• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿ.23 'ಮೈಸೂರು ಮಾಗಿ ಉತ್ಸವ': ಹಬ್ಬಕ್ಕೆ ಸಿದ್ಧವಾದ ಅರಮನೆ ನಗರಿ

By Yashaswini
|

ಮೈಸೂರು, ಡಿಸೆಂಬರ್ 15 : ಈಗಾಗಲೇ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಡೆಸಿ ಯಶಸ್ಸು ಕಂಡ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಭಾಗಿದಾರರ ಸಹಯೋಗದೊಂದಿಗೆ ಡಿ.23 ರಿಂದ ಜ.1 ರವರೆಗೆ ಮೈಸೂರು 'ಮಾಗಿ ಉತ್ಸವ'ವನ್ನು ಆಯೋಜಿಸಲಾಗಿದೆ.

ಈ ಹಿನ್ನೆಲೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್ ಮಾಗಿ ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಮೈಸೂರು ದಸರಾ ಮಾದರಿಯಲ್ಲಿಯೇ ಮೈಸೂರು ಮಾಗಿ ಉತ್ಸವವನ್ನು ವಿನೂತನ ಉತ್ಸವವಾಗಿ ಸೃಜಿಸಿ, ಮೈಸೂರು ವಿಶ್ವ ಪ್ರವಾಸಿ ಭೂಪಟದಲ್ಲಿ ಅಗ್ರ ಸ್ಥಾನಿಯನ್ನಾಗಿಸಲು ಉದ್ದೇಶಿಸಲಾಗಿದೆ ಎಂದರು.

ಏನಿದು ಮಾಗಿಯ ಉತ್ಸವ?

2018 ನೂತನ ವರ್ಷವನ್ನ ವಿನೂತನವಾಗಿ ಬರಮಾಡಿಕೊಳ್ಳಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಅರಮನೆ ಆಡಳಿತ ಮಂಡಳಿ ಡಿಸೆಂಬರ್ 23 ರಿಂದ ಜನವರಿ 1 ರವರೆಗೆ 9 ದಿನಗಳ ಕಾಲ 'ಮೈಸೂರು ಮಾಗಿ ಉತ್ಸವ' ನಡೆಯಲಿದೆ. ಈ ಉತ್ಸವ ಕೇವಲ ಒಂದೆರೆಡು ಕಾರ್ಯಕ್ರಮಗಳಿಗೆ ಸಿಮೀತವಾಗಿಲ್ಲ. ದಸರಾ ಮಹೋತ್ಸವದಂತೆ ನಾನಾ ಕಾರ್ಯಕ್ರಮಗಳ ರಸದೌತಣವೇ ಆಗಿರುವುದರಿಂದ ಮೈಸೂರಿನ ಜನತೆಯೊಂದಿಗೆ ಪ್ರವಾಸಿಗರೂ ಇದರ ರುಚಿಯನ್ನ ಸವಿಯಬಹುದಾಗಿದೆ

ಮಾಗಿಯ ಉತ್ಸವದ ವಿಶೇಷತೆಗಳೇನು?

ಮೈಸೂರು ಅರಮನೆ ಮಂಡಳಿಯ ವತಿಯಿಂದ ಡಿ.23 ರಿಂದ ಜ.1 ರವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನದ ಅಂಗವಾಗಿ ಕೆಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹಳೆಯ ಮರದ ಅರಮನೆ ಮಾದರಿ 20 ಅಡಿ ಎತ್ತರದ ಅಳತೆಯಲ್ಲಿ, ಸಿಂಹಾಸನ ಅಳತೆ 15 ಅಡಿ, ಮಹಾರಾಜರು ಕುಳಿತಿರುವ ಹಾಗೆ ಹಾಗೂ ಮಹಾರಾಜರ 6 ಸೇವಕರನ್ನು ಮಣ್ಣಿನಿಂದ ನಿರ್ಮಿಸಿರುವ ಆಕೃತಿಗಳನ್ನು ಹೂಗಳಿಂದ ಅಲಂಕರಿಸಲಾಗುವುದು ಎಂದು ತಿಳಿಸಿದರು. ಸುಮಾರು 33 ಜಾತಿಯ 10 ಸಾವಿರ ಗಿಡಗಳನ್ನು ಮಣ್ಣಿನ ಕುಂಡಗಳಲ್ಲಿ ಜೋಡಿಸಿ ಅಲಂಕರಿಸುವುದು. ಆನೆಗಾಡಿ ಮತ್ತು ಆನೆ ಆಕೃತಿಯನ್ನು ಅದರಲ್ಲಿ 4 ಜನ ಸಂಗೀತಗಾರರು ಕುಳಿತು ಸಂಗೀತವನ್ನು ನುಡಿಸುವ ಮಾದರಿಯಲ್ಲಿ ಮಣ್ಣಿನಿಂದ ನಿರ್ಮಿಸಿರುವ ಆಕೃತಿಗಳನ್ನು ಹೂಗಳಿಂದ ಅಲಂಕರಿಸಲಾಗುವುದು ಎಂದರು.

3 ಪ್ರವೇಶ ದ್ವಾರಗಳನ್ನು ಗೋಪುರದ ಮಾದರಿಯಲ್ಲಿ ಆಕೃತಿಗಳನ್ನು ನಿರ್ಮಿಸಿ ಹೂವುಗಳಿಂದ ಅಲಂಕರಿಸುವುದು. ಫಲಪುಷ್ಪ ಪ್ರದರ್ಶನದ ಅಂಗವಾಗಿ ಮುಖ್ಯ ಅತಿಥಿಗಳಿಗೆ ಹಾಗೂ ಗಣ್ಯರಿಗೆ ಸುಮಾರು 200 ಔಷಧಿಯುಕ್ತ ಗಿಡಗಳನ್ನು ವಿತರಣೆ ಮಾಡುವುದು, ಫಲಪುಷ್ಪ ಪ್ರದೇಶದಲ್ಲಿ ಮಕ್ಕಳ ಆಕರ್ಷಣೆಗಾಗಿ ಕಾಳಿಂಗ ಸರ್ಪ, ಆಮೆ, ನಕ್ಷತ್ರ ಮೀನು, ಅಕ್ಟೋಪಸ್, ಜೈ ಹುಮಾನ್, ಸುಖೋಯ್ ಏರ್ ಕ್ರಾಫ್ಟ್-18 ಅಡಿ ಎತ್ತರ, ಛೋಟಾ ಭೀಮ್ ಮತ್ತು ಛೋಟಾ ಕೃಷ್ಣ ಆಕೃತಿಗಳನ್ನು ನಿರ್ಮಿಸಿ ಹೂ ಮತ್ತು ತರಕಾರಿಗಳಿಂದ ಸಿಂಗಾರಗೊಳಿಸಲಾಗುವುದು ಎಂದರು.

ಫಲಪುಷ್ಪ ಪ್ರದರ್ಶನ ನಡೆಯುವ 10 ದಿನಗಳ ಅವಧಿಯಲ್ಲಿ ಮಧ್ಯದಲ್ಲಿ ಆಕೃತಿಗಳು ಹಾಗು ವಿನ್ಯಾಸಗಳಿಗೆ ಬಳಸಲಾಗಿರುವ ಹೂಗಳನ್ನು ಒಂದು ಬಾರಿ ಬದಲಾಯಿಸಿ ತಾಜಾತನವನ್ನು ಕಾಪಾಡಿಕೊಳ್ಳಲಾಗುವುದು. ಅಂದಾಜು 3.5 ಲಕ್ಷ ಹೂಗಳಿಂದ ಅಲಂಕರಿಸಲಾಗುವುದು ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

ಡಿ.23 ರಿಂದ 25 ರವರೆಗೆ ಪ್ರತಿದಿನ ಸಂಜೆ 7 ರಿಂದ 9ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಡಿ.23 ರಂದು ಮೈಸೂರು ಮೋಹನ್ ಮತ್ತು ಮೋಹನ್ ವಾದ್ಯವೃಂದದವರಿಂದ ಸಂಗೀತ ಸಂಭ್ರಮ' ನಂದಿತಾ, ದಿವ್ಯ ರಾಘವನ್, ಅನುರಾಧ ಭಟ್, ಅಜಯ್ ವಾರಿಯರ್, ವ್ಯಾಸರಾಜ್ ಸೋಸಲೆ, ಚಿನ್ಮಯ ಅತ್ರೆ ಹಾಗೂ ಪ್ರಖ್ಯಾತ ಮ್ಯೂಸಿಷಿಯನ್ಸ್ ತಂಡದಿಂದ,

ಡಿ.24 ರಂದು ಝೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಗಾಯಕರಾದ ಹರ್ಷ ಮತ್ತು ತಂಡದಿಂದ ಸರಿಗಮಪ ಸೌರಭ', ಡಿ.25 ರಂದು ಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್ ಮತ್ತು ತಂಡದವರಿಂದ ಸುಮಧುರ ಕನ್ನಡ ಗೀತೆಗಳ ಸಂಗೀತ ಸಂಜೆ', ಡಿ.26 ರಂದು ಸಂಜೆ 6 ರಿಂದ 7 ರವರೆಗೆ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಇವರಿಂದ ವಿವಿಧ ಸಂಗೀತ ನೃತ್ಯ ಕಾರ್ಯಕ್ರಮ, ಸಂಜೆ 7 ರಿಂದ 9ರವರೆಗೆ ಸುನೀತಾ ಚಂದ್ರಕುಮಾರ್, ರಘುಲೀಲಾ ಸಂಗೀತಾ ಮಂದಿರ ಇವರಿಂದ ಗಾಯಯಾನ, ಡಿ.27 ರಂದು ಸಂಜೆ 7 ರಿಂದ 9ರವರೆಗೆ ಪುತ್ತೂರು ನರಸಿಂಹನಾಯಕ್ ಮತ್ತು ಬಳಗದವರಿಂದ ಭಾವಗೀತೆಗಳು, ವಚನ, ದಾಸರ ಪದಗಳು, ಜಾನಪದ ಗೀತೆಗಳ ಸುಗಮ ಸಂಗೀತ ಮತ್ತು ಲಘು ಸಂಗೀತ, ಡಿ.31 ರಂದು ಸಂಜೆ 7 ರಿಂದ 9ರವರೆಗೆ ಪೊಲೀಸ್ ಇಲಾಖೆಯ ವತಿಯಿಂದ ಕನ್ನಡ ಮತ್ತು ಆಂಗ್ಲ ಪೊಲೀಸ್ ಬ್ಯಾಂಡ್ ಹಾಗೂ ಮೈಸೂರು ಅರಮನೆ ಮಂಡಳಿಯ ವತಿಯಿಂದ ಹೊಸ ವರ್ಷಾಚರಣೆಯ ಪ್ರಯುಕ್ತ ಬಣ್ಣಗಳ ಚಿತ್ತಾರಗಳಿಂದ ಕೂಡಿದ ಪಟಾಕಿ ಸಿಡಿಸುವ ಕಾರ್ಯಕ್ರಮ. ಜ.1 ರಂದು ಬೆಳಿಗ್ಗೆ 7 ರಿಂದ 9 ರವರೆಗೆ ಫಲಪುಷ್ಪ ಪ್ರದರ್ಶನದೊಂದಿಗೆ ಸಂಜೆ 7 ರಿಂದ 9 ರವರೆಗೆ ಅರಮನೆಯಲ್ಲಿ ವಿದ್ಯುತ್ ದೀಪಾಲಂಕಾರವಿರುತ್ತದೆ.

ಬೊಂಬೆಗಳ ಪ್ರದರ್ಶನ

ಕೃಷ್ಣನ ದಶಾವತಾರಗಳು, ಸತ್ಯಂ ಶಿವಂ ಸುಂದರಂ, ಹಬ್ಬಗಳು, ನವದುರ್ಗೆಯರು, ಸಾಂಸ್ಕೃತಿಕ ಗೊಂಬೆಗಳು, ಸಮುದ್ರ ಮಂಥನ ಕುರಿತ ಮಾದರಿಯ ಬೊಂಬೆಗಳನ್ನು ಫಲಪುಷ್ಪ ಪ್ರದರ್ಶನದ ಬೊಂಬೆ ಮನೆಯಲ್ಲಿ ಪ್ರದರ್ಶಿಸಲಾಗುವುದು.

ಮಕ್ಕಳ ಹಬ್ಬ

ಮಕ್ಕಳ ಹಬ್ಬದಲ್ಲಿ 250ಕ್ಕೂ ಹೆಚ್ಚು ಮಕ್ಕಳನ್ನೊಳಗೊಂಡ ಕರಗ, ಕಂಸಾಳೆ, ನಗಾರಿ, ಚಿತ್ರ ಬಿಡಿಸುವುದು, ವೇಷಭೂಷಣ ಸ್ಪರ್ಧೆ, 10 ಜತೆ ಮಕ್ಕಳಿಂದ ಕುಸ್ತಿ ಪಂದ್ಯಾವಳಿ, ಚರಕ, ಕುಂಬಾರ ಚಕ್ರ, ಪ್ರಾಣಿ, ಪಕ್ಷಿ, ಚಿಟ್ಟೆಗಳ ಮುಖವಾಡ ತಯಾರಿಕೆ (ಓರಿಗಾಮಿ-ತಿರುಗಾಮಿ), ಮಕ್ಕಳಿಗೆ ಯೋಗಾಸನ ಶಿಬಿರ ಹಾಗೂ ದೇಸಿ ಕ್ರೀಡೆಗಳನ್ನು ಒಳಗೊಂಡ 6 ಮಳಿಗೆಗಳನ್ನು 3 ದಿನಗಳಿಗೆ ನಿರ್ಮಿಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ವಿಶೇಷ ಚೇತನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಛಾಯಾಚಿತ್ರ ಪ್ರದರ್ಶನ

ಅರಮನೆ ಆವರಣದಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನದಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಏಪರ್ಡಿಸಲಾಗಿದೆ. ಹಾಗೆಯೇ ಪುರಾತತ್ವ ಸಂಗ್ರಹಾಲಯಗಳ ಇಲಾಖಾ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಛಾಯಾಚಿತ್ರಗಳ ಹಾಗೂ ಐತಿಹಾಸಿಕ ದಾಖಲೆಗಳ ಪ್ರದರ್ಶನ ಏರ್ಪಡಿಸಲಾಗಿದೆ.

ತಿಂಡಿಪೋತರಿಗೆ ಹಬ್ಬ

ಆಹಾರ ಮತ್ತು ಸರಬರಾಜು ಇಲಾಖೆ ವತಿಯಿಂದ ಡಿ.27 ರಿಂದ 29 ರವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ನಂಜರಾಜ ಬಹದ್ದೂರ್ ಛತ್ರದಲ್ಲಿ ಜನಪ್ರಿಯ ಮಾಗಿ ಆಹಾರ ಹಾಗೂ ಕೇಕ್ ಉತ್ಸವ ಆಯೋಜಿಸಲಾಗಿದೆ. 27ರಂದು ಬೆಳಿಗ್ಗೆ 11 ಗಂಟೆಗೆ ಉತ್ಸವವನ್ನು ಉದ್ಘಾಟನೆಗೊಳ್ಳಲಿದೆ. ವಿವಿಧ ಸ್ಪರ್ಧೆಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಜನಪ್ರಿಯ ಮಾಗಿ ಆಹಾರ ಹಾಗೂ ಕೇಕ್ ಉತ್ಸವದಲ್ಲಿ ಭಾಗವಹಿಸುವ ಹೋಟೆಲ್, ರೆಸ್ಟೊರೇಂಟ್, ಬೇಕರಿ, ಕಾಂಡಿಮೆಂಟ್ಸ್, ಸಿಹಿ ತಿನಿಸು ಮಾರಾಟಗಾರರು, ಸಾರ್ವಜನಿಕರು ಹಾಗೂ ಗೃಹ ತಯಾರಕರು ಡಿ.20 ರೊಳಗೆ ಆಹಾರ ಮತ್ತು ಸರಬರಾಜು ಇಲಾಖೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕರಿಗೆ ಅರ್ಜಿ ಸಲ್ಲಿಸಬೇಕು. ಇನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಪಾರಂಪರಿಕ ಸೈಕಲ್ ಸವಾರಿಯನ್ನು ಡಿ.26 ರಿಂದ 28ರವರೆಗೆ ಬೆಳಿಗ್ಗೆ 7 ರಿಂದ 9ರವರೆಗೆ ಆಯೋಜಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Winter festival in Mysuru will be started from Dec 23rd to Jan 1st. Mysuru district administration planned to celebrate the festival differently with various cultural programmes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more