• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ವಿಷ ಸೇವಿಸುವ ವಿಡಿಯೋ ಮಾಡಿಟ್ಟು ಮಹಿಳೆ ಆತ್ಮಹತ್ಯೆ

By ಮೈಸೂರು ಪ್ರತಿನಿಧಿ
|

ಮೈಸೂರು, ಜೂನ್ 19: ವಿಷ ಸೇವನೆಯ ವಿಡಿಯೋ ಮಾಡಿಟ್ಟು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಪ್ರಿಯಕರನಿಗೆ ವಿಡಿಯೋ ವಾಟ್ಸಪ್ ಮಾಡಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಯನ್ನು ಟಿ.ಕೆ.ಲೇಔಟ್ ನಿವಾಸಿ ಶೀಲಾ (38) ಎನ್ನಲಾಗಿದೆ. ಆರೋಪಿ ವೆಂಕಟೇಶ್ ನನ್ನು ಪೊಲೀಸರು​ ಬಂಧಿಸಿದ್ದಾರೆ.

ವೆಂಕಟೇಶ್, ಶೀಲಾ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಇಬ್ಬರೂ ಸೇರಿ ಫರ್ನಿಚರ್ ಅಂಗಡಿ ತೆರೆದಿದ್ದರು. ಹಣದ ವಿಚಾರಕ್ಕೆ ಇಬ್ಬರಲ್ಲೂ ಮನಸ್ತಾಪ ಉಂಟಾಗಿದ್ದು, ಇತ್ತೀಚೆಗೆ ವೆಂಕಟೇಶ್ ಮನೆ ಬಳಿ ಬಂದು ಗಲಾಟೆ ಮಾಡಿದ್ದ.

ಈ ಘಟನೆಯಿಂದ ಮನನೊಂದ ಶೀಲಾ ಜೂನ್ 16ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ವೆಂಕಟೇಶ್ ಜತೆ ಶೀಲಾ ಚಾಟ್ ಮಾಡಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ವಿಡಿಯೋ, ಫೋಟೊವನ್ನು ವೆಂಕಟೇಶ್ ಗೆ ಕಳುಹಿಸಿದ್ದರು. ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
An incident of a woman committed suicide by making video has came to light in Mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X