ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ ಡೌನ್‌ ನಿಯಮ ಉಲ್ಲಂಘನೆ: ಮೈಸೂರಲ್ಲಿ ದಂಡದ ರೂಪದಲ್ಲಿ ಸಂಗ್ರಹಿಸಿದ ಮೊತ್ತವೆಷ್ಟು?

By Coovercolly Indresh
|
Google Oneindia Kannada News

ಮೈಸೂರು, ನವೆಂಬರ್ 5: ಕೊರೊನಾ ವೈರಸ್ ಎಂಬ ಭೀಕರ ಹೆಮ್ಮಾರಿಯು ಅಕ್ಷರಶಃ ಜಗತ್ತನ್ನೇ ತಲ್ಲಣಗೊಳಿಸಿದೆ. ಜನರ ಪ್ರಾಣ ರಕ್ಷಣೆಗಾಗಿ ಸರ್ಕಾರಗಳು ಲಾಕ್‌ ಡೌನ್‌ ಹಾಗೂ ಕೆಲವು ನಿರ್ಬಂಧಗಳನ್ನು ಘೋಷಿಸಿದ್ದವು.

ಆದರೆ ಲಾಕ್‌ ಡೌನ್‌ ಸಂದರ್ಭದಲ್ಲೂ ಮನೆಯಲ್ಲೆ ಕ್ಷೇಮವಾಗಿರುವುದನ್ನು ಬಿಟ್ಟು ಬೀದಿ ಸುತ್ತಲು ಹೊರಟ ಜನರು, ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ಹಣವನ್ನೂ ದಂಡವಾಗಿ ಕಟ್ಟಿದ್ದಾರೆ.

ಕೋವಿಡ್ -19 ನಿಯಮ ಉಲ್ಲಂಘನೆ; ರಾಮನಗರದಲ್ಲಿ ದಾಖಲಾದ ಪ್ರಕರಣವೆಷ್ಟು?ಕೋವಿಡ್ -19 ನಿಯಮ ಉಲ್ಲಂಘನೆ; ರಾಮನಗರದಲ್ಲಿ ದಾಖಲಾದ ಪ್ರಕರಣವೆಷ್ಟು?

ಮೈಸೂರು ಜಿಲ್ಲೆಯಲ್ಲಿ ಲಾಕ್‌ ಡೌನ್‌ ನಿಯಮ ಉಲ್ಲಂಘಿಸಿ ಜನರು ದಂಡವಾಗಿ ಕಟ್ಟಿದ ಒಟ್ಟು ಮೊತ್ತ ಕಳೆದ ಅಕ್ಟೋಬರ್‌ 31 ರವರೆಗೆ ಬರೋಬ್ಬರಿ 39,21,800 ರೂ. ಆಗಿದೆ. ಈ ಹಣವನ್ನು ಒಟ್ಟು 23,316 ಉಲ್ಲಂಘನೆ ಪ್ರಕರಣಗಳಿಂದ ಸಂಗ್ರಹಿಸಲಾಗಿದೆ. ಇದರಲ್ಲಿ ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಪಾಡದಿರುವುದೂ ಸೇರಿದೆ.

Mysuru: Violation Of Covid-19 Rules And Penalty Amount During The Lockdown

ಮೈಸೂರು ನಗರದಲ್ಲೇ ಒಟ್ಟು 10,756 ಪ್ರಕರಣಗಳು ವರದಿಯಾಗಿದ್ದು, 26,21,050 ರುಪಾಯಿ ದಂಡ ಸಂಗ್ರಹಿಸಲಾಗಿದೆ. ಇನ್ನು ಗ್ರಾಮೀಣ ಭಾಗದ ನಂಜನಗೂಡು ತಾಲ್ಲೂಕಿನಲ್ಲಿ ಅತೀ ಹೆಚ್ಚು ಉಲ್ಲಂಘನೆ ಪ್ರಕರಣಗಳು ವರದಿ ಆಗಿದ್ದು, ಒಟ್ಟು 2458 ಪ್ರಕರಣಗಳಿಂದ 2,45,800 ರುಪಾಯಿ ದಂಡ ಸಂಗ್ರಹವಾಗಿದ್ದರೆ, ಸರಗೂರು ತಾಲ್ಲೂಕು ಅತೀ ಕಡಿಮೆ ಪ್ರಕರಣ ದಾಖಲಾಗಿದ್ದು, 136 ಪ್ರಕರಣಗಳಿಂದ 13,600 ರೂ. ದಂಡ ವಸೂಲಾಗಿದೆ.

ಇನ್ನು ವಾಹನ ಸವಾರರೂ ಲಾಕ್ ಡೌನ್‌ ಅವಧಿಯಲ್ಲಿ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿ ಕಳೆದ ಮಾರ್ಚ್‌ 23 ರಿಂದ ಅಕ್ಟೋಬರ್‌ 31 ರವರೆಗೆ 4,10,60,800 ರೂಪಾಯಿ ದಂಡ ಕಟ್ಟಿದ್ದಾರೆ. ಒಟ್ಟು 5,75,529 ಉಲ್ಲಂಘನೆ ಪ್ರಕರಣಗಳು ವರದಿ ಆಗಿವೆ.

61 ಬಾರಿ ಸಂಚಾರಿ ನಿಯಮ ಉಲ್ಲಂಘನೆ; ಸವಾರನಿಗೆ ತರಬೇತಿ!61 ಬಾರಿ ಸಂಚಾರಿ ನಿಯಮ ಉಲ್ಲಂಘನೆ; ಸವಾರನಿಗೆ ತರಬೇತಿ!

ಕಳೆದ ಅಕ್ಟೋಬರ್‌ ತಿಂಗಳೊಂದರಲ್ಲೆ 1,03,038 ಪ್ರಕರಣಗಳು ವರದಿ ಆಗಿದ್ದು, 95,62,300 ರೂಪಾಯಿ ದಂಡ ವಸೂಲಾಗಿದೆ. ಈ ಮೊತ್ತ ಈ ವರ್ಷದ ಎಲ್ಲ ತಿಂಗಳುಗಳಲ್ಲೇ ಅಧಿಕ ಎನ್ನಲಾಗಿದೆ. ಮೈಸೂರಿನಲ್ಲಿ ಕೃಷ್ಣರಾಜ, ದೇವರಾಜ, ಸಿದ್ದಾರ್ಥನಗರ, ವಿವಿ ಪುರ ಮತ್ತು ನರಸಿಂಹರಾಜ ಟ್ರಾಫಿಕ್‌ ಪೊಲೀಸ್‌ ಠಾಣೆಗಳು ಸೇರಿವೆ.

Recommended Video

Vinay Kulkarni ಬಂಧನ ವಿಚಾರ, BJP ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆ DK Shivakumar | Oneindia Kannada

English summary
In the Mysore district, the total amount of fines imposed by the people in violation of the Lockdown rule was Rs 39,21,800 till 31st October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X