ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆ ಸವಾಲುಗಳನ್ನು ಸರಾಗವಾಗಿ ಸ್ವೀಕರಿಸುತ್ತಾಳೆ:ತ್ರಿಷಿಕಾ ಕುಮಾರಿ

|
Google Oneindia Kannada News

ಮೈಸೂರು, ಮಾರ್ಚ್ 13: ಮಹಿಳೆಯೆಂದರೆ ಮದುವೆಗೆ ಮಾತ್ರ ಸೀಮಿತವಾಗದಿರಲಿ. ಆಕೆ ಇನ್ನಿತರ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಬೇಕು ಎಂದು ಮೈಸೂರು ರಾಜವಂಶಸ್ಥೆ ತ್ರಿಷಿಕಾ ಕುಮಾರಿ ತಿಳಿಸಿದರು.

ತ್ರಿಷಿಕಾ ಹುಟ್ಟುಹಬ್ಬ, ಟ್ವಿಟ್ಟರ್‌ನಲ್ಲಿ ಶುಭಾಶಯ ಕೋರಿದ ಯದುವೀರ್ತ್ರಿಷಿಕಾ ಹುಟ್ಟುಹಬ್ಬ, ಟ್ವಿಟ್ಟರ್‌ನಲ್ಲಿ ಶುಭಾಶಯ ಕೋರಿದ ಯದುವೀರ್

ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಹಿಳಾ ಸಬಲೀಕರಣ ಕುರಿತು ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ರಾಜಮನೆತನ ಪ್ರಾರಂಭಿಸಿದ್ದು ಕೂಡ ಮಹಿಳೆ ಕೆಂಪರಾಜಮ್ಮಣ್ಣಿ. ಮಹಿಳೆಯಿಂದ ಪ್ರಾರಂಭವಾದ ರಾಜಮನೆತನ ಈ ದಿನ ಈ ಮಟ್ಟಕ್ಕೆ ಬೆಳೆದಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

Woman should not be limited to marriage:Trishika Kumari

ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಸಮಾಜದ ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರಿದ್ದಾರೆ. ನಾನು ನನ್ನ ಮಗನಿಗೆ ಈಗಿನಿಂದಲೇ ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಸುತ್ತಿದ್ದೇನೆ. ಮಹಿಳೆಯರಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿ ಎಂದು ತಿಳಿಸಿದರು.

 ಯೋಗ, ಹೊಟ್ಟೆಕರಗಿಸುವ ವ್ಯಾಯಾಮವಷ್ಟೇ ಅಲ್ಲ, ಅದು ಜೀವನ ಮೌಲ್ಯ: ವನಿತಕ್ಕ ಯೋಗ, ಹೊಟ್ಟೆಕರಗಿಸುವ ವ್ಯಾಯಾಮವಷ್ಟೇ ಅಲ್ಲ, ಅದು ಜೀವನ ಮೌಲ್ಯ: ವನಿತಕ್ಕ

Woman should not be limited to marriage:Trishika Kumari

ಮಹಿಳಾ ಸಬಲೀಕರಣ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಜಾಗತಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಆಗಬೇಕಿದೆ. ಆಕೆ ಯಾರಿಗೂ ಕಮ್ಮಿ ಇಲ್ಲ, ಪುರುಷನಿಗೆ ಸಮಾನವಾಗಿ ಪ್ರತಿ ಹಂತದಲ್ಲು ಸಾಧಿಸಬಲ್ಲಳು, ಕೈಯ್ಯಲ್ಲಿ ಸೌಟನ್ನು ಹಿಡಿಯುವುದರಿಂದ ಹಿಡಿದು ಆಕಾಶದಲ್ಲಿ ವಿಮಾನವನ್ನು ಹಾರಿಸುವ ಹಂತದವರೆಗೂ ತಲುಪುವ ತಾಕತ್ತು ಮಹಿಳೆಯರಿಗಿದೆ. ಎಂಥಹ ಸಂದಿಗ್ಧ ಪರಿಸ್ಥಿಯಲ್ಲೂ ಸವಾಲುಗಳನ್ನು ಸರಾಗವಾಗಿ ಸ್ವೀಕರಿಸುವ ಶಕ್ತಿ ಮಹಿಳೆಯದ್ದು ಎಂದು ಪ್ರಶಂಸಿಸಿದರು.

ಮಹಿಳೆಯ ಕುರಿತು ಒಂದು ಕಿರು ನಾಟಕ ಕೂಡ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ 400 ಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದರು.

English summary
Women should achieve in all walks of life. Rajamathas of Mysuru where the reason behind the educational and social development of our region, said Royal family Trishika kumara wadiyer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X