ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಾಹಿತಿ ಭೈರಪ್ಪ ಬರೆದ ಪತ್ರದಲ್ಲೇನಿದೆ?

|
Google Oneindia Kannada News

ಮೈಸೂರು, ನವೆಂಬರ್. 15: ಕೊಡಗಿನ ನೀರು ಬಳಸಲು ಕೇಂದ್ರ ಸರ್ಕಾರದ ಮೂಲಕ ನ್ಯಾಯಾಲಯದ ಮೆಟ್ಟಿಲೇರುವ ತಮಿಳುನಾಡು ವಿರುದ್ಧ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಎಸ್.ಎಲ್. ಭೈರಪ್ಪನವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಕೊಡಗಿನಲ್ಲಿ ಸುರಿದಿರುವ ಹುಚ್ಚು ಮಳೆ ಹಾಗೂ ಭಾರೀ ಬಿರುಗಾಳಿಯಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂ. ವೆಚ್ಚವನ್ನು ಮಾಡಬೇಕಿದೆ. ಈ ಮಧ್ಯೆ ಸಾರ್ವಜನಿಕರೂ ಸಂತ್ರಸ್ತರ ಪುನರ್ವಸತಿಗಾಗಿ ದೇಣಿಗೆಗಳನ್ನು ನೀಡುತ್ತಿದ್ದಾರೆ.

ಅನಂತ್ ಎಂದರೆ... ಕಣ್ಣೀರುಕ್ಕಿಸುವಂತೆ ಆಪ್ತ ಸ್ನೇಹಿತ ಬರೆದ ಸಾಲುಗಳುಅನಂತ್ ಎಂದರೆ... ಕಣ್ಣೀರುಕ್ಕಿಸುವಂತೆ ಆಪ್ತ ಸ್ನೇಹಿತ ಬರೆದ ಸಾಲುಗಳು

ಆದರೆ ಮಳೆ ಇರಲಿ, ಇಲ್ಲದಿರಲಿ ತಗಾದೆ ತೆಗೆದು ನೀರು ಕಬಳಿಸುವ, ಅದಕ್ಕಾಗಿ ಕೇಂದ್ರ ಹಾಗೂ ನ್ಯಾಯಾಲಯದ ಮೊರೆ ಹೋಗಿ ನೀರು ಪಡೆಯುವ ತಮಿಳುನಾಡು ತನ್ನ ನೀರಿನ ಮೂಲಸ್ಥಾನವಾದ ಕೊಡಗಿನ ಹಾನಿಯನ್ನು ತುಂಬುವುದು ತನ್ನ ಕರ್ತವ್ಯ ಅಲ್ಲ ಎಂಬಂತೆ ತೆಪ್ಪಗಿರುವುದು ಯಾವ ನ್ಯಾಯ? ಎಂದು ಭೈರಪ್ಪ ಅವರು ಪ್ರಶ್ನಿಸಿದ್ದಾರೆ.

Writer SL Bhyrappa wrote a letter to Chief Minister Kumaraswamy

ಪ್ರಸ್ತುತ, ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವುದು ಕರ್ನಾಟಕದ ಕರ್ತವ್ಯ' ವಾದರೆ, ಅದರ ಫಲ ಉಣ್ಣುವ ಹಕ್ಕು' ಮಾತ್ರ ತಮಿಳ್ನಾಡಿನದ್ದಾಗಿದೆ.

 ಕೊಡಗು ಪ್ರವಾಹ: ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಬರೆದ ಪತ್ರದಲ್ಲೇನಿದೆ? ಕೊಡಗು ಪ್ರವಾಹ: ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಬರೆದ ಪತ್ರದಲ್ಲೇನಿದೆ?

ಈ ಅಂಶಗಳನ್ನು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರ, ಇಲ್ಲವೇ ಸಂಬಂಧಿಸಿದ ಟ್ರಿಬ್ಯುನಲ್ ಅಥವಾ ಉನ್ನತ ನ್ಯಾಯಾಲಯಕ್ಕಾಗಲಿ ಹಕ್ಕೊತ್ತಾಯ ಮಾಡುವುದು ಅತ್ಯಗತ್ಯವೆಂದು ಭಾವಿಸಿದ್ದು, ಅದಕ್ಕೆ ಸಂಬಂಧಿಸಿದವರು ಮನ್ನಣೆ ನೀಡದೇ ಇದ್ದರೂ, ನಮ್ಮ ಪಾಲಿನ ನೀರಿನ ಹಕ್ಕೊತ್ತಾಯ ವೇಳೆ ಈ ಅಂಶವೂ ಆಧಾರವಾಗಲಿದೆ ಎಂದು ಭೈರಪ್ಪ ತಮ್ಮ ಅನಿಸಿಕೆ ತಿಳಿಸಿದ್ದಾರೆ.

Writer SL Bhyrappa wrote a letter to Chief Minister Kumaraswamy

ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಭೈರಪ್ಪನವರು ಪತ್ರ ಬರೆದಿದ್ದು, ಅದರ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

English summary
Writer SL Bhyrappa wrote a letter to Chief Minister Kumaraswamy. What is written in that letter? Read this article for more information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X