ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

14 ತಿಂಗಳ ನಂತರ ಕೈ ಸೇರಿತು ಕಳ್ಳತನವಾಗಿದ್ದ 90 ಗ್ರಾಂ ಚಿನ್ನವಿದ್ದ ಬ್ಯಾಗು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 22: ಹದಿನಾಲ್ಕು ತಿಂಗಳುಗಳ ಹಿಂದೆ ಕಳ್ಳತನವಾಗಿದ್ದ, ಸುಮಾರು ಎರಡೂವರೆ ಲಕ್ಷ ಮೌಲ್ಯದ ಚಿನ್ನವಿದ್ದ ಬ್ಯಾಗ್ ಕೊನೆಗೂ ಮಾಲೀಕರ ಕೈ ಸೇರಿದೆ.

ಅದರ ಹಿಂದೆ ಒಂದು ದೊಡ್ಡ ಕಥೆಯೂ ಇದೆ. ಬೆಂಗಳೂರಿನ ಗೀತಾ ಎಂಬುವರು 2018ರ ಜೂನ್ 11ರಂದು ತಮಿಳುನಾಡಿನಲ್ಲಿ ಸಂಬಂಧಿಕರ ಮದುವೆ ಮುಗಿಸಿಕೊಂಡು ಕರೂರಿನಿಂದ ಬೆಂಗಳೂರಿಗೆ ಮೈಲಾಡುದೊರೈ-ಮೈಸೂರು ಎಕ್ಸ್ ಪ್ರೆಸ್ ಹತ್ತಿದ್ದರು. ಅದರಲ್ಲಿನ ಎಸ್ 3ಕೋಚ್ ನಲ್ಲಿ ತಮ್ಮ ಇಬ್ಬರು ಮಕ್ಕಳು, ಅಣ್ಣ ಸುರೇಶ್ ಅವರೊಂದಿಗೆ ರಾತ್ರಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ನಿದ್ದೆಗೆ ಜಾರಿದ್ದ ಗೀತಾ ಅವರ ಬ್ಯಾಗನ್ನು ಕಿಡಿಗೇಡಿಗಳು ಕದ್ದು, ಅದರೊಳಗಿದ್ದ ಮೂರು ಸಾವಿರ ನಗದು ಹಾಗೂ ಮೊಬೈಲನ್ನು ತೆಗೆದುಕೊಂಡಿದ್ದರು.

 ಹೆಸರಿಗೆ ಕನ್ನಡಕ ರಿಪೇರಿ ಕೆಲಸ, ಆದ್ರೆ ಮಾಡುತ್ತಿದ್ದುದೇ ಬೇರೆ ಹೆಸರಿಗೆ ಕನ್ನಡಕ ರಿಪೇರಿ ಕೆಲಸ, ಆದ್ರೆ ಮಾಡುತ್ತಿದ್ದುದೇ ಬೇರೆ

ಗಡಿಬಿಡಿಯಲ್ಲಿ ಆ ಕೋಚ್ ನ ಶೌಚಾಲಯದಲ್ಲಿ ಬ್ಯಾಗನ್ನು ನೇತುಹಾಕಿ ಹಾಗೇ ಪರಾರಿಯಾಗಿದ್ದರು. ಗೀತಾ ಅವರು ಎಚ್ಚರವಾದಾಗ ಬ್ಯಾಗ್ ಕಳೆದುಹೋಗಿರುವುದು ಗಮನಕ್ಕೆ ಬಂದಿದೆ. ಬ್ಯಾಗ್ ಕಳೆದುಕೊಂಡ ಗೀತಾ ಬೆಂಗಳೂರು ಕಂಟೋನ್ಮೆಂಟ್ ಸ್ಟೇಷನ್ ನಲ್ಲಿ ದೂರು ದಾಖಲಿಸಲು ಮುಂದಾದರು. ಆದರೆ ಗೀತಾ ಅವರ ನಂಬರ್ ಗೆ ಕರೆ ಮಾಡಿದಾಗ, ಅದು ತಮಿಳುನಾಡಿನ ಈರೋಡ್ ನಲ್ಲಿ ಇರುವುದಾಗಿ ತಿಳಿದುಬಂದಿದ್ದು, ಸೇಲಂ ಸ್ಟೇಷನ್ ನಲ್ಲಿ ದೂರು ದಾಖಲಿಸಲು ಪೊಲೀಸರು ತಿಳಿಸಿದ್ದರು.

Women Finally Got Lost Bag With 90 Grams Gold After 14 Months In Mysuru

ಈ ಕಡೆ, ಮರುದಿನ ಮೈಸೂರಿನಲ್ಲಿ ಅದೇ ರೈಲು ನಿಂತಿತ್ತು. ರೈಲಿನಲ್ಲಿ ಎಸ್ 3 ಕೋಚ್ ಶೌಚಾಲಯ ಸ್ವಚ್ಛಗೊಳಿಸಲು ಬಂದ ಸುಂದರಿ ಎಂಬಾಕೆಗೆ ಅಚ್ಚರಿ ಕಾದಿತ್ತು. ಶೌಚಾಲಯದಲ್ಲಿ ನೇತುಹಾಕಿದ್ದ ನೀಲಿ ಬ್ಯಾಗ್ ಕಂಡು ಒಳಗೆ ನೋಡಿದರೆ, ಚಿನ್ನದ ಒಡವೆಗಳು ಕಂಡವು.

ಅಧಿಕಾರಿಗಳ ಸೋಗಿನಲ್ಲಿ ಚಿನ್ನ ದೋಚಿದ ಕಳ್ಳರುಅಧಿಕಾರಿಗಳ ಸೋಗಿನಲ್ಲಿ ಚಿನ್ನ ದೋಚಿದ ಕಳ್ಳರು

ಅದೃಷ್ಟವಶಾತ್ ಬ್ಯಾಗನ್ನು ಕದ್ದಿದ್ದ ಕಳ್ಳರು ಅವಸರದಲ್ಲಿ ಬ್ಯಾಗ್ ನ ಇನ್ನೊಂದು ಜಿಪ್ ನಲ್ಲಿದ್ದ ಎರಡು ಚಿನ್ನದ ಬಳೆಗಳು, ಬ್ರೇಸ್ ಲೆಟ್, ಎರಡು ಚೈನ್ ಗಳನ್ನು ನೋಡಿರದೇ ಅವುಗಳನ್ನು ಹಾಗೇ ಬಿಟ್ಟು ಹೋಗಿದ್ದರು. ತಕ್ಷಣವೇ ಸುಂದರಿ ಅವರು ನಿಲ್ದಾಣದ ಆರ್ ಪಿಎಫ್ ಇನ್ ಸ್ಪೆಕ್ಟರ್ ಗೆ ಬ್ಯಾಗ್ ಒಪ್ಪಿಸಿದ್ದಾರೆ.

ಅಂದಿನಿಂದ ಆ ಬ್ಯಾಗ್ ನ ಮಾಲೀಕರಿಗಾಗಿ ಹುಡುಕಾಟ ಆರಂಭಗೊಂಡಿದೆ. ಬ್ಯಾಗ್ ತಲುಪಿಸಲು ಸಾಕಷ್ಟು ಪ್ರಯತ್ನಗಳೂ ನಡೆದಿದ್ದವು. ಕೊನೆಗೂ ಬರೋಬ್ಬರಿ ಹದಿನಾಲ್ಕು ತಿಂಗಳ ನಂತರ ಬ್ಯಾಗ್ ಮಾಲೀಕರು ಸಿಕ್ಕಿದರು. ಯಲಹಂಕ ನಿವಾಸ ಗೀತಾ ಅವರ ಅಣ್ಣ ಮೈಸೂರಿಗೆ ಬಂದು 90ಗ್ರಾಂ ಮೌಲ್ಯದ ಚಿನ್ನವಿದ್ದ ಬ್ಯಾಗನ್ನು ಪಡೆದುಕೊಂಡು ಹೋಗಿದ್ದಾರೆ.

English summary
A bag of gold worth about two and a half lakhs was stolen fourteen months ago and finally it came to the hands of owner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X