ ಹೊರಹಾಕಿದ್ದಾರೆ. ನಾವು 22ಕ್ಕೂ ಹೆಚ್ಚು ಸ್ಥಾನ ಗೆಲ್ಲಲ್ಲಿದ್ದೇವೆ ಚುನಾವಣೆ ನಂತರ ಮೈತ್ರಿ ಪಕ್ಷಗಳ ಹೊಡೆದಾಟ ಜಾಸ್ತಿ ಆಗಲಿದ್ದು, ಸರ್ಕಾರ ಬೀಳಲಿದೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.

English summary
Lok Sabha Elections 2019: In Nanjangudu BJP Rally BJP president Yeddyurappa asked people to vote for BJP candidates.In this time Yeddyurappa said that, If Pratap simha lose at Mysuru – Kodagu lok sabha election, it will be my defeat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X