ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರೆಯಲ್ಲಿ ಈ ಬಾರಿ ದ್ರೋಣನ ಸ್ಥಾನವನ್ನು ತುಂಬುವವರು ಯಾರು?

|
Google Oneindia Kannada News

ಮೈಸೂರು, ಏಪ್ರಿಲ್ 30:ಎರಡು ಬಾರಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದ 38ರ ಹರೆಯದ ದ್ರೋಣ ಸಾವನ್ನಪ್ಪಿದ್ದಾನೆ. ಇದೀಗ ಅವನ ಸ್ಥಾನವನ್ನು ಆನೆ ಧನಂಜಯ ತುಂಬಬಹುದೇ ಎಂಬ ಪ್ರಶ್ನೆ ಸದ್ಯ ಉದ್ಭವಿಸಿದೆ.

2017ರ ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದ ದ್ರೋಣ ಮುಂದಿನ ದಿನಗಳಲ್ಲಿ ಅಂಬಾರಿ ಹೊರುವ ಭರವಸೆಯನ್ನು ಹುಟ್ಟು ಹಾಕಿದ್ದ. ಆದರೆ ಹಠಾತ್ ನಿಧನದಿಂದ ದ್ರೋಣನ ಸ್ಥಾನವನ್ನು ಯಾರು ತುಂಬಬಹುದು ಎಂಬ ಪ್ರಶ್ನೆ ಇದೀಗ ಆರಂಭವಾಗಿದೆ.

ದಸರಾ ಆನೆ ದ್ರೋಣ ಸಾವಿನ ಸುತ್ತ ಅನುಮಾನದ ಹುತ್ತದಸರಾ ಆನೆ ದ್ರೋಣ ಸಾವಿನ ಸುತ್ತ ಅನುಮಾನದ ಹುತ್ತ

ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಆನೆಗಳಲ್ಲಿ ಆಗ ಭೀಮ, ದ್ರೋಣ ಆನೆಗಳೇ ಅತ್ಯಂತ ಸಣ್ಣವರಾಗಿದ್ದರು. ವರಲಕ್ಷ್ಮಿ ಅತ್ಯಂತ ಹಿರಿಯ ಆನೆಯಾಗಿತ್ತು ಎಂಬುದನ್ನು ನಾವು ಗಮನಿಸಬಹುದು.

Which elephant will take Drona place on this time at Mysuru dasara?

ಆನೆ ದ್ರೋಣನ ಅನಿರೀಕ್ಷಿತ ಸಾವಿನಿಂದ ದಸರಾ ಮಹೋತ್ಸವದ ಆನೆಗಳ ಸಂಖ್ಯೆಯಲ್ಲೇನೂ ವ್ಯತ್ಯಾಸವಾಗಿಲ್ಲ. ಏಕೆಂದರೆ ಕಳೆದ ವರ್ಷ ಆನೆ ಧನಂಜಯ ಮೊದಲ ಬಾರಿಗೆ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ. ಸಕ್ಕರೆ ಬೈಲ್ ಶಿಬಿರದಲ್ಲಿರುವ ಆನೆ ಧನಂಜಯನಿಗೆ ಪೂರ್ಣ ತರಬೇತಿ ನೀಡುವ ಆಲೋಚನೆ ಅರಣ್ಯ ವಲಯ ಅಧಿಕಾರಿಗಳಿಗೆ ಇದೆ. ಆದರೆ ದಸರಾ ಮಹೋತ್ಸವದ ಸಂದರ್ಭದಲ್ಲಿ ಸಮಿತಿ ಯಾವ ನಿರ್ಧಾರ ಕೈಗೊಳ್ಳಲಿದೆ ಹಿನ್ನೆಲೆಯಲ್ಲಿ ಯೋಜನೆ ನಡೆಯಲಿದೆ.

 ಮತ್ತಿಗೋಡು ಶಿಬಿರದಲ್ಲಿ ಮೈಸೂರು ದಸರಾ ಆನೆ ದ್ರೋಣ ಸಾವು ಮತ್ತಿಗೋಡು ಶಿಬಿರದಲ್ಲಿ ಮೈಸೂರು ದಸರಾ ಆನೆ ದ್ರೋಣ ಸಾವು

ಈ ಕುರಿತಾಗಿ ದಸರಾ ಸಂದರ್ಭಕ್ಕೂ ಮೊದಲೇ ಅರಣ್ಯ ಇಲಾಖೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲವೆಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಸಿದ್ದರಾಮಪ್ಪ ತಿಳಿಸಿದ್ದಾರೆ. ಮೈಸೂರು ದಸರಾ ಮಹೋತ್ಸವ ಸಾಮಾನ್ಯ ಆಚರಣೆಯಲ್ಲ. ವಿಶ್ವವಿಖ್ಯಾತ ಮೆರವಣಿಗೆ ಅದರಲ್ಲಿ ಭಾಗವಹಿಸುವ ಆನೆಗಳಿಗೆ ಕೆಲವು ಅರ್ಹತೆಗಳಿವೆ. ಅದ್ಯಾವುದೆಂದರೆ ಎತ್ತರಕ್ಕೆ ನೋಡಲು ಲಕ್ಷಣವಾಗಿರಬೇಕು. ಉತ್ತಮ ದೇಹದಾರ್ಢ್ಯ ಹೊಂದಿರಬೇಕು.ದೃಢವಾದ ಮಾನಸಿಕ ಸ್ಥಿರತೆ ಇರಬೇಕು ಎನ್ನುತ್ತಾರೆ ಅಧಿಕಾರಿಗಳು.

 ದಸರಾ ಆನೆ ದ್ರೋಣ ಸಾವಿಗೆ ಕಂಬನಿ ಮಿಡಿದ ಗಣ್ಯರು ದಸರಾ ಆನೆ ದ್ರೋಣ ಸಾವಿಗೆ ಕಂಬನಿ ಮಿಡಿದ ಗಣ್ಯರು

ಹಾಗಾದರೆ ಮುಂದಿನ ದಿನಗಳಲ್ಲಿ ದ್ರೋಣನ ಸ್ಥಾನವನ್ನು ಯಾವ ಆನೆ ತುಂಬಲಿದೆ ಎಂಬುದನ್ನು ಈ ಬಾರಿ ದಸರಾ ಸಮಿತಿ ತೀರ್ಮಾನ ಕೈಗೊಳ್ಳಲಿದೆ.

English summary
After death of Elephant Drona know question has been raised that, which elephant will acquire his place in this year of Dassara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X