ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿ.ನರಸೀಪುರ: ಚಿರತೆ ಬಲಿ ಪಡೆದ ಸಿದ್ದಮ್ಮ ಕುಟುಂಬಕ್ಕೆ ಎಸ್.ಟಿ.ಸೋಮಶೇಖರ್ ಸಾಂತ್ವನ

ತಿ.ನರಸೀಪುರ ತಾಲೂಕಿನ ಕನ್ನಾಯಕನಹಳ್ಳಿ ಹಾಗೂ ಹೊರಳಹಳ್ಳಿಯಲ್ಲಿ ಚಿರತೆ ಬಲಿ ಪಡೆದ ಸಿದ್ದಮ್ಮ ಹಾಗೂ ಜಯಂತ್ ಅವರ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಸಾಂತ್ವನ ಹೇಳಿದರು. ಹಾಗೆಯೇ ಚಿರತೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ಸಚಿವರು ನೀಡ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ, 24: ತಿ.ನರಸೀಪುರ ತಾಲೂಕಿನ ಕನ್ನಾಯಕನಹಳ್ಳಿ ಹಾಗೂ ಹೊರಳಹಳ್ಳಿಯಲ್ಲಿ ಚಿರತೆ ಬಲಿ ಪಡೆದ ಸಿದ್ದಮ್ಮ ಹಾಗೂ ಜಯಂತ್ ಅವರ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಸಾಂತ್ವನ ಹೇಳಿದರು.

ನಂತರ ಮಾತನಾಡಿದ ಅವರು, "ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳಿಗೆ ಹೆಚ್ಚು ಅಧಿಕಾರ ನೀಡಲಾಗುವುದು. ಇಂತಹ ಘಟನೆಗಳು ಮತ್ತೆ ಮರುಕಳಿಸಿದರೆ, ಆರ್‌ಎಫ್‌ಒ, ಎಸಿಎಫ್‌ಗಳ ತಲೆದಂಡವಾಗಲಿದೆ," ಎಂದು ಎಚ್ಚರಿಸಿದರು. ಹಾಗೆಯೇ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಧನದ ಚೆಕ್ ವಿತರಣೆ ಮಾಡಿ ಧೈರ್ಯ ತುಂಬಿದರು. ಕನ್ನಾಯಕನಹಳ್ಳಿ ಸಿದ್ದಮ್ಮ ಕುಟುಂಬಕ್ಕೆ 13 ಲಕ್ಷ ರೂಪಾಯಿ ಚೆಕ್ ಹಾಗೂ ಹೊರಳಹಳ್ಳಿ ಜಯಂತ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದರು.

ತಿ. ನರಸೀಪುರದಲ್ಲಿ ಚಿರತೆ ದಾಳಿ, ಅರಣ್ಯ ಇಲಾಖೆ ಸಾರ್ವಜನಿಕ ಪ್ರಕಟಣೆ ತಿ. ನರಸೀಪುರದಲ್ಲಿ ಚಿರತೆ ದಾಳಿ, ಅರಣ್ಯ ಇಲಾಖೆ ಸಾರ್ವಜನಿಕ ಪ್ರಕಟಣೆ

ವಿಶೇಷ ತಂಡ ರಚನೆ

ಈಗಾಗಲೇ ತಿ.ನರಸೀಪುರ ತಾಲೂಕಿನಲ್ಲಿ ನಾಲ್ಕು ಜೀವಗಳನ್ನು ಬಲಿ ಪಡೆದಿರುವ ಚಿರತೆಯನ್ನು ಸೆರೆ ಹಿಡಿಯಲು ವಿಶೇಷ ತಂಡ ರಚನೆ ಮಾಡಲಾಗಿದೆ. ತಿ.ನರಸೀಪುರ ತಾಲೂಕಿನಲ್ಲಿ ಕಬ್ಬು ಕಟಾವು ಮಾಡಲು ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ, ಶಾಲಾ ಮಕ್ಕಳು ಓಡಾಡುವ ರಸ್ತೆಗಳಲ್ಲಿ ರೆಂಬೆ, ಕೊಂಬೆ ಹಾಗೂ ಪೊದೆ, ಗಿಡಗಂಟಿಗಳನ್ನು ಕಟಾವು ಮಾಡುವಂತೆ ಸೂಚನೆ ನೀಡಿದ್ದಾರೆ ಎಂದರು.

Woman was killed by leopard attack: ST Somashekhar visit T narasipura

ಚಿರತೆ ಶೂಟ್ ಮಾಡಲು ಆದೇಶ

ಮುಖ್ಯಮಂತ್ರಿಯವರು, ಅರಣ್ಯ ಅಧಿಕಾರಿಗಳಿಗೆ ಈಗಾಗಲೇ ನರಭಕ್ಷಕ ಚಿರತೆಯನ್ನು ಶೂಟ್ ಮಾಡಲು ಆದೇಶ ನೀಡಿದ್ದಾರೆ. ಇದರ ಜೊತೆಗೆ ಉನ್ನತ ಅಧಿಕಾರಿಗಳ ಸಭೆ ಕರೆದ್ದಿದಾರೆ. ರಾಜ್ಯದ ಅರಣ್ಯಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅರಣ್ಯ ಅಧಿಕಾರಿಗಳಿಗೆ ಹೆಚ್ಚು ಅಧಿಕಾರ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಎಂ.ಅಶ್ವಿನ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜಯಪಾಲ ಭರಣಿ, ಬಿಜೆಪಿ ಕ್ಷೇತ್ರ ಅಧ್ಯಕ್ಷ ಕೆ.ಸಿ.ಲೋಕೇಶ್, ಪುರಸಭೆ ಸದಸ್ಯ ಕೆ.ಎಸ್ ಕಿರಣ್, ಕೆಬ್ಬೇಹುಂಡಿ ಶಿವಕುಮಾರ್, ಸಾಮ್ರಾಟ್ ಸುಂದರೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Woman was killed by leopard attack: ST Somashekhar visit T narasipura

ಸಿದ್ದನಹುಂಡಿಯಲ್ಲಿ ಚಿರತೆ ಪ್ರತ್ಯಕ್ಷ

ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ನಾಲ್ವರನ್ನು ಬಲಿ ಪಡೆದ ಬೆನ್ನಲ್ಲೇ, ಸಿದ್ದನಹುಂಡಿಯಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಹೊರಳಹಳ್ಳಿಯಲ್ಲಿ ಬಾಲಕನನ್ನು ಬಲಿ ಪಡೆದ ನಂತರ ಸೋಮವಾರ ರಾತ್ರಿ ಸಿದ್ದನಹುಂಡಿಯಲ್ಲಿ ಎಮ್ಮೆಯನ್ನು ಕೊಂದು ಎಳೆದೊಯ್ದಿದೆ. ತಾಲೂಕಿನ ಎಸ್.ಕೆಬ್ಬೇಹುಂಡಿ ಗ್ರಾಮದಲ್ಲಿ ಡಿಸೆಂಬರ್‌ 2ರಂದು ಚಿರತೆ ದಾಳಿ ನಡೆಸಿ ಮೇಘನಾ ಎನ್ನುವ ಯುವತಿಯನ್ನು ಕೊಂದು ಹಾಕಿತ್ತು.

English summary
Woman was killed by leopard attack case in t narasipur taluk, Minister ST Somashekhar visit t narasipur, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X