ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಕೈಬಿಟ್ಟರೂ, ಬಿಜೆಪಿ ಅವರ ಕೈಬಿಡುವುದಿಲ್ಲ!

|
Google Oneindia Kannada News

Recommended Video

ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಕೈಬಿಟ್ಟರೂ, ಬಿಜೆಪಿ ಅವರ ಕೈಬಿಡುವುದಿಲ್ಲವಂತೆ | Oneindia Kannada

ಮೈಸೂರು, ಸೆ 10: ಮೈಸೂರು ದಸರಾ ಕಾರ್ಯಕ್ರಮದ ಪೂರ್ವತಯಾರಿ ಸಭೆಯ ನಂತರ, ಸಚಿವ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ.

ಮೈಸೂರು ಉಸ್ತುವಾರಿ ವಿ.ಸೋಮಣ್ಣ ಮತ್ತು ಸಿ.ಟಿ.ರವಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, " ಸಿದ್ದರಾಮಯ್ಯನವರನ್ನು ಆಹ್ವಾನಿಸಿಯೇ ದಸರಾ ಉತ್ಸವವನ್ನು ಆಚರಿಸ್ತುತೇವೆ" ಎಂದು ಸೋಮಣ್ಣ ಹೇಳಿದರು.

ಕನ್ನಡ ಧ್ವಜದ ಕುರಿತು ಸಿ.ಟಿ.ರವಿ ಹೇಳಿಕೆ; ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಕನ್ನಡ ಧ್ವಜದ ಕುರಿತು ಸಿ.ಟಿ.ರವಿ ಹೇಳಿಕೆ; ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹ

"ಸಿದ್ದರಾಮಯನವರನ್ನು ದಸರಾಗೆ ಆಹ್ವಾನಿಸುತ್ತೀರಾ' ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಸಿ.ಟಿ.ರವಿ, " ಸಿದ್ದರಾಮಯ್ಯನವರನ್ನು ಖಂಡಿತವಾಗಿಯೂ ನಾವು ಆಹ್ವಾನಿಸುತ್ತೇವೆ. ಒಂದು ವೇಳೆ ಕಾಂಗ್ರೆಸ್ ಅವರ ಕೈಬಿಟ್ಟರೂ, ನಾವು ಅವರ ಕೈಬಿಡುವುದಿಲ್ಲ" ಎಂದು ಹೇಳಿದರು.

We Will Not Leave Siddaramaiah, Will Invite Him For Mysuru Dasara: CT Ravi Statement

" ಪ್ರತೀದಿನ ಸಿದ್ದರಾಮಯ್ಯನವರು ನಮ್ಮ ಸಂಪರ್ಕದಲ್ಲಿದ್ದಾರೆ. ಆಹ್ವಾನ ಪತ್ರಿಕೆ ಇನ್ನೂ ಮುದ್ರಣವಾಗಬೇಕಷ್ಟೇ.. ನಾವು ಅವರನ್ನು ಆಹ್ವಾನಿಸಲು ಹೋದಾಗ, ನೀವೂ ನಮ್ಮ ಜೊತೆಗೆ ಬನ್ನಿ" ಎಂದು ವಿ.ಸೋಮಣ್ಣ, ಮಾಧ್ಯಮದವರಿಗೂ ಆಹ್ವಾನ ನೀಡಿದರು.

ಸಿ.ಟಿ.ರವಿ ಮಾತನಾಡುತ್ತಾ, " ಒಬ್ಬ ವ್ಯಕ್ತಿಯನ್ನು ಬಂಧಿಸಿದಾಗ, ಜಾತಿಯ ವಿಚಾರ ತರುವುದು ತಪ್ಪು. ಬಂಧನ ಎನ್ನುವುದು ಯಾವುದೇ ಸಮುದಾಯದ ವಿರುದ್ದ ಅಲ್ಲ, ವ್ಯಕ್ತಿಯ ವಿರುದ್ದ" ಎಂದು ಪರೋಕ್ಷವಾಗಿ, ಡಿ.ಕೆ.ಶಿವಕುಮಾರ್ ಹೆಸರನ್ನು ಉಲ್ಲೇಖಿಸದೇ ಟಾಂಗ್ ನೀಡಿದ್ದಾರೆ.

ದಸರಾ ಫಲ-ಪುಷ್ಪ ಪ್ರದರ್ಶನದಲ್ಲಿ ಕಂಗೊಳಿಸಲಿದೆ 75 ಸಾವಿರ ಗಿಡಗಳುದಸರಾ ಫಲ-ಪುಷ್ಪ ಪ್ರದರ್ಶನದಲ್ಲಿ ಕಂಗೊಳಿಸಲಿದೆ 75 ಸಾವಿರ ಗಿಡಗಳು

" ನನ್ನ ಆಸ್ತಿ ಒಂದೇ ಸಮನೆ ಹೆಚ್ಚಾದರೆ, ಅಥವಾ, ನನ್ನ ಮನೆಯಲ್ಲಿ ಕೋಟಿ ಕೋಟಿ ಹಣಸಿಕ್ಕರೆ, ನನ್ನನ್ನು ಪ್ರಾಮಾಣಿಕ ಎಂದು ಹೇಳಿಕೊಳ್ಳಲು ಸಾಧ್ಯವೇ" ಎಂದು ಪ್ರಶ್ನಿಸಿರುವ ರವಿ, " ಸಿದ್ದರಾಮಯ್ಯನವರು ಇದನ್ನೆಲ್ಲಾ ಯೋಚಿಸಿ ಹೇಳಿಕೆಯನ್ನು ನೀಡಬೇಕು" ಎನ್ನುವ ಸಲಹೆಯನ್ನು ನೀಡಿದರು.

English summary
We Will Not Leave Siddaramaiah, Will Invite Him For Mysuru Dasara: Minister CT Ravi Statement in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X