ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಮುಂದೆ ಮೈಸೂರಿನಲ್ಲಿ ವಾರಕ್ಕೊಮ್ಮೆ ಒಣ ಸಂಗ್ರಹ

|
Google Oneindia Kannada News

ಮೈಸೂರು, ಜುಲೈ 29: ಒಣ ಕಸ - ಹಸಿ ಕಸವನ್ನು ಬೇರ್ಪಡಿಸಲು ನಾನಾ ಕಸರತ್ತುಗಳನ್ನು ನಡೆಸುತ್ತಿರುವ ಮೈಸೂರು ಮಹಾನಗರ ಪಾಲಿಕೆ ಈಗ ವಾರಕ್ಕೊಮ್ಮೆ ಮಾತ್ರ ಒಣ ಕಸ ಸಂಗ್ರಹಿಸುವ ಯೋಜನೆಗೆ ಮುಂದಾಗಿದೆ. ಸದ್ಯ ಮನೆ- ಮನೆಗೂ ಪ್ಲಾಸ್ಟಿಕ್ ಚೀಲಗಳನ್ನು ವಿತರಣೆ ಮಾಡಿದ್ದು ಆಗಸ್ಟ್ ನಿಂದ ವಾರಕ್ಕೊಮ್ಮೆ ಕಸ ಸಂಗ್ರಹಿಸುವ ಯೋಜನೆಗೆ ಚಾಲನೆ ಸಿಗಲಿದೆ.

ಯೋಜನೆ ಮೂಲಕ ಸ್ವಚ್ಛ ನಗರಿಯ ಪಟ್ಟ ಅಲಂಕರಿಸಲು ಮುಂದಾಗುತ್ತಿದೆ. ಹಸಿ ಮತ್ತು ಒಣ ಕಸವನ್ನು ಮೂಲದಿಂದಲೇ ಬೇರ್ಪಡಿಸಲು ಈ ಯೋಜನೆ ಜಾರಿಗೆ ತಂದಿದೆ. ಪ್ರತಿ ಮನೆಗೂ ಹಸಿ ಮತ್ತು ಒಣ ಕಸ ಸಂಗ್ರಹಕ್ಕೆ ಎರಡು ಪ್ಲಾಸ್ಟಿಕ್ ಬಕೆಟ್ ಅನ್ನು ಉಚಿತವಾಗಿ ಈ ಹಿಂದೆ ನೀಡಲಾಗಿತ್ತು. ಮನೆಯ ಹೊರಗೆ ಸಂಗ್ರಹಕ್ಕೆ ಮೀಸಲಿರಬೇಕಾದ ಈ ಬಕೆಟ್ ಗಳು ಅಡುಗೆ ಮನೆ ಸೇರಿದ್ದು, ಇದರಿಂದ ಪ್ರಯೋಜನಕ್ಕೆ ಬಾರದೆ ಮತ್ತೆ ಯಥಾ ಸ್ಥಿತಿ ಕಾಯ್ದುಕೊಂಡಿತ್ತು. ಹೀಗಾಗಿ ಲಕ್ಷಾಂತರ ರೂಪಾಯಿ ಯೋಜನೆ ಹಳ್ಳಹಿಡಿಯಿತು.

 ಮುಡಾದಿಂದ ತಯಾರಾಗಲಿದೆ 2 ಸಾವಿರ ಗುಂಪು ಮನೆ ಯೋಜನೆ ಮುಡಾದಿಂದ ತಯಾರಾಗಲಿದೆ 2 ಸಾವಿರ ಗುಂಪು ಮನೆ ಯೋಜನೆ

ಹಳೆ ಯೋಜನೆ ಫಲ ಕೊಡದ ಕಾರಣ ಪಾಲಿಕೆ ಈ ಯೋಜನೆಗೆ ರೂಪುರೇಷೆ ಹಾಕಿಕೊಂಡಿದೆ. ಕಸದ ಸಮಸ್ಯೆಯನ್ನು ಪರಿಹರಿಸಲು ಐಟಿಸಿ ಕಂಪನಿ ಸಹಯೋಗದಲ್ಲಿ ಎಲ್ಲ ಮನೆಗಳಿಗೂ ನಗರ ಪಾಲಿಕೆಯಿಂದ ಒಣ ಕಸ ಸಂಗ್ರಹಕ್ಕೆ ಬ್ಯಾಗ್ ನೀಡಲಾಗುತ್ತಿದ್ದು, ಬಹುತೇಕ ವಾರ್ಡ್ ಗಳಲ್ಲಿ ಈ ಕಾರ್ಯ ಪೂರ್ಣಗೊಂಡಿದೆ. ಪ್ರತಿದಿನ ಮನೆ - ಮನೆಯಿಂದ ಹಸಿ ಕಸ ಸಂಗ್ರಹ ಮಾಡಲಾಗುತ್ತದೆ. ಪಾಲಿಕೆ ನೀಡಿರುವ ಬ್ಯಾಗ್ ಗಳಲ್ಲಿ ಸಂಗ್ರಹವಾಗುವ ಒಣ ಕಸವನ್ನು ವಾರಕ್ಕೊಮ್ಮೆ ಸಂಗ್ರಹಿಸಿ ಪಾಲಿಕೆಯ ಶೂನ್ಯ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ನೀಡಲಾಗುತ್ತದೆ.

Weekly Dry Garbage Collection In Mysuru

"ಪಾಲಿಕೆ ವತಿಯಿಂದ 65 ವಾರ್ಡ್ ಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಒಣ ಕಸ ಸಂಗ್ರಹಕ್ಕೆ ಬ್ಯಾಗ್ ಗಳನ್ನು ನೀಡಲಾಗಿದೆ. ವಾರಕ್ಕೊಮ್ಮೆ ಕಸ ಸಂಗ್ರಹಣೆಯಿಂದ ಪೌರಕಾರ್ಮಿಕರಿಗೂ ಕಸ ವಿಂಗಡಣೆ ಹೊರೆ ತಪ್ಪಲಿದೆ" ಎನ್ನುತ್ತಾರೆ ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ನಾಗರಾಜ್.

English summary
The Mysore Corporation is now planning a weekly collection of dry garbage. Distribution of plastic bags to the house is completed. A weekly dry garbage collection project will be launched from August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X