ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡಿಯನ್ನೂ ಬ್ಯಾನ್ ಮಾಡಿ ಕೋರ್ಟ್ ಗೆ ಹೋಗ್ತಾರೆ, ಭೈರಪ್ಪ ಬಯ್ದರಪ್ಪ

|
Google Oneindia Kannada News

ಮೈಸೂರು, ಜನವರಿ 2 : ಧಾರ್ಮಿಕ ವಿಚಾರ ಕೋರ್ಟ್ ಮೆಟ್ಟಿಲೇರುವುದು ಸಲ್ಲದು. ಮುಂದಿನ ದಿನದಲ್ಲಿ ಚಾಮುಂಡಿಯನ್ನು ಬ್ಯಾನ್ ಮಾಡಬೇಕು ಎಂದು ಕೋರ್ಟ್ ಗೆ ಹೋದರೆ ಏನಾಗಬಹುದು? ಎಂದು ಸಾಹಿತಿ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಬುಧವಾರ ಮೈಸೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತು ಪ್ರತಿಕ್ರಿಯಿಸಿದ ಅವರು, "ಮಹಿಷಾಸುರನೆಂಬ ರಾಕ್ಷಸ ಜನರಿಗೆ ತೊಂದರೆ ಕೊಡುತ್ತಿದ್ದ. ಆದರೆ ಆತನನ್ನು ಸದೆ ಬಡಿಯಲು ಪುರುಷ ದೇವತೆಗಳಿಗೆ ಸಾಧ್ಯವಾಗಲಿಲ್ಲ. ಅವರು ತಾಯಿ ಚಾಮುಂಡಿಯ ಮುಂದಾಳತ್ವದಲ್ಲಿ ತಾವು ಆಕೆಯ ಸೇವಕರಾಗಿದ್ದುಕೊಂಡು ಆತನನ್ನು ಸಂಹರಿಸುತ್ತಾರೆ.

ಶಬರಿಮಲೆಯಲ್ಲಿ ಇತಿಹಾಸ ಸೃಷ್ಟಿ: ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಮಹಿಳೆಯರುಶಬರಿಮಲೆಯಲ್ಲಿ ಇತಿಹಾಸ ಸೃಷ್ಟಿ: ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಮಹಿಳೆಯರು

"ಅಂದರೆ ಗಂಡಸರಿಗೆಲ್ಲ ಅವಮಾನ ಮಾಡಿದ್ದಾರೆ. ಚಾಮುಂಡಿಯನ್ನು ಬ್ಯಾನ್ ಮಾಡಬೇಕು ಎಂದು ಕೋರ್ಟ್ ಗೆ ಹೋದರೆ ಏನಾಗಬಹುದು? ಇದು ನಂಬಿಕೆಯ ಪ್ರಶ್ನೆ. ಶಬರಿಮಲೆಯ ತೀರ್ಪು ಕೊಟ್ಟ ಐವರು ನ್ಯಾಯಾಧೀಶರಲ್ಲಿ ಓರ್ವ ಮಹಿಳಾ ನ್ಯಾಯಾಧೀಶರೂ ಇದ್ದರು. ಅವರು ಶಬರಿಮಲೆಯ ಪ್ರವೇಶವನ್ನು ವಿರೋಧಿಸಿದ್ದರು" ಎಂದಿದ್ದಾರೆ.

Writer SL Bhyrappa reaction on women visit to Sabarimala temple

ಧಾರ್ಮಿಕ ವಿಚಾರವಾಗಿ ಕೋರ್ಟ್ ಮೆಟ್ಟಿಲೇರುವವರು ಚೇಷ್ಟೆ ಸ್ವಭಾವದವರು. ಧಾರ್ಮಿಕ ಭಾವನೆಗಳನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಲೇಬಾರದು. ಕಮೂನಿಸ್ಟ್ ಸಿದ್ಧಾಂತ ಕೇರಳದಲ್ಲಿ ಮಾತ್ರವಲ್ಲ, ನೆಹರೂ ಕಾಲದಿಂದಲೂ ಭಾರತದಲ್ಲಿ ಕಮ್ಯುನಿಸ್ಟ್ ಸಿದ್ಧಾಂತವನ್ನು ತುರುಕಿಕೊಂಡೇ ಬಂದಿದ್ದಾರೆ ಎಂದು ಕಿಡಿ ಕಾರಿದ್ದಾರೆ.

'ಅಯ್ಯಪ್ಪ... ಇದೆಂಥ ಪರೀಕ್ಷೆ! ಹಿಂದಿನ ಬಾಗಿಲಿಂದ ಹೋಗಿ ದರ್ಶನ ಪಡೆಯೋದಾ?!' 'ಅಯ್ಯಪ್ಪ... ಇದೆಂಥ ಪರೀಕ್ಷೆ! ಹಿಂದಿನ ಬಾಗಿಲಿಂದ ಹೋಗಿ ದರ್ಶನ ಪಡೆಯೋದಾ?!'

ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಇಂಗ್ಲಿಷ್ ಕಲಿಸಬೇಕೆಂದು ಸರಕಾರ ಹೊರಟಿರುವುದರ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭೈರಪ್ಪ, ಸ್ಟುಪಿಡ್ ಅವರು. ವಿದ್ಯೆಯ ಪರಿಜ್ಞಾನವೇ ಇಲ್ಲದವರು ರಾಜ್ಯವನ್ನು ಆಳುತ್ತಿದ್ದಾರೆ. ವಿದ್ಯೆ ಯಾವಾಗಲೂ ಸಮಾಜದಲ್ಲಿರುವಂತಹ, ಮನೆಯಲ್ಲಿರುವಂತಹ, ಭಾಷೆಯ ಮೂಲಕವಾಗಿ ಒಂದು ಮಟ್ಟಕ್ಕೆ ಹೋಗಬೇಕು. ಆಮೇಲೆ ಬೇರೆ ಭಾಷೆ ಕಲಿಯೋದು. ಆರಂಭದಲ್ಲಿ ಮಾಡುತ್ತೇವೆ ಅಂದರೆ ಏನು? ಎಂದು ಪ್ರಶ್ನಿಸಿದ್ದಾರೆ.

ಇಂಗ್ಲಿಷ್ ಮಾಧ್ಯಮವನ್ನು ಬಿಜಿನೆಸ್ ಮಾಡಿಕೊಂಡಿದ್ದಾರೆ. ಅವರ ಲಹರಿಗೆ ಇವರು ಸಿಲುಕಿಕೊಂಡಿದ್ದಾರೆ ಎಂದು ಭೈರಪ್ಪ ಹೇಳಿದ್ದಾರೆ.

English summary
Kannada famous writer SL Bhyrappa reacts to women entry in to Sabarimala temple. He opposed women entry on the temple in Mysuru, while reacts to media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X