ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂವರು ಮಕ್ಕಳನ್ನು ಮೈಸೂರಿನಲ್ಲೇ ಬಿಟ್ಟು ನಾಪತ್ತೆಯಾದ ತಾಯಿ

|
Google Oneindia Kannada News

ಮೈಸೂರು, ಜನವರಿ 29: ಮೂವರು ಮುಗ್ಧ ಮಕ್ಕಳೊಂದಿಗೆ ಮೈಸೂರು ನಗರಕ್ಕೆ ಆಗಮಿಸಿದ ಮಹಿಳೆಯೊಬ್ಬರು ಮಕ್ಕಳನ್ನು ಮನೆಯೊಂದರ ಮುಂಭಾಗದಲ್ಲಿ ಬಿಟ್ಟು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ಪುಣೆಯ ನಿವಾಸಿಯಾಗಿರುವ ಈ ಮಹಿಳೆಯ ಹೆಸರು ಮಾಲತಿ ಸಾಹು ಎಂದು ಗೊತ್ತಾಗಿದ್ದು, ಸುಮಾರು 35 ವರ್ಷ ವಯಸ್ಸಿನವರಾಗಿದ್ದಾರೆ. ಜನವರಿ 16 ರಂದು ರಾತ್ರಿ ಸುಮಾರು 9 ಗಂಟೆಯ ವೇಳೆಗೆ ನಗರದ ಯಾದವಗಿರಿ ಲೋಕೋ ಕಾಲೋನಿ ರೈಲ್ವೆ ವಸತಿ ಗೃಹ ಬಳಿ ಮೂರು ಮಕ್ಕಳೊಂದಿಗೆ ಆಗಮಿಸಿದ ಈ ಮಹಿಳೆ ತನ್ನ ಹೆಸರು ಮಾಲತಿ ಸಾಹು ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದರು.

ಮಕ್ಕಳ ನಾಪತ್ತೆ ಪ್ರಕರಣ: ಡಿಜಿಪಿಯಿಂದ ಸಮಗ್ರ ವರದಿ ಕೇಳಿದ ಹೈಕೋರ್ಟ್ಮಕ್ಕಳ ನಾಪತ್ತೆ ಪ್ರಕರಣ: ಡಿಜಿಪಿಯಿಂದ ಸಮಗ್ರ ವರದಿ ಕೇಳಿದ ಹೈಕೋರ್ಟ್

ಮಕ್ಕಳಾದ ಲಕ್ಷ್ (3) ಗಣೇಶ್ (2) ವರ್ಷ ಆದಿ(1) ಎಂದು ಪರಿಚಯಿಸಿ ಜೈಪುರ ರೈಲಿನಲ್ಲಿ ನಾನು ಆಗಮಿಸಿದ್ದೇನೆ. ಈ ದಿನ ರಾತ್ರಿ ಮನೆಯ ಮುಂಭಾಗದ ವರಾಂಡದಲ್ಲಿ ಮಲಗಿದ್ದು, ನಾಳೆ ಬೆಳಗ್ಗೆ ಹೋಗುತ್ತೇನೆ ಎಂದು ಹೇಳಿದ್ದರು. ಆದರೆ ಮಾರನೆಯ ದಿನ ಮೂವರು ಮಕ್ಕಳನ್ನು ಅಲ್ಲೇ ಬಿಟ್ಟು ನಾಪತ್ತೆಯಾಗಿದ್ದಾರೆ. ಆಕೆ ಬಿಟ್ಟು ಹೋಗಿರುವ ಮೂವರು ಮಕ್ಕಳನ್ನು ನಗರದ ಬಾಪೂಜಿ ಚಿಲ್ಡ್ರನ್ ಹೋಂಗೆ ಸೇರಿಸಿ ಅಲ್ಲಿ ವಸತಿ ಕಲ್ಪಿಸಲಾಗಿದೆ.

Woman left 3 children in Mysuru

ಆಕೆಯ ಪತಿ ಹೆಸರು ಗಜೇಂದ್ರ ಸಾಹು ಎಂದು ತಿಳಿದು ಬಂದಿದೆ. ವಿವಿ ಪುರಂ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಾಲತಿ ಸಾಹು ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.

 ನಾಪತ್ತೆಯಾದ ಮಕ್ಕಳ ಶೋಧಕ್ಕೆ ಮೋದಿ ಸರ್ಕಾರದ ವಿನೂತನ ಹೆಜ್ಜೆ ನಾಪತ್ತೆಯಾದ ಮಕ್ಕಳ ಶೋಧಕ್ಕೆ ಮೋದಿ ಸರ್ಕಾರದ ವಿನೂತನ ಹೆಜ್ಜೆ

ಮನೆಯವರು ನೀಡಿದ ಮಾಹಿತಿ ಮೇರೆಗೆ ರೈಲ್ವೆ ನಿಲ್ದಾಣಕ್ಕೆ ತೆರಳಿದ ಪೊಲೀಸರು ಸಿಸಿಟಿವಿ ಫೂಟೇಜ್ ಮೂಲಕ ಆಕೆಯ ಚಹರೆ ಪತ್ತೆ ಮಾಡಿದ್ದು, ಜೈಪುರ ರೈಲಿನಿಂದ ಬಂದಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಈಕೆಯ ಬಗ್ಗೆ ಮಾಹಿತಿ ದೊರೆತ ಕೂಡಲೇ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣಾಧಿಕಾರಿಗಳಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ .

English summary
35 year old lady left their 3 small children’s in unknown home and escaped midnight at Mysuru railway quarters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X