ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಲು ಕಾರಣ ಇದೇನಾ?

|
Google Oneindia Kannada News

ಮೈಸೂರು, ಏಪ್ರಿಲ್ 19:ಸರಣಿ ರಜೆಯ ಮೂಡಿನಲ್ಲಿದ್ದ ಜನರ ಉತ್ಸಾಹವೂ ಏರಿತ್ತು. ಆದರೆ ಅದೇ ಉತ್ಸಾಹವನ್ನು ಮತಗಟ್ಟೆಗೆ ಹೋಗಲು ಮೈಸೂರಿಗರು ತೋರಲಿಲ್ಲ. ಹೀಗಾಗಿ ಗುರುವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನದವರೆಗೆ ಕೆಲ ಮತಗಟ್ಟೆಗಳಲ್ಲಿ ಬೆರಳೆಣಿಕೆ ಮತದಾರರು ಕಂಡುಬಂದರು.

2014ರಲ್ಲಿ ಶೇ 67.30 ಮತದಾನವಾದರೆ, ಈ ಬಾರಿ ಶೇ.68.85ರಷ್ಟು ಮತದಾನವಾಗಿದೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಮತದಾರರ ಪ್ರಮಾಣ 74ರಷ್ಟಿತ್ತು. ಆಗಿದ್ದ ಉತ್ಸಾಹ ಈಗ ಕಾಣಲಿಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಹುತೇಕ ಹೋಟೆಲ್, ರೆಸ್ಟೋರೆಂಟ್ ಗಳು ಭರ್ತಿಯಾಗಿದ್ದವು. ಮತದಾನಕ್ಕಾಗಿ ರಜೆ ಘೋಷಿಸಿದ್ದರಿಂದ ಹೆಚ್ಚಿನವರು ಕುಟುಂಬ ಸಮೇತ ಬಂದು ಬೆಳಗಿನ ಉಪಾಹಾರ ಸವಿಯುವುದರಲ್ಲಿ ತೊಡಗಿದ್ದರು. ಕುರ್ಚಿ ಸಿಗದೆ ಸರತಿ ಸಾಲಿನಲ್ಲಿ ಕಾಯುತ್ತಾ ನಿಂತಿದ್ದರು. ಆದರೆ, ಮತಗಟ್ಟೆ ಕೇಂದ್ರಗಳು ಖಾಲಿ ಹೊಡೆಯುತ್ತಿದ್ದವು. ನಗರದಲ್ಲಿ ಉದ್ಯೋಗದಲ್ಲಿ ಇದ್ದವರು ರಜೆ ಸಿಕ್ಕ ಖುಷಿಯಲ್ಲಿ ತಮ್ಮ ಊರುಗಳಿಗೆ ಹೋಗಿದ್ದರು.

ಹೀಗಾಗಿ, ಆರಂಭದಿಂದಲೇ ಮತದಾನ ಮಂದಗತಿಯಲ್ಲಿ ಸಾಗಿತು. ಯುವಕರಿಗಿಂತ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿದ್ದದು ಕಂಡುಬಂತು. ಮಧ್ಯಾಹ್ನದ ವೇಳೆಗೆ ಮತದಾನ ಚುರುಕಾಯಿತು. ಯುವಕರ ದಂಡು ಮತಗಟ್ಟೆಯತ್ತ ದಾಪುಗಾಲು ಇಟ್ಟಿತು. ವೃದ್ಧರು ಹಾಗೂ ಅಂಗವಿಕಲರಿಗಾಗಿ ಬಹುತೇಕ ಮತಗಟ್ಟೆಗಳಲ್ಲಿ ವ್ಹೀಲ್‌ಚೇರ್‌ ವ್ಯವಸ್ಥೆ ಮಾಡಲಾಗಿತ್ತು. ಅವರಿಗೆ ಕಾರ್ಯಕರ್ತರು ಸಹಾಯ ಮಾಡಿದರು. ಕೆಲ ಮಹಿಳೆಯರು ಮಕ್ಕಳನ್ನು ಎತ್ತಿಕೊಂಡೇ ಮತಗಟ್ಟೆಗೆ ಬಂದಿದ್ದರು.

 ಮೈಸೂರು: ಕೆ.ಆರ್. ಮತಗಟ್ಟೆಯಲ್ಲಿ ಮತದಾರರ ಹೆಸರು ನಾಪತ್ತೆ, ಗೊಂದಲ ಮೈಸೂರು: ಕೆ.ಆರ್. ಮತಗಟ್ಟೆಯಲ್ಲಿ ಮತದಾರರ ಹೆಸರು ನಾಪತ್ತೆ, ಗೊಂದಲ

ಮಧ್ಯಾಹ್ನದ ವೇಳೆಗೆ ಬಿಸಿಲ ಧಗೆಯೂ ಹೆಚ್ಚಿತ್ತು. ಹೀಗಾಗಿ, ಮತಗಟ್ಟೆ ಗಳ ಬಳಿ ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚಿತ್ತು. ಎಳನೀರು, ಮಜ್ಜಿಗೆ, ಲಸ್ಸಿ ಭರದಿಂದ ಮಾರಾಟವಾದವು. ಕೆಲವೆಡೆ ಕಾರ್ಯಕರ್ತರು ಮತದಾರರಿಗೆ ತಂಪು ಪಾನೀಯ ಸರಬರಾಜು ಮಾಡಿದರು.

2018ರ ಚುನಾವಣೆಯಲ್ಲೂ ನಗರ ಪ್ರದೇಶದ ಚಾಮರಾಜ, ಕೃಷ್ಣರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿತ್ತು. ಹೀಗಾಗಿ, ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್‌ ಸಮಿತಿ ಹಲವು ಕಸರತ್ತು ನಡೆಸಿತ್ತು. ಇಷ್ಟಾದರೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬರಲಿಲ್ಲ.

 ನೂರಾರು ಮಂದಿ ಮತದಾನದಿಂದ ವಂಚಿತ

ನೂರಾರು ಮಂದಿ ಮತದಾನದಿಂದ ವಂಚಿತ

ಇನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನೂರಾರು ಮಂದಿ ಮತದಾನದಿಂದ ವಂಚಿತರಾಗಿದ್ದಾರೆ. ಹಲವು ವರ್ಷ ಗಳಿಂದ ಮತದಾನ ಮಾಡಿರುವ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಾಗಿರುವ ಬಗ್ಗೆ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಮೈಸೂರು ಕೊಡಗು ಲೋಕಸಭಾ ಕ್ಷೇತ್ರ: ಕೆಲ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಮೈಸೂರು ಕೊಡಗು ಲೋಕಸಭಾ ಕ್ಷೇತ್ರ: ಕೆಲ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

 ಪ್ರಚಾರ ಮಾಡಿದ ಸರ್ಕಾರ

ಪ್ರಚಾರ ಮಾಡಿದ ಸರ್ಕಾರ

ಕೋಟ್ಯಾಂತರ ರೂ. ಖರ್ಚು ಮಾಡಿ ಮತದಾರರು ಖಡ್ಡಾಯವಾಗಿ ಮತದಾನ ಮಾಡಬೇಕು ಎಂದು ಸರ್ಕಾರ ಪ್ರಚಾರ ಮಾಡಿದೆ. ಆದರೆ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿರುವ ಬಗ್ಗೆ ಅನೇಕರು ಮತದಾನ ದಿನವಾದ ಏ.18ರಂದೇ ಆರೋಪಿಸಿದ್ದರು.

 ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆಯೇ?

ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆಯೇ?

ಕಳೆದ 20 ವರ್ಷಗಳಿಂದ ಒಂದೇ ಮನೆಯಲ್ಲೇ ವಾಸವಾಗಿರುವ ಮತದಾರರು ಹಲವು ಚುನಾವಣೆಗಳಲ್ಲಿ ಈಗಾಗಲೇ ಮತ ಚಲಾಯಿಸಿದ್ದಾರೆ. ಆದರೆ ಈ ಮತದಾರರನ್ನು ಮತದಾರರ ಪಟ್ಟಿಯಿಂದ ಈಗ ತೆಗೆದುಹಾಕಲಾಗಿದೆ ಎಂದು ಮತದಾರರಲ್ಲಿ ಗೊಂದಲ ಉಂಟು ಮಾಡಿ, ಮತದಾನದ ಬಗ್ಗೆ ನಿರುತ್ಸಾಹ ತೋರುವಂತೆ ಮಾಡಲಾಗಿದೆ ಎಂದು ಅನೇಕರು ಆರೋಪಿಸಿದ್ದಾರೆ

 ಇಳಿಮುಖವಾಗಲು ಇದು ಕಾರಣವಾಗಿರಬಹುದು

ಇಳಿಮುಖವಾಗಲು ಇದು ಕಾರಣವಾಗಿರಬಹುದು

ಮತದಾರರ ಪಟ್ಟಿಯಲ್ಲಿನ ಈ ಲೋಪದಿಂದ ಹಲವು ಮತದಾರರು ಒಟ್ಟುಗೂಡಿ ನಮಗೆ ಮತದಾನಕ್ಕೆ ಅವಕಾಶ ಕೊಡಿ ಎಂದು ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಆದರೂ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದರಿಂದ ಮತದಾನ ಮಾಡಲು ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ಇದರಿಂದ ನಮ್ಮ ಹಕ್ಕಿನಿಂದ ನಾವು ವಂಚಿತರಾಗಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಜನರಿಗೆ ಅವಕಾಶವಿಲ್ಲದೆ ಇರುವುದು ದುರಂತ ಎಂದು ಬೇಸರದಿಂದಲೇ ಹಲವರು ತಿಳಿಸಿದ್ದಾರೆ. ಇದು ಒಂದು ಮತದಾನದ ಪ್ರಮಾಣ ಇಳಿಮುಖವಾಗಲು ಕಾರಣವಾಗಿರಬಹುದು ಎನ್ನುತ್ತಾರೆ.

English summary
Lok Sabha Elections 2019:In Mysuru district, the polling percentage was 68.85. This time voting decreased than last time. Here's a detailed information about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X