ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಟಿ ದೇವೇಗೌಡ ಅವರ ಮುಂದಿನ ರಾಜಕೀಯ ನಡೆ ಏನು

|
Google Oneindia Kannada News

ಮೈಸೂರು, ಮೇ 4: ಒಂದೆಡೆ ಬಿಜೆಪಿ ಎಲ್ಲ ರಾಜಕೀಯ ಗೋಜು ಗೊಂದಲಗಳ ನಡುವೆಯೂ ಮೈಕೊಡವಿಕೊಂಡು ಮುಂದಿನ 2023ರ ವಿಧಾನಸಭಾ ಚುನಾವಣೆಗೆ ತಯಾರಾಗುತ್ತಿದ್ದು, ಹಳೆ ಮೈಸೂರು ಭಾಗದ ಕಾಂಗ್ರೆಸ್ ಮತ್ತು ಜೆಡಿಎಸ್ ನ ಪ್ರಭಾವಿ ನಾಯಕರಿಗೆ ಗಾಳ ಹಾಕುವ ತಯಾರಿಯಲ್ಲಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ತಂತ್ರಕ್ಕೆ ಜೆಡಿಎಸ್ ಅತಂತ್ರ!ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ತಂತ್ರಕ್ಕೆ ಜೆಡಿಎಸ್ ಅತಂತ್ರ!

ತಟಸ್ಥ ನಿಲುವು ತಾಳಿರುವ ಜಿಟಿಡಿ

ತಟಸ್ಥ ನಿಲುವು ತಾಳಿರುವ ಜಿಟಿಡಿ

ಸದ್ಯದ ಮಟ್ಟಿಗೆ ಮೈಸೂರು ಭಾಗದಲ್ಲಿ ತಾವಿರುವ ಪಕ್ಷ ಬಿಟ್ಟು ಬೇರೆ ಪಕ್ಷದತ್ತ ಮುಖ ಮಾಡಲು ತಯಾರಾಗಿರುವ ಪ್ರಭಾವಿ ನಾಯಕರು ಯಾರಾದರೂ ಇದ್ದರೆ ಅದು ಜಿ.ಟಿ.ದೇವೇಗೌಡರು ಎಂಬುದನ್ನು ಯಾರು ಬೇಕಾದರೂ ಸುಲಭವಾಗಿ ಹೇಳಿ ಬಿಡಬಹುದು. ಅದಕ್ಕೆ ಕಾರಣವೂ ಇದೆ. ಸದ್ಯಕ್ಕೆ ಅವರು ಜೆಡಿಎಸ್‌ನಲ್ಲಿದ್ದಾರೆ. ಆದರೆ, ಅವರು ಅದೇ ಪಕ್ಷದಲ್ಲಿ ಇದ್ದಾರೆ ಅಥವಾ, ಬಿಟ್ಟಿದ್ದಾರೆ ಎನ್ನುವುದು ಕಷ್ಟವಾಗಿದೆ. ಕಳೆದ ಮೂರು ವರ್ಷಗಳಿಂದ ಅವರು ತಟಸ್ಥ ನಿಲುವಿನೊಂದಿಗೆ ತಾನಾಯಿತು ತನ್ನ ಕೆಲಸವಾಯಿತು ಎನ್ನುವಂತಿದ್ದಾರೆ.


ಜೆಡಿಎಸ್ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ ಇತರೆ ಪಕ್ಷಗಳೊಂದಿಗೂ ಗುರುತಿಸಿಕೊಳ್ಳದೆ ಸಂಪೂರ್ಣ ಮೌನವಾಗಿದ್ದಾರೆ. ಇದರ ನಡುವೆ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳು ಹರಡಿತ್ತಲ್ಲದೆ, ಇನ್ನೇನು ಕೈ ಹಿಡಿದೇ ಬಿಟ್ಟರು ಎನ್ನುವ ಸುದ್ದಿಗಳು ಕೂಡ ಬಂದವು. ಆದರೆ ಅವರು ಬೇರೆ ಪಕ್ಷವನ್ನು ಸೇರುವ ಯಾವುದೇ ಬೆಳೆವಣಿಗೆಗಳು ಇದುವರೆಗೆ ಆದಂತೆ ಕಾಣುತ್ತಿಲ್ಲ.

ಕಾಂಗ್ರೆಸ್ ಗೆ ಸೇರುವ ಬಗ್ಗೆ ಸ್ಪಷ್ಟಪಡಿಸಿಲ್ಲ

ಕಾಂಗ್ರೆಸ್ ಗೆ ಸೇರುವ ಬಗ್ಗೆ ಸ್ಪಷ್ಟಪಡಿಸಿಲ್ಲ

ಆದರೆ ಸಿದ್ದರಾಮಯ್ಯ ಅವರು ಮೈಸೂರಿಗೆ ಬಂದಾಗಲೆಲ್ಲ ಅಲ್ಲಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಜಿ.ಟಿ.ದೇವೇಗೌಡರು ಭಾಗಿಯಾಗಿ ಇಬ್ಬರು ಒಟ್ಟಾಗಿ ವೇದಿಕೆಗಳನ್ನು ಹಂಚಿಕೊಳ್ಳುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಆದರೆ ನಾನು ಕಾಂಗ್ರೆಸ್ ಗೆ ಸೇರುತ್ತೇನೆ ಎಂಬುದಾಗಿ ಜಿ.ಟಿ.ದೇವೇಗೌಡರು ಕೂಡ ಸ್ಪಷ್ಟ ಪಡಿಸಿಲ್ಲ. ಬಹುಶಃ ಅವರು ಅದನ್ನು ಗೌಪ್ಯವಾಗಿಟ್ಟಿದ್ದಾರೋ ಅಥವಾ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರಾ? ಗೊತ್ತಿಲ್ಲ.


ಜಿ.ಟಿ.ದೇವೇಗೌಡರು ತನ್ನ ರಾಜಕೀಯ ಭವಿಷ್ಯಕ್ಕಿಂತ ಹೆಚ್ಚಾಗಿ ಮಗ ಜಿ.ಡಿ.ಹರೀಶ್ ಗೌಡರಿಗೆ ರಾಜಕೀಯ ಭವಿಷ್ಯ ಕಲ್ಪಿಸುವುದರತ್ತ ಹೆಚ್ಚಿನ ಒತ್ತು ನೀಡಿದಂತೆ ಕಾಣಿಸುತ್ತಿದೆ. ಹೀಗಾಗಿ ತಾನು ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾದರೆ ತನ್ನ ಮಗನಿಗೂ ಪಕ್ಷದಿಂದ ಟಿಕೆಟ್ ನೀಡಬೇಕು ಎಂಬ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಇದಕ್ಕೆ ಒಪ್ಪಿದ್ದೇ ಆದರೆ ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದು ಹೇಳಲಾಗಿದೆ. ಆದರೆ ಈ ಷರತ್ತುಗಳನ್ನು ಕಾಂಗ್ರೆಸ್ ನಾಯಕರು ಒಪ್ಪುತ್ತಾರಾ ಗೊತ್ತಿಲ್ಲ. ಆದರೆ ಈ ಕುರಿತಂತೆ ರಾಜಕೀಯ ಪಡಸಾಲೆಯಲ್ಲಿ ಬೇರೆಯದ್ದೇ ಆದ ಚರ್ಚೆಗಳು ನಡೆಯುತ್ತಿದೆ.

ಕೆ.ಆರ್.ನಗರದಲ್ಲಿ ಸ್ಪರ್ಧಿಸುವ ಇಂಗಿತ

ಕೆ.ಆರ್.ನಗರದಲ್ಲಿ ಸ್ಪರ್ಧಿಸುವ ಇಂಗಿತ

ಆ ಪ್ರಕಾರ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ ಗೌಡರಿಗೆ ವಿಧಾನಭಾ ಚುನಾವಣೆ ಬದಲಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿ ಕಣಕ್ಕಿಳಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಆದರೆ ಅದು ನಿಜವಾಗುತ್ತಾ? ಅದಕ್ಕೆ ಜಿ.ಟಿ.ದೇವೇಗೌಡರು ಒಪ್ಪುತ್ತಾರಾ? ಗೊತ್ತಿಲ್ಲ. ಈ ಹಿಂದೆಯೇ ಜಿ.ಡಿ.ಹರೀಶ್ ಗೌಡರು ಚಾಮರಾಜನಗರದಲ್ಲಿ ಕೆ.ಆರ್.ನಗರದಲ್ಲಿ ಸ್ಪರ್ಧಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ಹೀಗಾಗಿ ಅಪ್ಪ ಮತ್ತು ಮಗ ಇಬ್ಬರಿಗೂ ಟಿಕೆಟ್ ನೀಡುವ ಪಕ್ಷಗಳತ್ತ ಕೊನೆಗಳಿಗೆಯಲ್ಲಿ ಮುಖ ಮಾಡಿದರೂ ಅಚ್ಚರಿಯಿಲ್ಲ. ಏಕೆಂದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಸಾವಿರಾರು ನಿದರ್ಶನಗಳಿವೆ.


ಈ ನಡುವೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಬರುವ ಸಿಂಧುವಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಶಾಸಕ ಜಿ.ಟಿ.ದೇವೇಗೌಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉಭಯಕುಶಲೋಪರಿಯೂ ನಡೆಸಿದ್ದಾರೆ. ಇದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.

ಸದ್ಯಕ್ಕೆ ಗುಟ್ಟಾಗಿ ಉಳಿದಿದೆ ಜಿಟಿಡಿ ನಡೆ

ಸದ್ಯಕ್ಕೆ ಗುಟ್ಟಾಗಿ ಉಳಿದಿದೆ ಜಿಟಿಡಿ ನಡೆ

ಈ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಜಿ.ಟಿ.ದೇವೇಗೌಡರು ಬಳಿಕ ಸೋಲು ಕಂಡಿದ್ದರು. ಆದರೆ ಬಿಜೆಪಿ ಆಡಳಿತಾವಧಿಯಲ್ಲಿ ಅವರಿಗೆ ಗೃಹಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಅದಾದ ನಂತರ ಮತ್ತೆ ಜೆಡಿಎಸ್‌ಗೆ ಮರಳಿದ್ದರು. ಆದರೆ ಜೆಡಿಎಸ್ ನಲ್ಲಿ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಮಗಿಷ್ಟವಿಲ್ಲದ ಖಾತೆ ನೀಡಿದ್ದಲ್ಲದೆ, ಮೂಲೆ ಗುಂಪು ಮಾಡಿ ಸಾ.ರಾ.ಮಹೇಶ್ ಅವರಿಗೆ ಮಣೆ ಹಾಕಿದ್ದು, ಜಿ.ಟಿ.ದೇವೇಗೌಡರಿಗೆ ಹೆಚ್.ಡಿ.ಕುಮಾರಸ್ವಾಮಿ ಅವರ ಮೇಲಿನ ಅಸಮಾಧಾನಕ್ಕೆ ಕಾರಣವಾಗಿದೆ.


ಚುನಾವಣೆಗೆ ಇನ್ನೊಂದು ವರ್ಷವಿರುವುದರಿಂದ ಸದ್ಯ ತಟಸ್ಥ ಧೋರಣೆ ತಾಳುತ್ತಿರುವ ಅವರು ಚುನಾವಣೆಗೆ ದಿನಗಳು ಹತ್ತಿರವಿರುವಂತೆಯೇ ತಮ್ಮ ನಿರ್ಧಾರವನ್ನು ಮಾಡಬಹುದು. ಅಲ್ಲಿ ತನಕ ಅವರ ನಡೆ ರಹಸ್ಯವಾಗಿದ್ದು, ಕೇವಲ ವದಂತಿಗಳಷ್ಟೆ ಅವರ ಸುತ್ತಲೂ ಹರಿದಾಡಲಿದೆ. ಮುಂದಿನ ತೀರ್ಮಾನ ಏನಾಗಿರಬಹುದು ಎಂಬ ಪ್ರಶ್ನೆಗೆ ಉತ್ತರ ಸದ್ಯಕ್ಕೆ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ.

English summary
Former minister G.T. Deve Gowda does not identify with any of the parties, including the JDS. Everyone is curious as to what their next political move is.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X