ಟಿಕೆಟ್ ತಪ್ಪಿದ್ದಕ್ಕೂ ಬಿಎಲ್ ಸಂತೋಷ್ಗೂ ಸಂಬಂಧ ಇಲ್ಲ: ಬಿ.ವೈ. ವಿಜಯೇಂದ್ರ
ಮೈಸೂರು, ಮೇ26: ವಿಧಾನ ಪರಿಷತ್ ಚುನಾವಣೆ ಕೈ ತಪ್ಪಿದ್ದು ಪಕ್ಷದ ರಾಜಕಾರಣಕ್ಕೆ ಮಾತ್ರ ವಿಜಯೇಂದ್ರ ಸೀಮಿತ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಈ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನನ್ನ ಹಾಗೆ ಕೆಲಸ ಮಾಡಿದ ಸಾವಿರಾರು ಕಾರ್ಯಕರ್ತರಿದ್ದಾರೆ. ಸ್ವಂತ ದುಡ್ಡು ಖರ್ಚು ಮಾಡಿ ಪಕ್ಷದ ಕೆಲಸ ಮಾಡುತ್ತಿರುವ ಕಾರ್ಯಕರ್ತರಿದ್ದಾರೆ. ಪರಿಷತ್ ಚುನಾವಣೆಗೆ ಸುಮಾರು 20 ಜನರು ಹೆಸರು ಶಿಫಾರಸ್ಸು ಮಾಡಲಾಗಿತ್ತು. ಆದರೆ ಆಯ್ಕೆ ಆಗಬೇಕಿರೋದು ಕೇವಲ ನಾಲ್ಕು ಜನ. ಅದನ್ನ ಹೈಕಮಾಂಡ್ ಈಗಾಗಲೇ ತೀರ್ಮಾನ ಮಾಡಿದೆ.
Explained: 8 ವರ್ಷ ಪೂರೈಸಿದ ಪ್ರಧಾನಿ ಮೋದಿ ಸರ್ಕಾರ ಜಾರಿಗೊಳಿಸಿದ 8 ಯೋಜನೆಗಳು
ರಾಜ್ಯಾದ್ಯಂತ ಯುವ ಕಾರ್ಯಕರ್ತರು ನನ್ನನ್ನ ಪ್ರೀತಿ ಮಾಡ್ತಾರೆ. ನನಗೆ ಟಿಕೆಟ್ ಸಿಗದಿದ್ದಕ್ಕೆ ಕೆಲವರು ಬೇಸರವಾಗಿದ್ದಾರೆ. ನಾನು ಕೂಡಾ ರಾಜಕಾರಣಕ್ಕೆ ಈಗ ಅಂಬೆಗಾಲಿಡುತಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷ ಉತ್ತಮ ಜವಾಬ್ದಾರಿ ನೀಡಲಿದೆ. ಪರಿಷತ್ ಟಿಕೆಟ್ ಸಿಗದಿದ್ದಕ್ಕೆ ಇಲ್ಲಿಗೆ ಎಲ್ಲಾ ಮುಗಿದುಹೋಗಲ್ಲ ಎಂದರು.
ಬಿಜೆಪಿಯಲ್ಲಿನ 'ಸಂತೋಷ ಕೂಟ: ಕಾಂಗ್ರೆಸ್ ವ್ಯಂಗ್ಯ
ತಮಗೆ ಬಿ.ಎಲ್.ಸಂತೋಷ್ ರಿಂದ ಟಿಕೆಟ್ ಕೈತಪ್ಪಿದೆ ಎಂಬ ವದಂತಿ ಬಗ್ಗೆ ಮಾತನಾಡಿ, ಆ ರೀತಿಯ ಯಾವುದೇ ಬೆಳವಣಿಗೆ ನಡೆದಿಲ್ಲ .ಅಭ್ಯರ್ಥಿ ಆಯ್ಕೆ ಮಾಡೋದು ಕೋರ್ ಕಮಿಟಿ ಹಾಗೂ ಕೇಂದ್ರ ನಾಯಕರು. ಇದರಲ್ಲಿ ಯಾರೋ ಒಬ್ಬರ ಮೇಲೆ ಆರೋಪ ಮಾಡೋದು ಸರಿಯಲ್ಲ, ಇಡೀ ಬಿಎಸ್ ವೈ ಕುಟುಂಬವನ್ನು ವನವಾಸಕ್ಕೆ ಕಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ವ್ಯಂಗ್ಯ ಎಂದು ಮೈಸೂರಿನಲ್ಲಿ ಬಿ.ವೈ.ವಿಜಯೇಂದ್ರ ಹೇಳಿದರು.
ಚುನಾವಣಾ ಪ್ರಚಾರ ಸಭೆಯಲ್ಲಿ ಯಡಿಯೂರಪ್ಪ ಭಾವಚಿತ್ರ ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಫೋಟೋನ ಯಾರು ಕೈ ಬಿಟ್ಟಿದ್ದಾರೋ ಆ ಮಹಾನುಭಾವರನ್ನೇ ಕೇಳಬೇಕು. ಯಡಿಯೂರಪ್ಪ ಅವರು ಪಕ್ಷ ಕಟ್ಟಿದವರು. ಎಂಎಲ್ಸಿ ಟಿಕೆಟ್ ಕೈ ತಪ್ಪಿದ್ದರಿಂದ ಅವರಿಗೆ ಹಿನ್ನೆಡೆ ಆಗಲ್ಲ. ನನ್ನ ಮಗನನ್ನು ಎಂಎಲ್ ಸಿ ಮಾಡಿ ಎಂದು ಅವ್ರು ಯಾರ ಹತ್ರಾನು ಅವರು ವಕಾಲತ್ತು ಮಾಡಿಲ್ಲ.ವಿಜಯೇಂದ್ರ ಏನಾಗಬೇಕೆಂದು ಎಂಬುದನ್ನ ಪಕ್ಷ ಮುಂದೆ ತೀರ್ಮಾನ ಮಾಡುತ್ತೆ ಎಂದರು.

ಮುಂದೆ ಎಲ್ಲದಕ್ಕೂ ಉತ್ತರ ಸಿಗಲಿದೆ
ಕುಟುಂಬ ರಾಜಕಾರಣದ ಆರೋಪ ಮುಕ್ತರಾಗಲು ವಿಜಯೇಂದ್ರಗೆ ಕೋಕ್ ಎಂಬ ಚರ್ಚೆ ಹಿನ್ನೆಲೆ ಮಾತನಾಡಿ, ಬಿಎಸ್ ವೈ ಮಗ ಅಂತ ನನಗೆ ಮುಂದೆ ಎಂಎಲ್ ಎ ಟಿಕೆಟ್ ಕೊಡ್ತಾರೆ ಅಂದ್ರೆ ಕುಟುಂಬ ರಾಜಕಾರಣ ಎನ್ನಬಹುದು. ನಾನು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ಎಲ್ಲವನ್ನ ಗುರುತಿಸಿದೆ, ಮುಂದೆ ಎಲ್ಲದಕ್ಕೂ ಉತ್ತರ ಸಿಗಲಿದೆ. ವರುಣಾ ಕ್ಷೇತ್ರದ ಟಿಕೆಟ್ ಬಗ್ಗೆ ನಾನು ನಿರೀಕ್ಷೆ ಇಟ್ಕೊಂಡಿಲ್ಲ ಎಂದರು.
(ಒನ್ಇಂಡಿಯಾ ಸುದ್ದಿ)