ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ- ಮೈಸೂರಲ್ಲಿ ಶೆಟರ್ ಮುರಿದು ಐ-ಫೋನ್ ದೋಚಿದ ಕಳ್ಳರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 02: ಮೊಬೈಲ್ ಅಂಗಡಿ ಶೆಟರ್ ಬೀಗ​ ಮುರಿದು ಸುಮಾರು ೩೩ ಲಕ್ಷ ರುಪಾಯಿ ಮೌಲ್ಯದ ಮೊಬೈಲ್‌ಗಳನ್ನು ಕಳ್ಳತನ ಮಾಡಿರುವ ಘಟನೆ ಮೈಸೂರು ನಗರದ ನ್ಯೂ ಕಾಂತರಾಜೇ ಅರಸ್ ರಸ್ತೆಯಲ್ಲಿ ನಡೆದಿದೆ.

Recommended Video

Tejasvi Surya Exclusive interview part 2 | Tejasvi Surya | Oneindia Kannada

ಜೆಎಸ್ಎಸ್ ಲಾ ಕಾಲೇಜು ಬಿಲ್ಡಿಂಗ್ ನ ಎಸ್ ಶಾಪಿ.ಕಾಂ ಪ್ರೈ.ಲಿ ಎಂಬ ಮೊಬೈಲ್ ಅಂಗಡಿಯಲ್ಲಿ ಕಳ್ಳತನವಾಗಿದೆ. ಅಂಗಡಿ ಮಾಲೀಕ ಸತೀಶ್ ಕುಮಾರ್ ಫೆಬ್ರವರಿ 28 ರಂದು ರಾತ್ರಿ 9 ಗಂಟೆಗೆ ಅಂಗಡಿ ಬೀಗ ಹಾಕಿ ಮನೆಗೆ ತೆರಳಿದ್ದಾರೆ. ಮಾರನೇ ದಿನ ಬೆಳಿಗ್ಗೆ 10:30 ಸುಮಾರಿಗೆ ಅಂಗಡಿ ಬಳಿ ಹೋಗಿ ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ನಂಜನಗೂಡು ಕಾಮುಕ ಶಿಕ್ಷಕನ ವಿರುದ್ಧ ತಿರುಗಿಬಿದ್ದ ಪೋಷಕರುನಂಜನಗೂಡು ಕಾಮುಕ ಶಿಕ್ಷಕನ ವಿರುದ್ಧ ತಿರುಗಿಬಿದ್ದ ಪೋಷಕರು

ಬೆಳಗಿನ ಜಾವ ಅಂಗಡಿಗೆ ನುಗ್ಗಿದ ಕಳ್ಳರ ಗುಂಪೊಂದು ಎಚ್ಚರಿಕೆಯಿಂದ ಶೆಟರ್​​ ಬೀಗ ಮುರಿದಿದ್ದಾರೆ. ಒಬ್ಬ ರಸ್ತೆ ಭಾಗದ ಕಡೆ ಮುಖ ಮಾಡಿ ಬೆಡ್​ಶೀಟ್ ಅಡ್ಡ​ ಹಿಡಿದು ನಿಂತಿದ್ರೆ, ಉಳಿದ ಮೂವರು ಅಂಗಡಿ ಲಾಕ್ ಓಪನ್ ಮಾಡಿ ಅಂಗಡಿಯೊಳಗೆ ನುಗ್ಗಿದ್ದಾರೆ.

Video Of Thieves Grabbing I-Phones Captured In CCTV

ಕಳ್ಳರ ಕೈಚಳಕದ ದೃಶ್ಯಗಳು ಅಂಗಡಿ ಹೊರಗಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊಬೈಲ್ ಶಾಪ್​ನಲ್ಲಿ ಐಫೋನ್​ಗಳನ್ನೇ ಹೆಚ್ಚಾಗಿ ಕದ್ದಿರುವುದು ತಿಳಿದು ಬಂದಿದೆ. ಘಟನೆ ಸಂಬಂಧ ಕುವೆಂಪು ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ನಾಲ್ವರು ಕಳ್ಳರು ಮುಂಜಾನೆ 5.30 ರ ಸಮಯದಲ್ಲಿ ದುಬಾರಿ ಐಫೋನ್​ಗಳನ್ನು ಚೀಲಕ್ಕೆ ತುಂಬಿಕೊಂಡು ಸುಮಾರು 39 ಐಫೋನ್​ಗಳನ್ನು ಹಾಗೂ ಇತರ ಒನ್ ಪ್ಲಸ್, ಒಪ್ಪೋ ಮತ್ತು ರಿಯಲ್ ಮಿ ಫೋನ್​ಗಳನ್ನು ಕಳ್ಳತನ ಮಾಡಿರುವುದು ತಿಳಿದುಬಂದಿದೆ.

Video Of Thieves Grabbing I-Phones Captured In CCTV

39 ಐಫೋನ್ ಸೇರಿ 33 ಲಕ್ಷ ರೂ. ಮೌಲ್ಯದ 60 ಮೊಬೈಲ್​ಗಳನ್ನು ಕದ್ದಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

English summary
The incident happened on New Kantaraje Urs Road in Mysuru where a Thieves Stolen 33 Lakhs worth Mobile Phones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X