ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಪ್ರೋ ಎಲ್ಇಡಿ ಉತ್ಪಾದಕ ಘಟಕ ಸ್ಥಗಿತ, ನೂರಾರು ಕಾರ್ಮಿಕರ ಸ್ಥಿತಿ ಅತಂತ್ರ

By Mahesh
|
Google Oneindia Kannada News

ಮೈಸೂರು, ಜುಲೈ 11 : ಅಜಿಂ ಪ್ರೇಮ್ ಜಿ ಒಡೆತನದ ವಿಪ್ರೋ ಕನ್ಸುಮರ್ ಕೇರ್ ಹಾಗೂ ಲೈಟಿಂಗ್ ಕೇರ್ ಘಟಕವನ್ನು ಮುಚ್ಚಿದೆ.

ಮೈಸೂರಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿಪ್ರೋ ಕಂಪನಿಯ ಸಿಎಫ್‌ಎಲ್, ಎಲ್‌ಇಡಿ ಹಾಗೂ ಟ್ಯೂಬ್‌ಲೈಟ್ ಘಟಕದಲ್ಲಿ ಉತ್ಪಾದನೆಯನ್ನು ನಿಲ್ಲಿಸಲಾಗಿದೆ.

Wipro Consumer Care and Lighting manufacturing plant shut down

ಸೋಮವಾರ ಸಂಜೆ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಕಾರ್ಖಾನೆಗೆ ಬೀಗ ಮುದ್ರೆ ಹಾಕಲಾಗಿದೆ. ಕಾರಣ ಕೇಳಿದರೆ, ಕಾರ್ಖಾನೆ ನಷ್ಟದಲ್ಲಿದೆ ಎಂಬ ಉತ್ತರ ಸಿಕ್ಕಿದೆ. ನೋಟಿಸ್ ನೀಡದೆ ಕಾರ್ಖಾನೆಗೆ ಬೀಗ ಜಡಿದಿದ್ದರಿಂದ 120ಕ್ಕೂ ಅಧಿಕ ಕಾರ್ಮಿಕ ಕುಟುಂಬಗಳು ಬೀದಿ ಪಾಲಾಗಿವೆ. ಕಾರ್ಖಾನೆ ಎದುರು ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

1999ರಲ್ಲಿ ಕಾರ್ಖಾನೆ ಆರಂಭವಾಗಿದ್ದು, ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನವನ್ನ ಪರಿಷ್ಕರಣೆ ಮಾಡಲಾಗುತ್ತದೆ ಎಂಬ ಭರವಸೆ ಸಿಕ್ಕಿತ್ತು. 2012ರಲ್ಲಿ ಮಾತ್ರ ವೇತನ ಪರಿಷ್ಕರಣೆಯಾಗಿತ್ತು. ನಿರಂತರ ಬೇಡಿಕೆ ನಡುವೆಯೂ ವೇತನ ಪರಿಷ್ಕರಣೆಯಾಗಿರಲಿಲ್ಲ. ಆದರೆ, ಈಗ ದಿಢೀರ್ ಆಗಿ ಕಾರ್ಖಾನೆ ಮುಚ್ಚಲಾಗಿದೆ.

ಅದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪ್ರೋ ಸಂಸ್ಥೆ, ವರ್ಷದ ಹಿಂದೆಯೇ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್ ಎಸ್) ಘೋಷಿಸಲಾಗಿತ್ತು. ಎರಡು ತಿಂಗಳ ಹಿಂದೆ ನೋಟಿಸ್ ಜಾರಿಗೊಳಿಸಲಾಗಿತ್ತು. ಹೀಗಾಗಿ, ಯಾರಿಗೂ ಅನ್ಯಾಯ ಮಾಡುವ ಉದ್ದೇಶ ಸಂಸ್ಥೆಗಿಲ್ಲ ಎಂದಿದೆ.

English summary
Wipro Consumer Care and Lighting, part of Azim Premji owned Wipro Enterprises has shut down its manufacturing plant in Mysore affecting 84 employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X