ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವತಂತ್ರವಾಗಿ ನಿಂತು ಕಾರ್ಪೋರೇಟರ್ ಆಗಿ; ಪ್ರತಾಪ್ ಸಿಂಹಗೆ ಸವಾಲು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 14: " ನರೇಂದ್ರ ಮೋದಿ ಅವರ ಅಲೆಯಿಂದ ನೀವು ಗೆದ್ದಿದ್ದೀರಾ. ಸ್ವತಂತ್ರವಾಗಿ ನಿಂತು ಕಾರ್ಪೋರೇಟರ್ ಆಗಿ ಸಾಕು" ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಸವಾಲು ಹಾಕಿದರು.

ಸೋಮವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಘು ಆಚಾರ್, "ಬೆತ್ತಲೆ ಜಗತ್ತು ಪುಸ್ತಕವನ್ನು ಓದಿದ್ದೇನೆ. ಅದನ್ನು ಓದಿದ ಮೇಲೆ ಆ ಪುಸ್ತಕವನ್ನು ಬರೆದವರು ನೀವಲ್ಲ ಅನ್ನಿಸಿತು. ಯಾರೋ ಬರೆದ ಪುಸ್ತಕಕ್ಕೆ ಇನ್ಯಾರೋ ಸಹಿ ಮಾಡುತ್ತಾರೆ" ಎಂದು ವಾಗ್ದಾಳಿ ನಡೆಸಿದರು.

 ಮೈಸೂರು ಡಿಸಿ ರೋಹಿಣಿ ಸಿಂಧೂರಿ ಪರ ಪ್ರತಾಪ್ ಸಿಂಹ ಮಾತು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಪರ ಪ್ರತಾಪ್ ಸಿಂಹ ಮಾತು

"ಬುದ್ಧಿ ಇಲ್ಲದಿರುವ ಸಂಸದರನ್ನು ಗೆಲ್ಲಿಸಿರುವುದು ವಿಪರ್ಯಾಸವಾಗಿದೆ. ಸಂಸದರಾದವರು ಕೇವಲ ಬೆಂಗಳೂರು-ಮೈಸೂರು ಹೆದ್ದಾರಿ ಮಾಡುವುದು ಒಂದೇನಾ?. ಎಷ್ಟು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೀರಾ?. ಸಂಸದರಾಗಿ ಈ ಭಾಗಕ್ಕೆ ನಿಮ್ಮ ಸಾಧನೆಗಳೇನು?" ಎಂದು ರಘು ಆಚಾರ್ ಪ್ರಶ್ನಿಸಿದರು.

ಮೈಸೂರಿನಲ್ಲಿ ರೋಹಿಣಿ ಸಿಂಧೂರಿ ಆಟ ನಡೆಯುವುದಿಲ್ಲ; ಸಾರಾ ಮಹೇಶ್ಮೈಸೂರಿನಲ್ಲಿ ರೋಹಿಣಿ ಸಿಂಧೂರಿ ಆಟ ನಡೆಯುವುದಿಲ್ಲ; ಸಾರಾ ಮಹೇಶ್

 War Of Words Between Pratap Simha And Raghu Achar

ಕೆಲವು ದಿನಗಳ ಹಿಂದೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ರಘು ಆಚಾರ್ ವಾಗ್ದಾಳಿ ನಡೆಸಿದ್ದರು. ಆಗ ಜಿಲ್ಲಾಧಿಕಾರಿಗಳ ಪರವಾಗಿ ಮಾತನಾಡಿದ್ದ ಪ್ರತಾಪ್ ಸಿಂಹ ಅವರು ಒಳ್ಳೆಯ ಕೆಲಸ ಮಾಡಲು ಯಾವ ಅಪ್ಪಣೆಯೂ ಬೇಕಾಗಿಲ್ಲ ಎಂದು ಹೇಳಿದ್ದರು.

ಶಾಸಕರ 'ಮಹಾರಾಣಿ' ಹೇಳಿಕೆಗೆ ಡಿಸಿ ರೋಹಿಣಿ ಸಿಂಧೂರಿ ತಿರುಗೇಟುಶಾಸಕರ 'ಮಹಾರಾಣಿ' ಹೇಳಿಕೆಗೆ ಡಿಸಿ ರೋಹಿಣಿ ಸಿಂಧೂರಿ ತಿರುಗೇಟು

ರಘು ಆಚಾರ್ ಅವರನ್ನು ಟೀಕಿಸಿದ್ದ ಪ್ರತಾಪ್ ಸಿಂಹ, "ಮೊದಲು ವಿಧಾನ ಪರಿಷತ್ ಕುರಿತು ಓದುವಂತೆ" ಹೇಳಿದ್ದರು. ಸೋವಾರ ಪ್ರತಾಪ್‌ಸಿಂಹ ಆರೋಪಕ್ಕೆ ರಘು ಆಚಾರ್ ತಿರುಗೇಟು ನೀಡಿದ್ದು, ನಾಯಕರ ನಡುವಿನ ಮಾತಿನ ಸಮರ ಮುಂದುವರೆಯುವ ನಿರೀಕ್ಷೆ ಇದೆ.

"ನಾನು ವಿಧಾನ ಪರಿಷತ್ ಕುರಿತು ಓದಿದ್ದೇನೆ. ನೀವು ಏನು ಓದಿದ್ದೀರಾ?, ಸಂಸತ್ ಬಗ್ಗೆ ಏನು ತಿಳಿದುಕೊಂಡಿದ್ದೀರಿ?. ದೊಡ್ಡವರ ಪರವಾಗಿ ಮಾತನಾಡಿದರೆ ಯಾರೂ ಸಹ ದೊಡ್ಡವರಾಗುವುದಿಲ್ಲ" ಎಂದು ರಘು ಆಚಾರ್ ಪ್ರತಾಪ್ ಸಿಂಹ ಟೀಕಿಸಿದ್ದಾರೆ.

ಮೈಸೂರು ದಸರಾಕ್ಕೆ ಕೆಲವೇ ದಿನಗಳು ಇರುವಾಗ ಜಿಲ್ಲಾಧಿಕಾರಿಯಾಗಿದ್ದ ಶರತ್ ಬಿ. ವರ್ಗಾವಣೆ ಮಾಡಲಾಗಿತ್ತು. ರೋಹಿಣಿ ಸಿಂಧೂರಿ ಅವರನ್ನು ನೇಮಿಕ ಮಾಡಲಾಗಿತ್ತು. ಜಿಲ್ಲೆಯ ಹಲವಾರು ಜನಪ್ರತಿನಿಧಿಗಳು ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮತ್ತೊಂದು ಕಡೆ ತಮ್ಮನ್ನು ವರ್ಗಾವಣೆ ಮಾಡಿರುವ ಬಗ್ಗೆ ಶರತ್ ಬಿ. ಕಾನೂನು ಹೋರಾಟ ನಡೆಸುತ್ತಿದ್ದಾರೆ. ಪ್ರತಾಪ್ ಸಿಂಹ, ಕಂದಾಯ ಸಚಿವ ಆರ್. ಅಶೋಕ ರೋಹಿಣಿ ಸಿಂಧೂರಿ ಬೆಂಬಲಿಸಿ ಹೇಳಿಕೆ ಕೊಟ್ಟಿದ್ದರು.

English summary
War of words between Mysuru-Kodagu BJP MP Pratap Simha and G. Raghu Achar Congress leader and legislative council member.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X