ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಚ್ಛನಗರಿ ಪಟ್ಟಕ್ಕೆ ಮತ್ತೊಮ್ಮೆ ಸಜ್ಜಾಗುತ್ತಿದೆ ಸಾಂಸ್ಕೃತಿಕ ನಗರಿ ಮೈಸೂರು

|
Google Oneindia Kannada News

ಮೈಸೂರು, ಜನವರಿ 2: ಈಗಾಗಲೇ ಸ್ವಚ್ಛ ನಗರಿ ಎಂಬ ಪಟ್ಟವನ್ನು ತನ್ನದಾಗಿಸಿಕೊಂಡಿದ್ದ ಮೈಸೂರು ಮತ್ತೊಮ್ಮೆ ಈ ಸ್ಪರ್ಧೆಗೆ ಸಜ್ಜಾಗುತ್ತಿದೆ. ಸ್ವಚ್ಛ ನಗರಿ ಸ್ಥಾನ ನಿರ್ಧರಿಸಲು ಕೈಗೊಳ್ಳುವ ಸ್ವಚ್ಛತಾ ಸಮೀಕ್ಷೆ (ಸ್ವಚ್ಛ ಸರ್ವೇಕ್ಷಣ-2019) ದೇಶದಾದ್ಯಂತ ಜನವರಿ 4ರಿಂದ 31ರವರೆಗೆ ನಡೆಯಲಿದೆ.

ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಈ ಬಾರಿ ಸ್ಪರ್ಧೆಯ ಪಾಯಿಂಟ್‌ಗಳು ಮತ್ತು ಮಾನದಂಡದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಕಳೆದ ಸಲ ಒಟ್ಟು 4,000 ಅಂಕಗಳನ್ನು ನಿಗದಿಪಡಿಸಿ, ಅತಿಹೆಚ್ಚು ಅಂಕಗಳನ್ನು ಪಡೆದ ನಗರಗಳನ್ನು ಆಧರಿಸಿ ರಾಂಕ್ ಪಟ್ಟಿ ಪ್ರಕಟಿಸಿತ್ತು.

ಈ ಬಾರಿ ಒಟ್ಟು 5,000 ಅಂಕಗಳನ್ನು ನಿಗದಿಪಡಿಸಲಾಗಿದೆ. ಸಮೀಕ್ಷಾ ತಂಡ ಈ ಹಿಂದಿನ ವರ್ಷಗಳಲ್ಲಿ ಮೂರು ಹಂತಗಳಲ್ಲಿ ಸಮೀಕ್ಷೆ ನಡೆಸಿ ಅಂಕಗಳನ್ನು ನೀಡುತ್ತಿದ್ದರೆ, ಈ ಬಾರಿ ನಾಲ್ಕು ಹಂತಗಳಲ್ಲಿ ಸಮೀಕ್ಷೆ ನಡೆಯಲಿದೆ.

ಮೊದಲ ಹಂತದಲ್ಲಿ ಸಮೀಕ್ಷಾ ತಂಡವು ಪಾಲಿಕೆಯಿಂದ ಸ್ವಚ್ಛತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಎರಡನೇ ಹಂತದಲ್ಲಿ ಪ್ರಮುಖ ಸ್ಥಳಗಳಲ್ಲಿ ಕಸ ನಿರ್ವಹಣೆ ರೀತಿ, ಪೌರಕಾರ್ಮಿಕರ ಕಾರ್ಯನಿರ್ವಹಣೆ ಕುರಿತು ಮಾಹಿತಿ ಕಲೆ ಹಾಕಲಿದೆ.

ಸ್ವಚ್ಛ ನಗರಿ ಪಟ್ಟ ಕೈ ತಪ್ಪಿದ್ದೇಕೆ? ಹೀಗಿದೆ ಜನಪ್ರತಿನಿಧಿಗಳ ಉತ್ತರಸ್ವಚ್ಛ ನಗರಿ ಪಟ್ಟ ಕೈ ತಪ್ಪಿದ್ದೇಕೆ? ಹೀಗಿದೆ ಜನಪ್ರತಿನಿಧಿಗಳ ಉತ್ತರ

ಮೂರನೇ ಹಂತದಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ ಮಾಹಿತಿ ಪಡೆಯುತ್ತದೆ. ಈ ಬಾರಿ ಇವುಗಳ ಜತೆಗೆ 'ಸರ್ಟಿಫಿಕೇಶನ್' ಎಂಬ ಹೊಸ ವಿಭಾಗವನ್ನು ಸೇರಿಸಲಾಗಿದೆ. ಪ್ರತಿ ನಾಲ್ಕು ವಿಭಾಗಗಳಿಗೆ ತಲಾ 1,250 ಅಂಕಗಳನ್ನು ನಿಗದಿಪಡಿಸಲಾಗಿದೆ. ಮುಂದೆ ಓದಿ...

 1000 ಅಂಕಗಳು

1000 ಅಂಕಗಳು

ಸರ್ಟಿಫಿಕೇಶನ್ ವಿಭಾಗದಲ್ಲಿ ಬಯಲು ಶೌಚ ಮುಕ್ತ ನಗರ ಮತ್ತು ಘನತ್ಯಾಜ್ಯ ನಿರ್ವಹಣೆ ಎಂಬ ಎರಡು ಉಪವಿಭಾಗಗಳನ್ನು ಮಾಡಲಾಗಿದೆ. ನಗರವು ಬಯಲು ಶೌಚ ಮುಕ್ತ ಎಂದು ಘೋಷಣೆಯಾಗಿದ್ದರೆ ಪೂರ್ಣ ಅಂಕ ಲಭಿಸಲಿದೆ. ಘನತ್ಯಾಜ್ಯ ಸಂಗ್ರಹ, ತ್ಯಾಜ್ಯ ವಿಲೇವಾರಿಗೆ ಮಾಡಿರುವ ಕ್ರಮಗಳನ್ನು ಆಧರಿಸಿ 'ಸ್ಟಾರ್‌' ನೀಡಲಾಗುತ್ತದೆ. ಸಮೀಕ್ಷಾ ತಂಡವು ಒಂದರಿಂದ ಏಳರವರೆಗೆ 'ಸ್ಟಾರ್‌'ಗಳನ್ನು ನೀಡುತ್ತದೆ. ಸೆವೆನ್ ಸ್ಟಾರ್‌ ಪಡೆಯುವ ನಗರಕ್ಕೆ 1000 ಅಂಕಗಳು ಲಭಿಸುತ್ತವೆ.

 ಮೈಸೂರು ಸ್ವಚ್ಛನಗರಿ app ಬಳಸಿ ನಗದು ಬಹುಮಾನ ಗೆಲ್ಲಿ! ಮೈಸೂರು ಸ್ವಚ್ಛನಗರಿ app ಬಳಸಿ ನಗದು ಬಹುಮಾನ ಗೆಲ್ಲಿ!

 ಬಯಲು ಶೌಚ ಮುಕ್ತ ನಗರ

ಬಯಲು ಶೌಚ ಮುಕ್ತ ನಗರ

ಸ್ವಚ್ಚ ಸರ್ವೇಕ್ಷಣ್ ಅಂಕಗಳು ಮತ್ತು ಮಾನದಂಡದಲ್ಲಿ ಬದಲಾವಣೆಯಾಗಿರುವುದು ನಮ್ಮ ಮೇಲೆ ಹೆಚ್ಚಿನ ಪರಿಣಾಮ ಬೀರದು. ಸ್ವಚ್ಛನಗರಿ ಪಟ್ಟವನ್ನು ಮತ್ತೆ ಪಡೆಯುವ ನಿಟ್ಟಿನಲ್ಲಿ ಎಲ್ಲ ತಯಾರಿ ನಡೆಸಲಾಗಿದೆ. ಈ ಬಾರಿ ಹೊಸದಾಗಿ 'ಸರ್ಟಿಫಿಕೇಶನ್' ವಿಭಾಗ ಸೇರಿಸಲಾಗಿದೆ. ಮೈಸೂರು ನಗರವು ಬಯಲು ಶೌಚ ಮುಕ್ತ ನಗರ ಎಂದು ಈಗಾಗಲೇ ಘೋಷಣೆಯಾಗಿರುವುದರಿಂದ ಅಂಕಗಳಿಗೆ ಯಾವುದೇ ತೊಂದರೆಯಾಗದು ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ತಿಳಿಸಿದರು.

 ಸ್ವಚ್ಛ ನಗರಿ ಪಟ್ಟಕ್ಕೇರಲು ಮೈಸೂರು ಮೇಯರ್ ರಿಂದ ಮಾಸ್ಟರ್ ಪ್ಲಾನ್ ಸ್ವಚ್ಛ ನಗರಿ ಪಟ್ಟಕ್ಕೇರಲು ಮೈಸೂರು ಮೇಯರ್ ರಿಂದ ಮಾಸ್ಟರ್ ಪ್ಲಾನ್

 ಘನ ತ್ಯಾಜ್ಯ ನಿರ್ವಹಣೆಯಲ್ಲೂ ಮುಂದು

ಘನ ತ್ಯಾಜ್ಯ ನಿರ್ವಹಣೆಯಲ್ಲೂ ಮುಂದು

ಘನ ತ್ಯಾಜ್ಯ ನಿರ್ವಹಣೆಯಲ್ಲೂ ನಾವು ಮುಂದಿದ್ದೇವೆ. ಹೊಸ ಹಾಗೂ ನವೀನ ಮಾದರಿಗಳನ್ನು ಅನುಸರಿಸುತ್ತಿದ್ದೇವೆ ಎಂದ ಪಾಲಿಕೆ ಆರೋಗ್ಯಾಧಿಕಾರಿಗಳು ಈ ಬಾರಿ ಸೆವೆನ್ ಸ್ಟಾರ್‌ ವಿಭಾಗದಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದೇವೆ. ಸೆವೆನ್ ಸ್ಟಾರ್‌ ಪಡೆದು ಪೂರ್ಣ 1000 ಅಂಕಗಳನ್ನು ಪಡೆಯವ ವಿಶ್ವಾಸವಿದೆ. ಸ್ವಚ್ಛ ಸರ್ವೇಕ್ಷಣ್ ಗೆ ಸಜ್ಜಾಗಲು ಈಗಾಗಲೇ ಸಾಕಷ್ಟು ಸಭೆಗಳು ನಡೆದಿವೆ. ಹಲವು ಜಾಗೃತಿ ಕಾರ್ಯಕ್ರಗಳನ್ನು ನಡೆಸಲಾಗಿದೆ. ಸಂಬಂಧಪಟ್ಟ ಎಲ್ಲರನ್ನು ಸೇರಿಸಿ ಶೀಘ್ರದಲ್ಲೇ ಸಭೆ ಕರೆಯಲಾಗುವುದು. ಅವರ ಸಲಹೆಗಳನ್ನು ಪಡೆದು ಮುಂದಿನ ಹೆಜ್ಜೆ ಇಡಲಾಗುವುದು ಎಂದರು.

ಅಗ್ರಸ್ಥಾನ ಪಡೆದುಕೊಂಡಿತ್ತು

ಅಗ್ರಸ್ಥಾನ ಪಡೆದುಕೊಂಡಿತ್ತು

ಸ್ವಚ್ಛ ಸರ್ವೇಕ್ಷಣ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಪೋಸ್ಟರ್ ಗಳು, ಹೋರ್ಡಿಂಗ್ ಗಳನ್ನು ಸ್ಥಾಪಿಸಲಾಗಿದೆ. ಮೈಸೂರು ನಗರವು ಅಗತ್ಯವಿರುವ ಎಲ್ಲಾ ಮಾನದಂಡಗಳನ್ನು ಪೂರೈಸಿದೆ. ಸ್ವಚ್ಛತಾ ಆಪ್ ಅನ್ನು ಸಾವಿರಾರು ಮಂದಿ ಬಳಸುತ್ತಿದ್ದಾರೆ. ಈ ಬಾರಿಯೂ 4000 ಕ್ಕೂ ಅಧಿಕ ನಗರಗಳು ಸ್ವಚ್ಛ ಸರ್ವೇಕ್ಷಣ್ ನಲ್ಲಿ ಪಾಲ್ಗೊಳ್ಳಲಿವೆ. 2018ರಲ್ಲಿ 4,203 ನಗರಗಳು ಪಾಲ್ಗೊಂಡಿದ್ದವು. 2017 ರಲ್ಲಿ 434 ನಗರಗಳು ಮತ್ತು 2016 ರಲ್ಲಿ 73 ನಗರಗಳು ಭಾಗವಹಿಸಿದ್ದವು. ಮೈಸೂರು ನಗರ ಕಳೆದ ಸಲ 'ಸ್ವಚ್ಛ ನಗರ' ರಾಂಕಿಂಗ್ ನಲ್ಲಿ 3ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ಆದರೆ, ದೇಶದಲ್ಲಿ ಒಟ್ಟಾರೆಯಾಗಿ ಎಂಟನೇ ಸ್ಥಾನ ಲಭಿಸಿತ್ತು. ಇಂದೋರ್ ಮೊದಲ ಸ್ಥಾನ ಗಳಿಸಿತ್ತು. ಮೊದಲ ಎರಡು ವರ್ಷ ಮೈಸೂರಿಗೆ ಅಗ್ರಸ್ಥಾನ ದೊರೆತಿದ್ದರೆ, 2017 ರಲ್ಲಿ ಇಂದೋರ್ 'ಸ್ವಚ್ಛನಗರಿ' ಪಟ್ಟ ತನ್ನದಾಗಿಸಿಕೊಂಡಿತ್ತು.

English summary
Clean City and clean-up survey will be held across the country from January 4 to 31. Mysuru also ready to get a clean city award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X