ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ವಿಪ್ರೋ ಬಿಪಿಓ, 750 ಉದ್ಯೋಗ ಸೃಷ್ಟಿ

By Gururaj
|
Google Oneindia Kannada News

ಮೈಸೂರು, ಜುಲೈ 16 : ವಿಪ್ರೋ ಈ ವರ್ಷದ ಅಂತ್ಯದಲ್ಲಿ ಮೈಸೂರಿನಲ್ಲಿ ಬಿಪಿಓ ಆರಂಭಿಸುವ ಸಾಧ್ಯತೆ ಇದೆ. ಇದರಿಂದ ಸುಮಾರು 750 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಕೇಂದ್ರ ಸರ್ಕಾರದ ಬಿಪಿಓ ಪ್ರಮೋಶನ್ ಸ್ಕೀಮ್‌ನ ಅಡಿ ಮೈಸೂರಿನಲ್ಲಿ ವಿಪ್ರೋ ಬಿಪಿಓ ಆರಂಭಿಸಲಿದೆ. 2018ರ ಅಂತ್ಯದ ವೇಳೆಗೆ ಘಕಟ ಸ್ಥಾಪನಗೆಯಾಗಲಿದೆ' ಎಂದ ಹೇಳಿದ್ದಾರೆ.

ವಿಪ್ರೋ ಸಿಇಒ ಅಬಿದ್ ಸಂಬಳದ ಪ್ಯಾಕೇಜ್ ಶೇ 34.5ರಷ್ಟು ಏರಿಕೆವಿಪ್ರೋ ಸಿಇಒ ಅಬಿದ್ ಸಂಬಳದ ಪ್ಯಾಕೇಜ್ ಶೇ 34.5ರಷ್ಟು ಏರಿಕೆ

ವಿಪ್ರೋ ಬಿಪಿಓನಿಂದ ಸುಮಾರು 750 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ವಿಪ್ರೋ ನಂತರ ಬೇರೆ-ಬೇರೆ ಕಂಪನಿಗಳು ಮೈಸೂರಿನಲ್ಲಿ ಬಂಡವಾಳ ಹೂಡಿಕೆ ಮಾಡುವ ಸಾಧ್ಯತೆ ಇದೆ.

Wipro to start BPO in Mysuru with 750 job creation

ಮೈಸೂರಿನಲ್ಲಿ ಈಗಾಗಲೇ ಇನ್ಫೋಸಿಸ್, ಎಲ್‌ ಅಂಡ್ ಟಿ ಮತ್ತು ವಿಪ್ರೋ ಕಂಪನಿಗಳಿವೆ. ಬೆಂಗಳೂರು-ಮೈಸೂರು 6 ಪಥದ ರಸ್ತೆ, ಮೈಸೂರು ವಿಮಾನ ನಿಲ್ದಾಣ ಇನ್ನಷ್ಟು ಅಭಿವೃದ್ಧಿಯಾದರೆ ಮತ್ತಷ್ಟು ಕಂಪನಿಗಳು ನಗರದಲ್ಲಿ ಬಂಡವಾಳ ಹೂಡಿಕೆ ಮಾಡವ ಸಾಧ್ಯತೆ ಇದೆ.

ವಿಪ್ರೋದಿಂದ 11000 ಕೋಟಿ ರು ಬೈಬ್ಯಾಕ್ ಘೋಷಣೆವಿಪ್ರೋದಿಂದ 11000 ಕೋಟಿ ರು ಬೈಬ್ಯಾಕ್ ಘೋಷಣೆ

ಐಟಿ ಕಂಪನಿಗಳು ಬೆಂಗಳೂರು ಹೊರತು ಪಡಿಸಿ ರಾಜ್ಯದ 2 ನೇ ದರ್ಜೆಯ ನಗರಗಳಲ್ಲಿಯೂ ಕಾರ್ಯಾರಂಭ ಮಾಡಬೇಖು ಎಂಬುದು ಕರ್ನಾಟಕ ಸರ್ಕಾರದ ಉದ್ದೇಶವಾಗಿದೆ. ಬೇರೆ ನಗರದಲ್ಲಿ ಕಂಪನಿ ಆರಂಭಿಸಲು ಸರ್ಕಾರ ಹಲವು ವಿನಾಯಿತಿಗಳನ್ನು ನೀಡುತ್ತಿದೆ.

English summary
Under the Centre's India BPO Promotion Scheme Wipro is expected to start its BPO operations in Mysuru. In the end of the 2018 BPO may start working and it may provide jobs to 750 people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X