ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಶಾಸಕ ಮಹದೇವ್ ಕುಟುಂಬಕ್ಕೆ ನಿಷ್ಠರಾಗಿದ್ದಾರಾ' ವಿಡಿಯೋ ವೈರಲ್

|
Google Oneindia Kannada News

ಮೈಸೂರು, ಜುಲೈ 6: ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್ ಅವರ ಮಗಳು ಎಂದು ಹೇಳಿಕೊಂಡು ಅವರ ವಿರುದ್ಧ ವಾಗ್ದಾಳಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜೆಡಿಎಸ್ ಶಾಸಕ ಕೆ.ಮಹದೇವ್ ಅವರ ಮೊದಲ ಪತ್ನಿಯ ಮಗಳು ಎಂದು ಹೇಳಿಕೊಂಡ ಶಾಲಿನಿ ಎಂಬುವವರು, ಮಹದೇವ್ ಅವರು ನಮಗೆ ಮೋಸ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ತಮಗೆ ಬಿಜೆಪಿಯಿಂದ 40 ಕೋಟಿ ಆಮಿಷ ಒಡ್ಡಿದ್ದರೂ ತಾವು ಪಕ್ಷಕ್ಕೆ ನಿಷ್ಠರಾಗಿ ಉಳಿದಿದ್ದಾಗಿ ಎರಡು ದಿನಗಳ ಹಿಂದೆ ಶಾಸಕ ಮಹದೇವ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡ ಮಹಿಳೆ, ಶಾಸಕರು ಇದೇ ನಿಷ್ಠೆಯನ್ನು ಕುಟುಂಬದ ವಿಷಯದಲ್ಲೂ ತೋರಬೇಕಿತ್ತು ಎಂದು ವಿಡಿಯೋದಲ್ಲಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 40 ಕೋಟಿ ರುಪಾಯಿ ಆಫರ್ ರಹಸ್ಯ ಬಿಚ್ಚಿಟ್ಟ ಜೆಡಿಎಸ್ ಶಾಸಕ ಕೆ.ಮಹದೇವ್ 40 ಕೋಟಿ ರುಪಾಯಿ ಆಫರ್ ರಹಸ್ಯ ಬಿಚ್ಚಿಟ್ಟ ಜೆಡಿಎಸ್ ಶಾಸಕ ಕೆ.ಮಹದೇವ್

ಮಹದೇವ್ ಅವರೇ ನಿಮ್ಮ ಈ ಸ್ವಾಭಿಮಾನ, ನಿಷ್ಠೆ ಕುಟುಂಬಕ್ಕೂ ಇದ್ದಿದ್ದರೆ ನಾನು, ನನ್ನ ತಾಯಿ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದಲ್ಲಿ ಕೂಲಿ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕಿರಲಿಲ್ಲ. ವರದಕ್ಷಿಣೆ ರೂಪದಲ್ಲಿ ಚಿನ್ನ ತರಲಿಲ್ಲ ಎಂದು ಆಳಿಗಿಂತ ಕೀಳಾಗಿ ಕಂಡು, ಊಟ ಹಾಕದೆ, ಹೆಣ್ಣು ಮಗಳಿದ್ದಾಳೆ ಎಂಬುದನ್ನೂ ಪರಿಗಣಿಸದೆ ಪತ್ನಿಯನ್ನು ಮನೆಯಿಂದ ಹೊರ ಹಾಕುವಾಗ ನಿಮ್ಮ ನಿಷ್ಠೆ, ಸ್ವಾಭಿಮಾನ ಎಲ್ಲಿ ಹೋಗಿತ್ತು? ನನ್ನ ವಿಡಿಯೊ ಹೇಳಿಕೆ ಸುಳ್ಳು ಎಂದು ನೀವು ನಿರಾಕರಿಸುವುದಿದ್ದರೆ ಒಮ್ಮೆ ನಮ್ಮ ಮುಂದೆ ನಿಂತು ಮಾತನಾಡಿ. ಆಗ ನಿಮ್ಮ ನಿಷ್ಠೆ ಏನು ಎಂಬುದನ್ನು ಸಾಮಾಜಿಕ ಜಾಲತಾಣದ ಮೂಲಕವೇ ಜಗಜ್ಜಾಹೀರುಗೊಳಿಸುವೆ. ಮಹದೇವ್ ಅವರು ತಮ್ಮ ಕುಟುಂಬಕ್ಕೆ ನಿಷ್ಠರಾಗಿದ್ದಾರಾ? ನಮಗೆ ನ್ಯಾಯ ಕೊಟ್ಟಿದ್ದಾರಾ ಎಂಬುದನ್ನು ಮೊದಲು ಹೇಳಲಿ ಎಂದು ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.

video viral in social media against jds mla Mahadev

ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಮಹದೇವ್, ನನ್ನ ರಾಜಕೀಯ ವೈರಿಗಳು ನಡೆಸಿಕೊಂಡು ಬಂದಿರುವ ಕುತಂತ್ರವಿದು. ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಅಷ್ಟೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಇದು ಮಾಜಿ ಶಾಸಕನ ಪಿತೂರಿ. ದುಡ್ಡಿಗಾಗಿ ಇಂಥ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ತಿಳಿಸಿದರು.

English summary
Shalini, who claims to be the daughter of JDS MLA K Mahadev's first wife, posted a video on social media saying that Mahadev cheated on us is going viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X