ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ವಿಕಿಯಿಂದ ಪಾರಂಪರಿಕ ಕಟ್ಟಡ ಚಿತ್ರ ಸ್ಪರ್ಧೆ

By Mahesh
|
Google Oneindia Kannada News

ಮೈಸೂರು, ಸೆ.23: ವಿಕಿಪೀಡಿಯ ಸಮುದಾಯ ಬೆಂಗಳೂರಿನಲ್ಲಿ ಜನಪ್ರಿಯಗೊಂಡ ಫೋಟೋ ವಾಕ್ ಸರಣಿಯನ್ನು ಈಗ ಸಾಂಸ್ಕೃತಿಕ ನಗರ ಮೈಸೂರಿಗೂ ವಿಸ್ತರಿಸಿದೆ. Wiki Loves Monuments ಪಾರಂಪರಿಕ ಕಟ್ಟಡ ಚಿತ್ರ ಸ್ಪರ್ಧೆ ಈ ತಿಂಗಳ ಕೊನೆಯಲ್ಲಿ ನಡೆಯಲಿದೆ.

ಫೋಟೋ ವಾಕ್ ಸರಣಿ ಮೂಲಕ ಪ್ರಮುಖ ಐತಿಹಾಸಿಕ, ಪಾರಂಪರಿಕ ಕಟ್ಟಡಗಳ ಚಿತ್ರಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಸಿಗುವಂತೆ ಮಾಡುವುದು ವಿಕಿ ಕಾಮನ್ಸ್ ಫೋಟೋ ವಾಕ್ ನ ಉದ್ದೇಶವಾಗಿದೆ.

ಈ ಬಾರಿ ಮೈಸೂರಿಗೆ ಸಮೀಪವಿರುವ ಶ್ರೀರಂಗಪಟ್ಟಣದಲ್ಲಿ Wiki Loves Monuments ಹೆಸರಿನಡಿಯಲ್ಲಿ ಫೋಟೊ ವಾಕ್ ನಡೆಯಲಿದೆ. ಸುಮಾರು 10ಕ್ಕೂ ಅಧಿಕ ಪಾರಂಪರಿಕ ಕಟ್ಟಡಗಳನ್ನು ಕೆಮೆರಾದಲ್ಲಿ ಸೆರೆ ಹಿಡಿಯಲು ಯೋಜನೆ ಹಾಕಿಕೊಳ್ಳಲಾಗಿದೆ. ಸುಮಾರು 4-5 ಗಂಟೆಗಳ ಕಾಲ ನಡಿಗೆ ಇರಲಿದ್ದು ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇಗುಲದ ಬಳಿ ಸೆ.29ಕ್ಕೆ ಬೆಳಗ್ಗೆ 9.30ಕ್ಕೆ ಫೊಟೋ ವಾಕ್ ಆರಂಭಗೊಳ್ಳಲಿದೆ.

Wiki Loves Monuments 2013, Mysore Wikipedia Events

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : http://www.wikilovesmonuments.in/
ಸಂಪರ್ಕ: ಕಿರಣ್ ರವಿಕುಮಾರ್
ಇಮೇಲ್ : [email protected]
ದೂರವಾಣಿ: +91-98869 37627

ಏನಿದು ಫೋಟೋ ವಾಕ್ : ವಿಕಿಪೀಡಿಯದ ಮುಕ್ತ ಚಿತ್ರಕೋಶ ಸಂಗ್ರಹ ತಾಣ ವಿಕಿ ಕಾಮನ್ಸ್ ನಲ್ಲಿ ಚಿತ್ರಗಳನ್ನು ತುಂಬಿಸಿ ಮುಕ್ತವಾಗಿ ಬಳಕೆಗೆ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಬೇರೆ ದೇಶಗಳಲ್ಲಿ ವಿಕಿ ಕಾಮನ್ಸ್ ವಾಕ್ ನಲ್ಲಿ ಸಾವಿರಾರು ಜನ ಸೇರುವುದುಂಟು. ಇದರ ಮುಂದುವರೆದ ಭಾಗ ಅಥವಾ ಪೂರಕವಾಗಿ Wiki Loves Monuments ಆಯೋಜಿಸಲಾಗುತ್ತಿದ್ದು, ಭಾರತದ ವಿವಿಧೆಡೆ ಪಾರಂಪರಿಕ ಕಟ್ಟಡಗಳ ಚಿತ್ರಗಳನ್ನು ಸೆರೆ ಹಿಡಿದು ಸಂಗ್ರಹಿಸಲಾಗುತ್ತದೆ.ಇದರಲ್ಲಿ ಸ್ಪರ್ಧೆ ಕೂಡಾ ನಡೆಸಲಾಗುತ್ತಿದ್ದು ವಿಜೇತರ ಚಿತ್ರಗಳು ವಿಕಿ ಕಾಮನ್ಸ್ ಚಿತ್ರಕೋಶದಲ್ಲಿ ಪ್ರದರ್ಶಿತವಾಗುತ್ತದೆ.

Wiki Loves Monuments ಯೋಜನೆಗೆ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಕಲ್ಚರಲ್ ಹೆರಿಟೇಜ್ (INTACH) ಸಂಸ್ಥೆ ಬೆಂಬಲ ವ್ಯಕ್ತಪಡಿಸಿದೆ.

English summary
Wiki Loves Monuments is an international photo contest around cultural heritage monuments in September. Everybody can participate and improve Wikipedia in their local and regional neigbourhood. Cultural heritage is everywhere around you, you just need to look and learn!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X