• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್‌ ಗಾಂಧಿ ಪತ್ರದ ಎಫೆಕ್ಟ್‌.. ಗಾಯಗೊಂಡಿದ್ದ ಆನೆ ಮರಿಗೆ ಚಿಕಿತ್ಸೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 7: ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದ ವ್ಯಾಪ್ತಿಯಲ್ಲಿ ಗಾಯಗೊಂಡಿದ್ದ ಆನೆ ಮರಿಗೆ ಚಿಕಿತ್ಸೆ ಕೊಡಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಬಸವರಾಜ್ ಬೊಮ್ಮಾಯಿಗೆ ಬರೆದ ಪತ್ರ ಫಲಕಾರಿಯಾಗಿದ್ದು, ಅರಣ್ಯ ಇಲಾಖೆ ಕೂಡ ಸ್ಪಂದನೆ ನೀಡಿ ಚಿಕಿತ್ಸೆ ಕೊಡಿಸಿದೆ.

ಭಾರತ ಜೋಡೊ ಪಾದಯಾತ್ರೆಯ ಮಧ್ಯೆ 2 ದಿನ ವಿರಾಮದಲ್ಲಿದ್ದ ರಾಹುಲ್ ಗಾಂಧಿ ಎಚ್.ಡಿ.ಕೋಟೆ ಜಂಗಲ್ ರೆಸಾರ್ಟ್‌ನಲ್ಲಿ ತಂಗಿದ್ದರು. ಈ ವೇಳೆ ನಾಗರಹೊಳೆಯಲ್ಲಿ ಸಫಾರಿ ಮಾಡಿದ್ದರು. ಸಫಾರಿ ವೇಳೆ ತಾಯಿ ಆನೆಯೊಂದಿಗೆ ಮರಿಯಾನೆಯೊಂದು ತೀವ್ರ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿದ್ದನ್ನು ಗಮನಿಸಿದ್ದ ಅವರು, ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಿ ಪತ್ರ ಬರೆದಿದ್ದರು.

ಕರ್ನಾಟಕ: ಗಾಯಗೊಂಡ ಆನೆ ಮರಿಗೆ ಚಿಕಿತ್ಸೆ ಕೊಡಿಸುವಂತೆ ಸಿಎಂಗೆ ರಾಹುಲ್‌ ಗಾಂಧಿ ಪತ್ರಕರ್ನಾಟಕ: ಗಾಯಗೊಂಡ ಆನೆ ಮರಿಗೆ ಚಿಕಿತ್ಸೆ ಕೊಡಿಸುವಂತೆ ಸಿಎಂಗೆ ರಾಹುಲ್‌ ಗಾಂಧಿ ಪತ್ರ

ತಾಯಿಯ ಜತೆಗಿದ್ದ ಚಿಕ್ಕ ಆನೆ ಮರಿಯ ಬಾಲ ಮತ್ತು ಸೊಂಡಿಲಿಗೆ ಗಾಯಗಳಾಗಿವೆ. ಅದು ಜೀವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ನಿಸರ್ಗ ಸಹಜವಾಗಿಯೇ ಪ್ರಕ್ರಿಯೆಗಳು ನಡೆಯಬೇಕು ಎಂಬ ಅಭಿಪ್ರಾಯ ಇದೆ. ಈ ಆನೆ ಮರಿಗೆ ತುರ್ತಾಗಿ ವೈದ್ಯಕೀಯ ನೆರವು ಬೇಕಿರುವುದರಲ್ಲಿ ಯಾವುದೇ ಸಂಶಯವಿಲ್ಲ, ಆನೆ ಮರಿಗೆ ಚಿಕಿತ್ಸೆ ನೀಡಿ, ಅದನ್ನು ರಕ್ಷಿಸುವ ವಿಚಾರದಲ್ಲಿ ರಾಜಕೀಯ ಗಡಿಗಳನ್ನು ಮೀರಿ ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಸರಿಯಾದ ಚಿಕಿತ್ಸೆ ಲಭಿಸಿದರೆ ಆ ಮರಿಯು ಜೀವಂತವಾಗಿ ಉಳಿಯುತ್ತದೆ ಎನ್ನುವ ವಿಶ್ವಾಸವಿದೆ. ಈ ಆನೆ ಮರಿಯ ಜೀವ ಉಳಿಸಲು ನೀವು ಸಕಾಲಕ್ಕೆ ನೆರವು ನೀಡುತ್ತೀರಿ ಎಂಬ ಭರವಸೆ ಇದೆ" ಎಂದು ರಾಹುಲ್‌ ಪತ್ರದಲ್ಲಿ ಉಲ್ಲೇಖಿಸಿದ್ದರು.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, " ರಾಹುಲ್ ಗಾಂಧಿ ನನಗೆ ಒಂದು ಪತ್ರ ಬರೆದಿದ್ದಾರೆ. ನಾಗರಹೊಳೆ ಅಭಯಾರಣ್ಯದಲ್ಲಿ ಆನೆ ಮತ್ತು ಮರಿ ನೋಡಿದ್ದಾರೆ. ಎರಡೂ ಗಾಯಗೊಂಡಿರುವ ಬಗ್ಗೆ ಹಾಗೂ ಅವುಗಳಿಗೆ ಚಿಕಿತ್ಸೆ ಕೊಡಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡಲಿದ್ದೇವೆ" ಎಂದು ಭರವಸೆ ನೀಡಿದ್ದರು.

ಇದು ಸುಮಾರು ಒಂದು ತಿಂಗಳ ಗಂಡು ಮರಿಯಾಗಿದ್ದು, ಆನೆಯ ಸೊಂಡಿಲು, ಬಾಲ ಹಾಗೂ ದೇಹದ ಅಲ್ಲಲ್ಲಿ ಅಲ್ಪಮಟ್ಟಿಗೆ ಗಾಯಗಳಾಗಿದ್ದವು. ಅಂತರಸಂತೆ ವನ್ಯಜೀವಿ ವಲಯದ ಬಿಸಿಲವಾಡಿ ಕೆರೆ ಬಳಿ ಡಾ.ಪ್ರಸನ್ನ, ಡಾ.ವಾಸಿಮ್ ಮತ್ತು ಇಲಾಖೆ ಸಿಬ್ಬಂದಿ ಆನೆ ಮರಿಗೆ ಚಿಕಿತ್ಸೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾಡು ನಾಯಿ ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಈ ದಾಳಿ ವೇಳೆ ತಾಯಿ ಆನೆ ಕಾಡು ನಾಯಿಗಳನ್ನು ಓಡಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Wounded Elephant Calf Treated by the Forest Department After Rahul Gandhi letter to CM Bommai
ರಾಹುಲ ಗಾಂಧಿ
Know all about
ರಾಹುಲ ಗಾಂಧಿ

ಗುರುವಾರ ಬೆಳಗ್ಗೆ ಕಾರ್ಯಾಚರಣೆ ಪ್ರಾರಂಭಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪಶುವೈದ್ಯ ಇಲಾಖೆ ವೈದ್ಯರಿಗೆ ತಾಯಿಯೊಂದಿಗೆ ಮರಿ ಆನೆ ಬಿಸಿಲವಾಡಿ ಕೆರೆ ಬಳಿ ಕಂಡಿದೆ. ಕೂಡಲೇ ಕುಮ್ಕಿ ಆನೆಗಳ ಸಹಾಯದಿಂದ ತಾಯಿ ಆನೆಯನ್ನು ಮರಿಯಿಂದ ಬೇರ್ಪಡಿಸಿ ಆನೆಗೆ ಚಿಕಿತ್ಸೆ ಕೊಡಲಾಗಿದೆ. ಸ್ಥಳದಲ್ಲಿ ಡಿಎಫ್‌ಒ ಚಿಕ್ಕನರಗುಂದ, ಎಸಿಎಫ್‌ ರಂಗಸ್ವಾಮಿ, ಅಂತರಸಂತೆ ವಲಯದ ಅರಣ್ಯಾಧಿಕಾರಿ ಸಿದ್ದರಾಜು, ಡಿ.ಬಿ.ಕುಪ್ಪೆ ವಲಯದ ಅರಣ್ಯ ಅಧಿಕಾರಿ ಮಧು, ವೈಲ್ಡ್ ಲೈಫ್ ವಾರ್ಡನ್ ಕೃತಿಕಾ, ಸಿಬ್ಬಂದಿ ಹಾಜರಿದ್ದರು.

English summary
A day after Rahul Gandhi's letter to CM Basavaraja Bommai about the injured elephant calf inside the Nagarahole Tiger Reserve, forest department officials traced the calf and treated it for the wounds
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X