ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಭಾವಂತ ವಿದ್ಯಾರ್ಥಿಗಳಿಗೆ 'ವಿದ್ಯಾವಿನ್' App ಉಚಿತ ವಿತರಣೆ

|
Google Oneindia Kannada News

ಮೈಸೂರು, ಮಾರ್ಚ್ 17:'ಸ್ಟಾರ್ಟ್‌ ಅಪ್‌ ಇಂಡಿಯಾ'ದಲ್ಲಿ ನೋಂದಣಿಯಾಗಿರುವ ರಾಜ್ಯದ ಮೊದಲ ಇ-ಲರ್ನಿಂಗ್‌ ಆ್ಯಪ್ ಎಂಬ ಹೆಗ್ಗಳಿಕೆ ಪಡೆದಿರುವ 'ವಿದ್ಯಾವಿನ್‌' ಸಂಸ್ಥೆಯು ಆನ್‌ಲೈನ್‌ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯೋಗಗಳ ಮೂಲಕ ಈಗಾಗಲೇ ವಿದ್ಯಾರ್ಥಿಗಳ ಗಮನ ಸೆಳೆದಿದ್ದು, ಈ ಬಾರಿ ರಾಜ್ಯ ಪಠ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ವಿದ್ಯಾವಿನ್ ಆ್ಯಪ್ ತರಗತಿಗಳನ್ನು‌ ಪರಿಚಯಿಸಿದೆ.

ಇ ಲರ್ನಿಂಗ್ ಶಿಕ್ಷಣವನ್ನು ಗ್ರಾಮೀಣ ಪ್ರದೇಶಕ್ಕೆ ಕೊಂಡೊಯ್ಯುವ ಮಹಾನ್‌ ಆಶಯವನ್ನು ವಿದ್ಯಾವಿನ್‌ ಸಂಸ್ಥೆ ಹೊಂದಿದ್ದು, ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಲಭಿಸುವ ಅತ್ಯಾಧುನಿಕ ಶಿಕ್ಷಣ ವ್ಯವಸ್ಥೆಯನ್ನು ತಂತ್ರಜ್ಞಾನದ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಒದಗಿಸಿಕೊಡಬೇಕು ಎಂಬ ಕಾಳಜಿಯೊಂದಿಗೆ ನುರಿತ ಶಿಕ್ಷಕರಿಂದಲೇ ವಿದ್ಯಾವಿನ್ ಆ್ಯಪ್‌ ಸಿದ್ಧಪಡಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿನ ಈ ಬೋಧನೆಗಳು ನಗರ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ನೆರವಿಗೆ ಬರಲಿವೆ.

ಇಂಟರ್ನೆಟ್‌ ಸಂಪರ್ಕ ಕಷ್ಟಕರವೆನಿಸಿದ ಗ್ರಾಮೀಣ ಪ್ರದೇಶಗಳು ಇಂದು ಕಡಿಮೆಯಾಗುತ್ತಿದ್ದು, ಅತ್ಯಂತ ಕಡಿಮೆ ಬ್ಯಾಂಡ್‌ವಿಡ್ತ್‌ ಇರುವ ಪ್ರದೇಶಗಳಲ್ಲೂ ಸುಲಭವಾಗಿ ಆ್ಯಪ್‌ ತೆರೆದುಕೊಳ್ಳುವಂತಹ ತಂತ್ರಜ್ಞಾನ ರೂಪಿಸಿರುವುದು ವಿದ್ಯಾವಿನ್‌ ಹೆಗ್ಗಳಿಕೆ. ಜತೆಗೆ ಯುರೋಪ್‌ನಲ್ಲಿ ಇರುವಂತಹ 'ವಾರ್ಕ್‌' ಪದ್ಧತಿಯನ್ನು ಆ್ಯಪ್ ಶಿಕ್ಷಣದಲ್ಲಿ ಅಳವಡಿಸಲಾಗಿದ್ದು, ಸುಲಭವಾಗಿ ವಿದ್ಯಾರ್ಥಿಗಳಿಗೆ ಪಠ್ಯಗಳ ಗ್ರಹಿಕೆ ಸಾಧ್ಯವಾಗಲಿದೆ.

ಆಯ್ದ ವಿದ್ಯಾರ್ಥಿಗಳಿಗೆ ಉಚಿತ ‌ಆ್ಯಪ್ ಶಿಕ್ಷಣ:

ಆಯ್ದ ವಿದ್ಯಾರ್ಥಿಗಳಿಗೆ ಉಚಿತ ‌ಆ್ಯಪ್ ಶಿಕ್ಷಣ:

ವಿದ್ಯಾವಿನ್ ಸಂಸ್ಥೆಯು ಈಗಾಗಲೇ ರಾಜ್ಯವ್ಯಾಪಿ ಆನ್ ಲೈನ್ ಶಿಕ್ಷಣ ಕಲಿಕಾ ಮಟ್ಟವನ್ನು ಅರಿಯುವ ಅಭಿಯಾನವನ್ನು ಆಯೋಜಿಸಿ ಯಶಸ್ವಿಯಾಗಿದ್ದು, ಮಾನ್ಯ ಶಿಕ್ಷಣ ಸಚಿವರಾಗಿರುವ ಶ್ರೀ ಎಸ್. ಸುರೇಶ್ ಕುಮಾರ್ ಅವರು ಅಭಿಯಾನಕ್ಕೆ ಚಾಲನೆ ನೀಡಿ ಪ್ರೋತ್ಸಾಹಿಸಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಅಲ್ಲದೇ, ಈ ಉದ್ದೇಶವನ್ನು ನಾಡಿನ ಖ್ಯಾತ ಶಿಕ್ಷಣ ತಜ್ಞರಾಗಿರುವ ಡಾ. ಎಂ.ಕೆ. ಶ್ರೀಧರ್, ಮಲ್ಲೇಪುರಂ ಜಿ. ವೆಂಕಟೇಶ್, ಖ್ಯಾತ ಸಾಹಿತಿಗಳಾದ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ, ಶಿಕ್ಷಣ ದಾಸೋಹಿ ಶ್ರೀ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರ ಪ್ರೋತ್ಸಾಹಕ ನುಡಿಗಳು ನಮ್ಮ ಉದ್ದೇಶಕ್ಕೆ ಪ್ರೇರಣೆಯಾಗಿದೆ.

ವಿದ್ಯಾವಿನ್ ಆನ್ ಲೈನ್ ಆಧಾರಿತ ಆ್ಯಪ್

ವಿದ್ಯಾವಿನ್ ಆನ್ ಲೈನ್ ಆಧಾರಿತ ಆ್ಯಪ್

ಅಭಿಯಾನದ ಮುಂದುವರಿದ ಭಾಗವಾಗಿ ವಿನೂತನವಾಗಿ ರೂಪಿಸಿದ ವಿದ್ಯಾವಿನ್ ಆನ್ ಲೈನ್ ಆಧಾರಿತ ಆ್ಯಪ್ ಶಿಕ್ಷಣವನ್ನು ಮೈಸೂರು ಜಿಲ್ಲೆ, ಮಂಡ್ಯ ಹಾಗೂ ನೆರೆಯ ಚಾಮರಾಜನಗರ ಜಿಲ್ಲೆಗಳ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾವಿನ್ ಆ್ಯಪನ್ನು‌ ಉಚಿತವಾಗಿ ನೀಡುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಈಗಾಗಲೇ ಜಿಲ್ಲೆ ಹಾಗೂ ತಾಲೂಕುಗಳ ಶಾಲೆಗಳನ್ನು ಆಯ್ಕೆ ಮಾಡುತ್ತಿದ್ದು, ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮೈಸೂರು, ಮಂಡ್ಯ ಹಾಗೂ ನೆರೆಯ ಚಾಮರಾಜನಗರ ಜಿಲ್ಲೆಯ 150ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಆ್ಯಪ್ ನೀಡುವ ಉದ್ದೇಶ ಹೊಂದಿದ್ದು, ಆಸಕ್ತ ಶಾಲೆಯ ಮುಖ್ಯಸ್ಥರು 9845219333 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.

ವರ್ಷದ ಶಿಕ್ಷಣ ಬೋಧನೆ ಎಂಬ ಅಚ್ಚರಿ

ವರ್ಷದ ಶಿಕ್ಷಣ ಬೋಧನೆ ಎಂಬ ಅಚ್ಚರಿ

500ರಿಂದ 1000 ರೂ.ಗಳಲ್ಲಿ ವರ್ಷದ ಶಿಕ್ಷಣ ಬೋಧನೆ ಎಂಬ ಅಚ್ಚರಿ‌:
ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗೂ ಕೈಗೆಟಕುವ ಶುಲ್ಕವೆಂಬ ಪರಿಕಲ್ಪನೆ. ವರ್ಷಪೂರ್ತಿ ಒಂದು ವಿಷಯವನ್ನು 500 ರೂಪಾಯಿಯಿಂದ 1000 ರೂ.ಗಳವರೆಗೆ ಕೈಗೆಟಕುವ ಶುಲ್ಕದಲ್ಲಿ ಆ್ಯಪ್ ಆಧಾರಿತ ಆನ್ ಲೈನ್ ಶಿಕ್ಷಣವನ್ನು ತಲುಪಿಸುವ ಸದುದ್ದೇಶದ ಪರಿಕಲ್ಪನೆ ವಿದ್ಯಾವಿನ್ ರೂಪದಲ್ಲಿ ಹೊರಹೊಮ್ಮಿದೆ. ಪ್ರತಿ ವಿಷಯದಲ್ಲೂ 100ಕ್ಕೂ ಹೆಚ್ಚು ವಿಷಯಾಧಾರಿತ ವೀಡಿಯೋ ಪಾಠಗಳು, ಬಹು ಆಯ್ಕೆಯ ಪ್ರಶ್ನೆಗಳು (ಎಂಸಿಕ್ಯೂ), ಪ್ರಶ್ನೆ ಮತ್ತು ಉತ್ತರಗಳು, ಶೀಘ್ರ ಪುನರ್ ಮನನ, ಮೈಂಡ್ ಮ್ಯಾಪಿಂಗ್ (ಬಹಳಷ್ಟು ವಿಷಯಗಳನ್ನು ಸಂಯೋಜಿಸುವ ರೂಪ), ಕ್ಷಿಪ್ರ ಪರೀಕ್ಷೆ (ಕ್ವಿಕ್ ಟೆಸ್ಟ್) ಮತ್ತು ಪರೀಕ್ಷಾ ಪೂರ್ವ ತಯಾರಿ ಪ್ರಶ್ನಾ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಗುಚ್ಛ. ತರಗತಿ ಪಠ್ಯಕ್ಕೆ ಪೂರಕವಾಗಿರುವ ಈ ಆ್ಯಪ್‌ನಿಂದ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಲು ಸಹಾಯ ಮಾಡಲಿದೆ.

ಮೈಸೂರಿನ ನಂಟು:

ಮೈಸೂರಿನ ನಂಟು:

ವಿದ್ಯಾವಿನ್‌ ಸಂಸ್ಥೆ ಜನ್ಮತಳೆದಿರುವುದು ಬೆಂಗಳೂರಿನಲ್ಲಾದರೂ, ಅದರ ಬೇರುಗಳು ಇರುವುದು ಮೈಸೂರಿನಲ್ಲಿ. ಮೈಸೂರಿನ ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ, ಪ್ರಸ್ತುತ ವಿದ್ಯಾವಿನ್ ಸಹಸಂಸ್ಥಾಪಕರಾಗಿರುವ ಲತಾ ಪ್ರಕಾಶ್ ಹಾಗೂ ಅರುಣ್‌ ವಿ.ಎಸ್. ರೂಪಿಸಿರುವ ಸರಳ ಶಿಕ್ಷಣ ಆ್ಯಪ್‌ ಇದಾಗಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ನಡುವಿನ ಅಂತರವನ್ನು ಕಿರಿದುಗೊಳಿಸುವ ಉದ್ದೇಶವನ್ನು ಹೊಂದಿದೆ. ವಿದ್ಯಾವಿನ್ ಸಂಸ್ಥೆಯ ಸಂಸ್ಥಾಪಕ, ಮೂಲತಃ ಮಂಡ್ಯ ಜಿಲ್ಲೆಯ ಮೇಲುಕೋಟೆಯವರಾದ ಪ್ರಕಾಶ್ ಕೆ.ವಿ. ಅವರು ಮಂಡ್ಯ ಜಿಲ್ಲೆಯ ಪಿಇಎಸ್ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿದ್ದು, ರಾಜ್ಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತಂತ್ರಜ್ಞಾನ ಆಧಾರಿತ ಆ್ಯಪ್ ಶಿಕ್ಷಣವನ್ನು ಕೈಗೆಟಕುವ ಶುಲ್ಕದಲ್ಲಿ ಆದರೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ತಲುಪಿಸುವ ಮಹತ್ವಾಕಾಂಕ್ಷೆ ಅವರದ್ದು.

English summary
Vidyawin first online education app from Karnataka to be registered with Start-up India Hub.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X