ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಘಮಿತ್ರ ಎಕ್ಸ್ ಪ್ರೆಸ್ ರೈಲಿನೊಳಗೆ ವಾಟರ್ ಫಾಲ್ಸ್!

|
Google Oneindia Kannada News

ಬೆಂಗಳೂರು, ಜುಲೈ 3: ವಾಟರ್ ಫಾಲ್ಸ್ ನೋಡಲು ಎಲ್ಲರಿಗೂ ಖುಷಿಯಾಗುತ್ತದೆ. ಆದರೆ ಈ ವಾಟರ್ ಫಾಲ್ಸ್ ನೋಡಿದವರಿಗೆ ಮಾತ್ರ ಖುಷಿಯಾಗಿಲ್ಲ. ಬದಲಿಗೆ ದಿಗಿಲು ಹುಟ್ಟಿದೆ. ಏಕೆಂದರೆ ಇದು ಕಂಡಿರುವುದು ರೈಲಿನಲ್ಲಿ. ಹೌದು. ರೈಲಿನ ಎಸಿ ಕೋಚ್ ಒಂದರಲ್ಲಿ ಹೀಗೆ ನೀರು ಹರಿದು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಕಳೆದ ಜೂನ್ 29ರಂದು ಸಂಗಮಿತ್ರ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನ ಎ1 ಕೋಚ್ ನಲ್ಲಿ ಎಸಿ ಆನ್ ಮಾಡಿದಾಗ ತಣ್ಣನೆ ಗಾಳಿ ಬರುವ ಬದಲು ನೀರು ಸುರಿಯಲು ಪ್ರಾರಂಭಿಸಿದೆ. ಇದಕ್ಕೆ ಕಂಗಾಲಾದ ಜನರು ಏಕಾಏಕಿ ತಾವಿರುವ ಜಾಗದಿಂದ ಎದ್ದು ಕೆಳಗಿಳಿದಿದ್ದಾರೆ. ಈ ಇಡೀ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಈ ವಿಡಿಯೋ ಎಲ್ಲೆಲ್ಲೂ ಹರಿದಾಡುತ್ತಿದೆ.

 ದೆಹಲಿ - ಆಗ್ರಾ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲೊಂದು ವಿಲಕ್ಷಣ ಘಟನೆ ದೆಹಲಿ - ಆಗ್ರಾ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲೊಂದು ವಿಲಕ್ಷಣ ಘಟನೆ

ಸಾಮಾನ್ಯವಾಗಿ ರೈಲಿನಲ್ಲಿ ದೂರದೂರಿಗೆ ಪ್ರಯಾಣ ಮಾಡುವ ವೇಳೆ ಎಸಿ ಕೋಚ್ ಅನ್ನು ಬಹಳ ಅನುಕೂಲಕರ ಕೋಚ್ ಎಂದು ಪರಿಗಣಿಸಲಾಗುತ್ತದೆ. ಈ ವಿಡಿಯೋ ನೋಡಿದ ನಂತರ ಜನರು ಭಾರತೀಯ ರೈಲ್ವೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಕೋಚ್ ಒಳಗೆ ನೀರು ಹರಿಯುತ್ತಿರುವುದು, ಕೋಚ್ ನಲ್ಲಿ ಪ್ರಯಾಣಿಕರ ಪರದಾಟ, ನೀರಿನಲ್ಲಿ ಮುಳುಗಿರುವ ವಸ್ತುಗಳು, ಎಲ್ಲವನ್ನೂ ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ.

water deluge in AC coach of Bengaluru bound sangamithra train

ನೀರು ಸುರಿಯುವಾಗ ಅದನ್ನು ತಡೆಯಲು ಯಾವುದೇ ಸಾಧನವಾಗಲಿ ಇರಲಿಲ್ಲ. ರೈಲ್ವೇ ಅಧಿಕಾರಿಗಳೂ ಬರಲಿಲ್ಲ. ಇದರಿಂದಾಗಿ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದೆ. ಸಂಘ ಮಿತ್ರ ಸೂಪರ್​ ಫಸ್ಟ್​​ ಎಕ್ಸ್​ಪ್ರೆಸ್​​ ರೈಲು ಪಟ್ನಾದಿಂದ ಬೆಂಗಳೂರು ರೈಲ್ವೇ ಜಂಕ್ಷನ್​ ನಡುವೆ ಓಡಾಟ ನಡೆಸುತ್ತಿದೆ. ಇನ್ನಾದರೂ ರೈಲ್ವೆ ಅಧಿಕಾರಿಗಳು ಈ ರೀತಿಯ ಘಟನೆ ಮರುಕಳಿಸದಂತೆ ಗಮನಹರಿಸಬೇಕಿದೆ.

English summary
A water deluge in AC coach of Bengaluru-bound sangamithra train. video of this incident is viral in social media. The 45-second clip shows the A-1 coach flooded with water as commuters raise an alarm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X