ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಬಂದು ಯೋಗ ಮಾಡಿದ್ದರಿಂದ ಮೈಸೂರಿಗೆ ಪ್ರಪಂಚದಾದ್ಯಂತ ಹೆಸರು: ಸೋಮಶೇಖರ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂ22: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ ಹಿನ್ನೆಲೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮೈಸೂರಿನ ಅರಮನೆ ಆವರಣದಲ್ಲಿ ನಡೆದ ಯೋಗ ಕಾರ್ಯಕ್ರಮ ಅತ್ಯಂತ ಅವಿಸ್ಮರಣೀಯವಾದುದು. ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಯಶಸ್ಸಿಗೆ ಕಾರಣೀಭೂತರಾದ ಯೋಗಪಟುಗಳು, ನಾಗರಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು, ಮಾಧ್ಯಮ ಮಿತ್ರರು, ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಮೈಸೂರು; ವೇದಿಕೆ ಇಳಿದು ಸಾರ್ವಜನಿಕರೊಂದಿಗೆ ಮೋದಿ ಯೋಗಾಭ್ಯಾಸಮೈಸೂರು; ವೇದಿಕೆ ಇಳಿದು ಸಾರ್ವಜನಿಕರೊಂದಿಗೆ ಮೋದಿ ಯೋಗಾಭ್ಯಾಸ

ಯೋಗದಿನ: ಪ್ರಪಂಚದಾದ್ಯಂತ ಪಠಿಸಲ್ಪಡುತ್ತಿದೆ ಮೈಸೂರು

ಯೋಗದಿನ: ಪ್ರಪಂಚದಾದ್ಯಂತ ಪಠಿಸಲ್ಪಡುತ್ತಿದೆ ಮೈಸೂರು

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ 1 ಗಂಟೆ 15 ನಿಮಿಷಗಳ ಯೋಗ ಕಾರ್ಯಕ್ರಮದಲ್ಲಿ 15 ಸಾವಿರ ಜನ ಪಾಲ್ಗೊಂಡಿದ್ದರು. ಯೋಗ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಬೆಂಗಳೂರು, ಬೆಂಗಳೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ನಾನಾ ಜಿಲ್ಲೆಗಳು ಹಾಗೂ ದೆಹಲಿಯ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗದಿಂದ ಕೂಡ ಆಗಮಿಸಿದ್ದರು. ಯೋಗ ಪ್ರದರ್ಶನದಲ್ಲಿ ವಿಶೇಷಚೇತನರು, ತೃತೀಯ ಲಿಂಗಿಗಳು, ಪೌರಕಾರ್ಮಿಕರು, ಶಿಕ್ಷಕರು ಸೇರಿದಂತೆ 51 ವಿವಿಧ ವರ್ಗದ ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಯೋಗ ಮಾಡಿದರು. ಇಂದು 75 ನಗರಗಳು, ಐತಿಹಾಸಿಕ ಸ್ಥಳಗಳು, ಸಾಂಸ್ಕೃತಿಕ ಕೇಂದ್ರಗಳಲ್ಲಿ ಯೋಗ ದಿನ ಆಚರಿಸಲಾಗುತ್ತದೆ. ಜ್ಞಾನಿಯಂತೆ, ತನ್ನ ಸೊಬಗು, ಸೌಹಾರ್ದಯುತವಾದ ಯೋಗದ ರಿಂಗ್‌ಗೆ ಹೆಸರುವಾಸಿಯಾದ ಮೈಸೂರು ಪ್ರಪಂಚದಾದ್ಯಂತ ಪಠಿಸಲ್ಪಡುತ್ತಿದೆ ಎಂದು ಸೋಮಶೇಖರ್ ತಿಳಿಸಿದರು.

ಮೈಸೂರು ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಹೊಸ ನಿಯಮಮೈಸೂರು ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಹೊಸ ನಿಯಮ

140ಕ್ಕೂ ಅಧಿಕ ಬಸ್ ಗಳ ವ್ಯವಸ್ಥೆ

140ಕ್ಕೂ ಅಧಿಕ ಬಸ್ ಗಳ ವ್ಯವಸ್ಥೆ

ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿದ್ದಾರೆ. ಯೋಗಪಟುಗಳನ್ನು ಕರೆತರಲು 140ಕ್ಕೂ ಅಧಿಕ ಬಸ್ ಗಳ ವ್ಯವಸ್ಥೆ ಮಾಡಲಾಗಿತು. ಪ್ರಧಾನಿಯವರ ಎಲ್ಲ ಕಾರ್ಯಕ್ರಮಕ್ಕೆ ಎಲ್ಲಾ ಜನಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ. ಯೋಗ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಮ್ಯಾಟ್, ಮೊಬೈಲ್ ಪೌಚ್ ನೀಡಲಾಯಿತು. ಜೊತೆಗೆ ಉಪಾಹರದ ವ್ಯವಸ್ಥೆ ಮಾಡಲಾಗಿತ್ತು. ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಚತೆ, ಜಿಲ್ಲಾಧಿಕಾರಿಗಳು ಕಾರ್ಯಕ್ರಮ ರೂಪಿಸುವಲ್ಲಿ, ಭದ್ರತಾ ದೃಷ್ಟಿಯಿಂದ ಕರ್ನಾಟಕ ಪೊಲೀಸ್‌, ಸೇರಿದಂತೆ ಆಯುಷ್ ಇಲಾಖೆ ಶ್ರಮವಹಿಸಿ ಕೆಲಸ ಮಾಡಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಯೋಗ ಪ್ರದರ್ಶನ ಯಶ್ವಸಿಗೆ ಮಾಧ್ಯಮದವರ ಸಹಕಾರ

ಯೋಗ ಪ್ರದರ್ಶನ ಯಶ್ವಸಿಗೆ ಮಾಧ್ಯಮದವರ ಸಹಕಾರ

ಯೋಗ ಕಾರ್ಯಕ್ರಮ ವಿಶ್ವದೆಲ್ಲೆಡೆ ಗಮನ ಸೆಳೆಯಲು ಮಾಧ್ಯಮದವರು ಸಹಕಾರ ನೀಡಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ 480 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿರುವ ನಾಗನಹಳ್ಳಿ ರೈಲು ನಿಲ್ದಾಣದಲ್ಲಿ ಉಪನಗರ ಸಂಚಾರಕ್ಕಾಗಿ ಕೋಚಿಂಗ್ ಟರ್ಮಿನಲ್‌ಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೀಡಿದ್ದು, ತುಂಬಾ ಅನುಕೂಲವಾಗಲಿದೆ. ಯೋಗ ಕಾರ್ಯಕ್ರಮದಲ್ಲಿ ಆಯುಷ್ ಪ್ರದರ್ಶನದ ಡಿಜಿಟಲ್ ಮಳಿಗೆಗಳು ಗಮನ ಸೆಳೆದಿದ್ದು, ಯೋಗ ಕಾರ್ಯಕ್ರಮ ವಿಶ್ವದೆಲ್ಲೆಡೆ ಗಮನ ಸೆಳೆದಿದ್ದು ಮೈಸೂರಿನ ಜನತೆಯ ಸಹಕಾರ ಕೂಡ ಹೆಚ್ಚಿನ ರೀತಿ ಕಂಡು ಬಂದಿದೆ. ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಸಂವಾದ ಸಾಕಷ್ಟು ಮೆಚ್ಚುಗೆ ಗಳಿಸಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಕಮಿಷನರ್ ಚಂದ್ರಗುಪ್ತ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ, ಜಿಪಂ ಸಿಇಒ ಪೂರ್ಣಿಮಾ ಸೇರಿದಂತೆ ನಾನಾ ನಿಗಮ ಮಂಡಳಿ ಅಧ್ಯಕ್ಷರು, ಅಧಿಕಾರಿಗಳು ಉಪಸ್ಥಿತರಿದ್ದರು.

ಯೋಗವು ವಿಶ್ವ ಕರ್ಮವಾಗಿದೆ: ಪ್ರಧಾನ ಮಂತ್ರಿ

ಯೋಗವು ವಿಶ್ವ ಕರ್ಮವಾಗಿದೆ: ಪ್ರಧಾನ ಮಂತ್ರಿ

ಅರಮನೆ ಮೈದಾನದ ಮುಂಭಾಗದಲ್ಲಿ ಭವ್ಯ ವೇದಿಕೆಯ ಮೇಲೆ ಭಾಷಣ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ದಿಢೀರನೇ ವೇದಿಕೆಯಿಂದ ಇಳಿದು ಸಾರ್ವಜನಿಕರೊಂದಿಗೆ ಯೋಗ ಮಾಡುವ ಮೂಲಕ ಆಶ್ಚರ್ಯ ಮೂಡಿಸಿದರು. ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, 15 ಸಾವಿರ ಮಂದಿಯೊಂದಿಗೆ ಯೋಗಾಭ್ಯಾಸ ನಡೆಸಿದರು.

ಈ ಹಿಂದೆ ಯೋಗದ ಸಂಕೇತವು ಆಧ್ಯಾತ್ಮಿಕ ಸ್ಥಳಗಳು ಅಥವಾ ಸಾಂಪ್ರದಾಯಿಕ ಮನೆಗಳಂತಹ ಸ್ಥಳಗಳಲ್ಲಿ ಮಾತ್ರ ಕಾಣುತ್ತಿತ್ತು. ಆದರೆ ಇಂದು ಇದು ಜಗತ್ತಿನ ಮೂಲೆ ಮೂಲೆಯಲ್ಲಿ ಕಾಣುತ್ತಿದೆ. ಯೋಗವು ವಿಶ್ವ ಕರ್ಮವಾಗಿದೆ, ಪ್ರಪಂಚದ ಎಲ್ಲೆಡೆ ಯೋಗ ಕೆಲಸವಾಗುತ್ತಿದೆ. ಇಡೀ ವಿಶ್ವ ಸಮೂಹಕ್ಕೆ ನಾನು ನಮಸ್ಕರಿಸುತ್ತೇನೆ. ಯೋಗವು ನಮಗೆ, ನಮ್ಮ ದೇಶಕ್ಕೆ, ನಮ್ಮ ಜಗತ್ತಿಗೆ ಶಾಂತಿಯನ್ನು ತರುತ್ತದೆ ಎಂದರು.

English summary
Prime Minister Narendra Modi participated World Yoga Day Program success: Mysuru incharge minister ST Somashekhar Thanks to Mysuru people and administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X