ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

Mysore dasara 2017 : You Know Jamboo Savari Elephants Weights | Oneindia Kannada

ಮೈಸೂರು, ಸೆಪ್ಟೆಂಬರ್ 30: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ವೈಭವದ ಜಂಬೂ ಸವಾರಿಗೆ ಮೆರಗು ನೀಡಲು ಮೈಸೂರು ಸಜ್ಜಾಗುತ್ತಿದೆ. ಈಗಾಗಲೇ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ವಿಶೇಷ ಅಲಂಕಾರ ನಡೆಯುತ್ತಿದೆ. ಅರ್ಜುನ ಸೇರಿದಂತೆ 15 ಆನೆಗಳಿಗೆ ಬಣ್ಣ ಬಳಿಯುವಲಾಗುತ್ತಿದೆ.

ಜಂಬೂ ಸವಾರಿ ಆರಂಭಕ್ಕೂ ಮುನ್ನ ಮಧ್ಯಾಹ್ನ 2 ಗಂಟೆಗೆ ಸಿಎಂ ಸಿದ್ದರಾಂಯ್ಯರಿಂದ ನಂದಿಧ್ವಜಕ್ಕೆ ಪೂಜಾ ಕೈಂಕರ್ಯ ನಡೆಯಲಿದೆ.

ದಸರೆಯ ಮುನ್ನಾದಿನವಾದ ಸೆ. 29 ರಂದು ರಾತ್ರಿ ಅರ್ಜುನ ನೇತೃತ್ವದ ಗಜಪಡೆಗೆ ಮತ್ತೊಮ್ಮೆ ಹಾಗೂ ಕಡೆಯ ಬಾರಿ ತೂಕ ಪರಿಶೀಲನೆ ನಡೆಯಿತು. ಮೈಸೂರು ಅರಮನೆ ಆವರಣ ಪ್ರವೇಶಿಸಿದ ನಂತರ ಅರ್ಜುನ ನೇತೃತ್ವದ ಗಜಪಡೆ ಪೌಷ್ಠಿಕಾಂಶದ ಆಹಾರ ಸೇವನೆ ಮಾಡಿದ ಪರಿಣಾಮ ಗಣನೀಯ ಪ್ರಮಾಣದಲ್ಲಿ ತೂಕದಲ್ಲಿರು ಹೆಚ್ಚಳ ಮಾಡಿಕೊಂಡಿದೆ. ಕಳೆದ ಆಗಸ್ಟ್ 18ರಂದು ಮೊದಲ ತಂಡದ ಆನೆಗಳ ತೂಕ ಮಾಡಿದಾಗ 5250 ಕೆ.ಜಿ. ಇದ್ದ ಅಂಬಾರಿ ಆನೆ ಅರ್ಜುನನ ತೂಕ ಇದೀಗ 5910 ಕೆ.ಜಿ ಗೆ ಹೆಚ್ಚಳವಾಗಿದೆ.

World famous Jamboo Savari of Mysuru Dasara will be taking place on Sep 30th

ಬರೋಬ್ಬರಿ 660 ಕೆ.ಜಿ ತೂಕ ಹೆಚ್ಚಿಸಿಕೊಂಡಿರುವ ಅರ್ಜುನ ಎಲ್ಲಾ ಆನೆಗಳಿಗಿಂತಲೂ ತಾನೇ ಬಲಶಾಲಿ ಎಂಬುದನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾನೆ. 2770 ಕೆ.ಜಿ. ಇದ್ದ ವಿಜಯ ಆನೆಯತೂಕ ಇದೀಗ 2960 ಕೆ.ಜಿ ಹೆಚ್ಚಳವಾಗಿದ್ದು, 190 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. 4870 ಕೆ.ಜಿ. ಇದ್ದ ಅಭಿಮನ್ಯುವಿನ ತೂಕ ಇದೀಗ 5190 ಕೆ.ಜಿ ಗೆ ಹೆಚ್ಚಳವಾಗಿದ್ದು, 320 ಕೆ.ಜಿ ಹೆಚ್ಚಿಸಿಕೊಂಡಿದ್ದಾನೆ. 2830 ಕೆ.ಜಿ ತೂಕವಿದ್ದ ವರಲಕ್ಷ್ಮಿಯ ತೂಕ ಇದೀಗ 3030 ಕೆ.ಜಿ. ಗೆ ಹೆಚ್ಚಳವಾಗಿದ್ದು,200 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾಳೆ.

4990 ಕೆ.ಜಿ ತೂಕವಿದ್ದ ಬಲರಾಮನ ತೂಕ ಇದೀಗ 5520 ಕೆ.ಜಿ. ಗೆ ಹೆಚ್ಚಳವಾಗಿದ್ದು, 530 ಕೆ.ಜಿಹೆಚ್ಚಳ ಮಾಡಿಕೊಂಡಿದ್ದಾನೆ. 3410 ಕೆ.ಜಿ ತೂಕವಿದ್ದ ಭೀಮನ ತೂಕ ಇದೀಗ 3810 ಕೆ.ಜಿ. ಗೆ ಹೆಚ್ಚಳವಾಗಿದ್ದು, 400 ಕೆ.ಜಿ ಹೆಚ್ಚಳಮಾಡಿಕೊಂಡಿದ್ದಾನೆ. 2820 ಕೆ.ಜಿ ತೂಕವಿದ್ದ ಕಾವೇರಿಯ ತೂಕ ಇದೀಗ 3065 ಕೆ.ಜಿ. ಗೆ ಹೆಚ್ಚಳವಾಗಿದ್ದು, 245 ಕೆ.ಜಿ ಹೆಚ್ಚಳಮಾಡಿಕೊಂಡಿದ್ದಾಳೆ. 4600 ಕೆ.ಜಿ ತೂಕವಿದ್ದ ಗಜೇಂದ್ರ ಆನೆಯ ತೂಕ ಇದೀಗ 5050 ಕೆ.ಜಿ. ಗೆ ಹೆಚ್ಚಳವಾಗಿದ್ದು, 450 ಕೆ.ಜಿ ತೂಕಹೆಚ್ಚಿಸಿಕೊಂಡಿದ್ದಾನೆ.

English summary
World famous Jamboo Savari of Mysuru Dasara will be taking place today(Sep 30th). Here is the list of weights of Jamboo Savari elephants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X