ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿ ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಸ್ಪೆಷಲ್ ಏನೇನಿದೆ?

|
Google Oneindia Kannada News

ಮೈಸೂರು, ಸೆಪ್ಟೆಂಬರ್ 18: ಮೈಸೂರು ದಸರಾ ಚಲನ ಚಿತ್ರೋತ್ಸವದಲ್ಲಿ ಸಿನಿಮಾಸಕ್ತರ ಸ್ಮರಣೆಯಲ್ಲಿ ಸದಾ ಉಳಿಯುವಂತೆ ಈ ಬಾರಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮುಖ್ಯವಾಗಿ ಇದೇ ಮೊದಲ ಬಾರಿಗೆ ಸಿನಿಮಾಸಕ್ತರ ಪ್ರತಿಭೆ ಒರೆಗೆ ಹಚ್ಚಲು ಚಿತ್ರಕಥಾ ಕಾರ್ಯಾಗಾರ, ಹಾಗೂ ಕಿರು ಚಲನಚಿತ್ರಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ನಗರದ ವಾರ್ತಾ ಮತ್ತು ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾಂಗಣದಲ್ಲಿ ದಸರಾ ಚಲನಚಿತ್ರ ಉಪಸಮಿತಿ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ದಸರಾ ಚಲನಚಿತ್ರೋತ್ಸವ ಉಪ ವಿಶೇಷಾಧಿಕಾರಿ ಬಿ.ಎನ್.ಗಿರೀಶ್ ದಸರಾ ಚಲನಚಿತ್ರೋತ್ಸವ ಕುರಿತಂತೆ ಸಮಗ್ರ ಮಾಹಿತಿ ನೀಡಿದರು.

ಚಿತ್ರ ರಂಗದಲ್ಲೂ ವಿಕೇಂದ್ರೀಕರಣ ಅಗತ್ಯವಿದೆ: ನಾಗತಿಹಳ್ಳಿ ಚಂದ್ರಶೇಖರ್ಚಿತ್ರ ರಂಗದಲ್ಲೂ ವಿಕೇಂದ್ರೀಕರಣ ಅಗತ್ಯವಿದೆ: ನಾಗತಿಹಳ್ಳಿ ಚಂದ್ರಶೇಖರ್

ಚಿತ್ರಕಥೆಯ ಕಾರ್ಯಾಗಾರವನ್ನು ಸೆ. 20, 21 ಮತ್ತು 22ರಂದು ಆಯೋಜಿಸಲಾಗಿದೆ. ಸೆ.20ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ. ನಿರ್ದೇಶಕರಾದ ಪಿ.ಶೇಷಾದ್ರಿ, ಬಿ.ಎಸ್.ಲಿಂಗದೇವರು, ಆದರ್ಶ್ ಈಶ್ವರಪ್ಪ, ಬಿ.ಸುರೇಶ ಅವರು ಉಪನ್ಯಾಸ ನೀಡುವರು. ಕಾರ್ಯಾಗಾರದ ಕೊನೆಯ ದಿನ ಸೆ.22 ಭಾನುವಾರದ ಗೋಷ್ಠಿಗಳಲ್ಲಿ ಸಾಹಿತಿ ಮತ್ತು ಪತ್ರಕರ್ತ ಗಿರೀಶ್ ರಾವ್ ಹತ್ವಾರ್ (ಜೋಗಿ) ಅವರು ಉಪನ್ಯಾಸ ನೀಡುವರು.

What Special At The Mysore Dasara Film Festival This Time

ಕಿರು ಚಿತ್ರಗಳ ಸ್ಪರ್ಧೆ: ಕಿರು ಚಿತ್ರಗಳ ಸ್ಪರ್ಧೆಯನ್ನು ಈ ಬಾರಿ ಆಯೋಜಿಸಲಾಗಿದ್ದು, ಐದು ನಿಮಿಷಗಳ ಅವಧಿಗೆ ಸೀಮಿತವಾಗಿ ನಿರ್ಮಿಸಿರುವ ಕಿರು ಚಲನಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ: 9964585008 ಸಂಪರ್ಕಿಸಬಹುದು.

ದಸರಾ ಚಲನಚಿತ್ರ ಪ್ರದರ್ಶನ: ದಸರಾ ಮಹೋತ್ಸವದ ಅಂಗವಾಗಿ ಏರ್ಪಡಿಸುವ ಚಲನಚಿತ್ರೋತ್ಸವದ ಪ್ರದರ್ಶನಗಳು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3ರವರೆಗೆ ಐದು ದಿನಗಳ ಕಾಲ ನಡೆಯಲಿವೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು, ಇತರ ಹಲವು ಗಣ್ಯರು ಭಾಗವಹಿಸುವರು. ಖ್ಯಾತ ಚಲನಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಖ್ಯಾತ ಚಲನಚಿತ್ರ ನಟಿ ಆಶಿಕಾ ರಂಗನಾಥ್ ಈ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ತಾರಾ ಮೆರುಗು ನೀಡಲಿದ್ದಾರೆ.

ಮೈಸೂರು ವಿವಿಯ 3 ಚಿತ್ರಗಳು ಪ್ರಕೃತಿ ಸಾಕ್ಷ್ಯ ಚಲನಚಿತ್ರೋತ್ಸವಕ್ಕೆ ಆಯ್ಕೆಮೈಸೂರು ವಿವಿಯ 3 ಚಿತ್ರಗಳು ಪ್ರಕೃತಿ ಸಾಕ್ಷ್ಯ ಚಲನಚಿತ್ರೋತ್ಸವಕ್ಕೆ ಆಯ್ಕೆ

ಸೆ.29ರಿಂದ ಅ.3ರವರಗೆ ಮಾಲ್ ಆಫ್ ಮೈಸೂರಿನಲ್ಲಿರುವ ಐನಾಕ್ಸ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಕನ್ನಡದ ಸಿನಿಮಾಗಳು ಸೇರಿದಂತೆ ಜನಪ್ರಿಯ ಕನ್ನಡ ಸಿನಿಮಾ, ಕಲಾತ್ಮಕ ಸಿನಿಮಾಗಳು, ರಾಷ್ಟ್ರಮಟ್ಟದಲ್ಲಿ ಜನಪ್ರಿಯಗೊಂಡಿರುವ ಭಾರತೀಯ ಸಿನಿಮಾಗಳು, ವಿವಿಧ ದೇಶಗಳಲ್ಲಿ ನಿರ್ಮಾಣಗೊಂಡ ವಿಶ್ವದ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಸಿನಿಮಾ ವೀಕ್ಷಣೆಗಾಗಿ ಒಟ್ಟು 5 ದಿನಕ್ಕೆ 60 ಪ್ರದರ್ಶನಗಳಿಗೆ 400 ರೂ, ಒಂದು ದಿನದ ಸಂಪೂರ್ಣ ಪ್ರದರ್ಶನಗಳಿಗೆ 100 ರೂ ನಿಗದಿಪಡಿಸಲಾಗಿದೆ.

English summary
The Mysore Dasara film festival this time has been designed to keep the filmmakers creative. So many new programmes will be arranged this time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X