ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಬೆಂಬಲ ಕೇಳಿದ ಬಿಎಸ್‌ವೈ; ಸೋಮಶೇಖರ್ ಹೇಳಿದ್ದೇನು?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 30; " ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಎಲ್ಲೆಲ್ಲಿ ಅಭ್ಯರ್ಥಿ ಹಾಕಿಲ್ಲ ಅಂತಹ ಕಡೆಗಳಲ್ಲಿ ಮಾತ್ರವೇ ಅವರ ಬೆಂಬಲ ಕೇಳುತ್ತಿದ್ದಾರೆ. ಮೈಸೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಕೂಡ ಇರುವುದರಿಂದ ಆ ಪ್ರಶ್ನೆ ಬರಲ್ಲ, ಇಲ್ಲಿ ಜೆಡಿಎಸ್ ಸಹಕಾರ ಕೋರುವ ವಿಚಾರ ನಮ್ಮ ಮುಂದಿಲ್ಲ" ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.

ಮಂಗಳವಾರ ಮೈಸೂರಿನಲ್ಲಿ ಮಾತನಾಡಿದ ಸಚಿವರು, "ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆದು ಗೆಲುವು ಸಾಧಿಸುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪರಿಷತ್ ಚುನಾವಣೆ: ಮೈಸೂರು ಜೆಡಿಎಸ್ ಅಭ್ಯರ್ಥಿ ಕಿಡ್ನಿ ಮಾರಾಟಗಾರನೇ?ಪರಿಷತ್ ಚುನಾವಣೆ: ಮೈಸೂರು ಜೆಡಿಎಸ್ ಅಭ್ಯರ್ಥಿ ಕಿಡ್ನಿ ಮಾರಾಟಗಾರನೇ?

"ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಈಗಾಗಲೇ ಎಲ್ಲಾ ಕಡೆ ಪಂಚಾಯಿತಿ ಮಟ್ಟದಲ್ಲಿ ಸುತ್ತಾಡಿ ಬಂದಿದ್ದಾರೆ. ನಾವು ಕೂಡ ಯಾರಿಗೂ ಎರಡನೇ ಪ್ರಾಶಸ್ತ್ಯ ಮತ ಕೇಳುತ್ತಿಲ್ಲ. ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲ್ಲುವುದು ನಮ್ಮ ಗುರಿಯಾಗಿದ್ದು, ನಮ್ಮ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸವಿದೆ" ಎಂದರು.

ಶಿವಮೊಗ್ಗ; ವಿಧಾನ ಪರಿಷತ್ ಮತದಾನ ಬಹಿಷ್ಕಾರಶಿವಮೊಗ್ಗ; ವಿಧಾನ ಪರಿಷತ್ ಮತದಾನ ಬಹಿಷ್ಕಾರ

S. T. Somashekar

ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕಾಗಿ ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಎಸ್. ಟಿ. ಸೋಮಶೇಖರ್, "ಜೆಡಿಎಸ್ ಅಭ್ಯರ್ಥಿ ಸಿ. ಎನ್. ಮಂಜೇಗೌಡ ಕಿಡ್ನಿ ಮಾರಾಟಗಾರ. ಕಿಡ್ನಿ ಮಾರಾಟದಲ್ಲಿ ಈತ ನಂಬರ್ ಒನ್" ಎಂದು ಆರೋಪಿಸಿದ್ದರು.

"ಒಂದೇ ಸೈಟ್‌ ಅನ್ನು ನಾಲ್ಕು ಜನರಿಗೆ ಮಾರಾಟ ಮಾಡಿದ ಮೋಸಗಾರ. ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಮೈಸೂರು-ಚಾಮರಾಜನಗರ ಜನರಿಗೆ ಮಾಡಿದ ಅವಮಾನ" ಎಂದು ವಾಗ್ದಾಳಿ ನಡೆಸಿದ್ದರು.

ಸಚಿವರ ಸ್ಪಷ್ಟನೆ; ಮೈಸೂರು ಜೆಡಿಎಸ್ ಅಭ್ಯರ್ಥಿ ವಿರುದ್ಧ ತಾವು ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಜೆಡಿಎಸ್ ಅಭ್ಯರ್ಥಿ ಮಂಜೇಗೌಡ ವಿರುದ್ದ ತಾವು ಮಾಡಿರೋ ಆರೋಪಕ್ಕೆ ಈಗಲೂ ಬದ್ಧನಾಗಿದ್ದೇನೆ. ಅಗತ್ಯ ಬಿದ್ದಾಗ ಅವರು ಮಾಡಿರುವ ಅಕ್ರಮದ ದಾಖಲೆಗಳನ್ನು ಹೊರ ಹಾಕುತ್ತೇನೆ. ಮಂಜೇಗೌಡ ಬರೆದಿರೋ ಪತ್ರ ನನ್ನ ಕೈ ಸೇರಿಲ್ಲ. ಪತ್ರ ಬಂದ ಬಳಿಕ ನಾನು ಅದಕ್ಕೆ ಸೂಕ್ತ ಉತ್ತರ ನೀಡುತ್ತೇನೆ" ಎಂದು ಹೇಳಿದರು.

ಪರಿಷತ್; ರಾತ್ರೋರಾತ್ರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆಡಿಎಸ್ ಅಭ್ಯರ್ಥಿ! ಪರಿಷತ್; ರಾತ್ರೋರಾತ್ರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜೆಡಿಎಸ್ ಅಭ್ಯರ್ಥಿ!

ಓಮಿಕ್ರಾನ್; ಕೋವಿಡ್ ರೂಪಾಂತರಿ ಓಮಿಕ್ರಾನ್ ಹರಡುವಿಕೆ ಬಗ್ಗೆ ಮಾತನಾಡಿದ ಸಚಿವರು, "ಮೈಸೂರು ಜಿಲ್ಲೆಯಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ. ಆದರೆ ಎಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ನಾವು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇವೆ. ರಾಜ್ಯದ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಈ ಸಂಬಂಧ ಸಿಎಂ ಅವರು ನೇರವಾಗಿ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಜಿಲ್ಲಾಧಿಕಾರಿಗಳು ಕೂಡ ಹೆಚ್ಚಿನ ನಿಗಾ ವಹಿಸಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ" ಎಂದರು.

"ಸಿದ್ದರಾಮಯ್ಯ, ಜಿ. ಟಿ. ದೇವೇಗೌಡ ಇಬ್ಬರೂ ಲವ್ ಬರ್ಡ್ಸ್ ಥರ‌. ಇಬ್ಬರಿಗೂ ಯಾವಾಗ ಲವ್ ಆಗುತ್ತೆ, ಯಾವಾಗ ಡಿವೋರ್ಸ್ ಆಗುತ್ತೆ ಅವರಿಗೆ ಗೊತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಅಂತಾ ಪೂಜೆ ಮಾಡಿದ ತಕ್ಷಣ ಮುಖ್ಯಮಂತ್ರಿ ಆಗಲ್ಲ. ಪೂಜೆ ಮಾಡಿ ಮುಖ್ಯಮಂತ್ರಿ ಆಗೋ ಹಾಗಿದ್ದರೆ ಎಲ್ಲರೂ ಪೂಜೆ ಮಾಡಿಸುತ್ತಿದ್ದರು. ದೇವಸ್ಥಾನದ ಪೂಜೆಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ಅವರು ಜೊತೆಯಾಗಿ ಹೋಗಿದ್ದಾರೆ ಅಷ್ಟೇ" ಎಂದು ಸೋಮಶೇಖರ್ ತಿಳಿಸಿದರು.

ಡಿಸೆಂಬರ್ 10ರಂದು ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಜೆಡಿಎಸ್‌ನಿಂದ ಸಿ. ಎನ್. ಮಂಜೇಗೌಡ, ಕಾಂಗ್ರೆಸ್‌ನಿಂದ ಡಾ. ತಿಮ್ಮಯ್ಯ, ಬಿಜೆಪಿಯಿಂದ ರಘು ಕೌಟಿಲ್ಯ ಅಭ್ಯರ್ಥಿಗಳು.

English summary
Mysuru district in-charge and cooperation minister S. T. Somashekar explained why BJP need JD(S) support in MLC elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X