ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಬಿನಿಯಿಂದ ತಮಿಳುನಾಡಿಗೆ ನೀರು: ರೈತರಲ್ಲಿ ತುಂಬಿದೆ ಆತಂಕ

|
Google Oneindia Kannada News

ಮೈಸೂರು, ಜುಲೈ 26: ಮುಂಗಾರು ಮಳೆ ವೈಫಲ್ಯದ ನಡುವೆಯೂ ರಾಜ್ಯದ ಪ್ರಮುಖ ಜಲಾಶಯ ಕಬಿನಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯ ಭರ್ತಿಯಾಗಲು 10 ಅಡಿ ಬಾಕಿ ಇದ್ದರೂ ರೈತರ ಜಮೀನಿಗೆ ಮಾತ್ರ ಸಮರ್ಕವಾಗಿ ನೀರು ಹರಿಸುತ್ತಿಲ್ಲ. ಜೊತೆಗೆ ತಮಿಳುನಾಡಿಗೆ ನೀರು ಬಿಡಬೇಕಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.

ಕೇರಳದ ವೈನಾಡು ಹಾಗೂ ಕಬಿನಿ ಹಿನ್ನೀರು ಪ್ರದೇಶದಲ್ಲಿ ಕಳೆದ 20 ದಿನಗಳಿಂದ ಪುನರ್ವಸು ಮಳೆ ಸಾಧಾರಣವಾಗಿ ಸುರಿದಿದೆ. ಈ ಕಾರಣದಿಂದ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ. ನಾಲ್ಕು ದಿನದ ಹಿಂದೆ ಮಳೆಯೂ ಆಗುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ.

 ರಾತ್ರೋರಾತ್ರಿ ಕಾವೇರಿ, ಕಬಿನಿಯಿಂದ ತಮಿಳುನಾಡಿಗೆ ನೀರು; ಮಂಡ್ಯದಲ್ಲಿ ರೈತರ ಪ್ರತಿಭಟನೆ ರಾತ್ರೋರಾತ್ರಿ ಕಾವೇರಿ, ಕಬಿನಿಯಿಂದ ತಮಿಳುನಾಡಿಗೆ ನೀರು; ಮಂಡ್ಯದಲ್ಲಿ ರೈತರ ಪ್ರತಿಭಟನೆ

ಜಲಾಶಯದ ಗರಿಷ್ಠ ಮಟ್ಟ 84 ಅಡಿ ಇದ್ದು, ಒಂಬತ್ತು ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ 74 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 83 ಅಡಿಗಳಷ್ಟಿತ್ತು. ವಿದ್ಯುತ್ ಉತ್ಪಾದನಾ ಘಟಕದಿಂದ 5 ಸಾವಿರ ಕ್ಯುಸೆಕ್ ನೀರನ್ನು ಹಾಗೂ ಜಲಾಶಯದ ಎರಡು ಕ್ರಸ್ಟ್ ಗೇಟ್‌ ಗಳಿಂದ 2 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಈ ವರ್ಷದಲ್ಲಿ ಕ್ರಸ್ಟ್ ಗೇಟ್‌ ತೆರೆದು ಇದೇ ಮೊದಲ ಬಾರಿಗೆ ನೀರು ಬಿಡಲಾಗಿದೆ.

Water From Kabini To Tamil Nadu

ಇತ್ತ ಮಳೆಯ ಪ್ರಮಾಣ ಸಾಧಾರಣವಾಗಿರುವುದರಿಂದ ಮುಂದಿನ ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಕುರಿತು ರೈತರಲ್ಲಿ ಅನುಮಾನ ಮೂಡಿದೆ.

ಏರಿದೆ ಕಬಿನಿ ಒಳಹರಿವು: ರೈತರ ಮೊಗದಲ್ಲೀಗ ಸಂತಸ ಏರಿದೆ ಕಬಿನಿ ಒಳಹರಿವು: ರೈತರ ಮೊಗದಲ್ಲೀಗ ಸಂತಸ

ತಮಿಳುನಾಡಿಗೆ ನೀರು ಬಿಟ್ಟ ಅಧಿಕಾರಿಗಳು ಕೆರೆ-ಕಟ್ಟೆಗಳಿಗೆ ನೀರು ಹರಿಸುವ ಕೆಲಸಕ್ಕೆ ಮುಂದಾಗಿಲ್ಲ. ಕಳೆದ ಬೇಸಿಗೆಯಲ್ಲೂ ಜಲಾಶಯದ ನೀರು ರೈತರು ಮತ್ತು ಜಾನುವಾರುಗಳಿಗೆ ಸಿಗದೇ ಕಷ್ಟದ ಸ್ಥಿತಿ ಎದುರಾಗಿತ್ತು.

ಮೈಸೂರು ಜಿಲ್ಲೆಯಲ್ಲೂ ಮಳೆಗೆ ಕೃಷಿ ಭೂಮಿ ಮುಳುಗಡೆ, ರೈತರ ಬದುಕು ಅತಂತ್ರಮೈಸೂರು ಜಿಲ್ಲೆಯಲ್ಲೂ ಮಳೆಗೆ ಕೃಷಿ ಭೂಮಿ ಮುಳುಗಡೆ, ರೈತರ ಬದುಕು ಅತಂತ್ರ

ನುಗು, ತಾರಕ, ಹೆಬ್ಬಾಳ ಜಲಾಶಯಗಳಿಂದಲೂ ರೈತರ ಜಮೀನಿಗೆ ನೀರು ಹರಿಸುತ್ತಿಲ್ಲ. ಟಿ ನರಸೀಪುರ, ಚಾಮರಾಜನಗರ, ನಂಜನಗೂಡು, ಕೊಳ್ಳೇಗಾಲ, ಎಚ್ ಡಿ ಕೋಟೆ ವ್ಯಾಪ್ತಿಯ ಜಮೀನಿಗೆ ಸಮರ್ಪಕವಾಗಿ ಒದಗಿಸಿ ರೈತರನ್ನು ರಕ್ಷಿಸಲು ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ ಅಷ್ಟೆ.

English summary
Water level in the states major reservoir Kabini increased despite failrure of monsoon rain. Even though the reservoir has 10 feet to fill, the farmer's land is not being watered properly. water releasing to Tamil Nadu has caused anxiety among farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X