ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ನಟ್ಟನಡುವೆ ಜನರ ಮಧ್ಯೆಯೇ ಆರಾಮಾಗಿ ನಡೆದಾಡಿದ ಚಿರತೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 6: ಕಾಡಾನೆಗಳ ಹಾವಳಿ ಜತೆಗೇ ಇದೀಗ ಚಿರತೆ ಹಾವಳಿ ಕೂಡ ಶುರುವಾಗಿದೆ. ಪ್ರತಿದಿನ ಅನೇಕ ಗ್ರಾಮೀಣ ಭಾಗ ಹಾಗೂ ನಗರಗಳ ಹೊರವಲಯದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿವೆ.

ಹೀಗೆ ಚಿರತೆ ಮರಿಯೊಂದು ಹುಣಸೂರು-ಗೋಣಿಗೊಪ್ಪ ಮುಖ್ಯರಸ್ತೆ ಮಧ್ಯೆ ಕಾಣಿಸಿಕೊಂಡಿದ್ದು, ಆ ವೀಡಿಯೋ ಈಗ ವೈರಲ್ ಆಗಿದೆ. ಹಾಡುಹಗಲೇ ಚಿರತೆ ಮರಿಯೊಂದು ಜನರಿಗೆ ದರ್ಶನ ಕೊಟ್ಟಿದೆ. ಅದರೆ ಜನರು ಹೆದರಿ ಓಡದೇ ಅಲ್ಲೇ ಚಿರತೆಯನ್ನು ನೋಡುತ್ತಾ ನಿಂತಿದ್ದಾರೆ. ಸುಮಾರು ಎರಡು ವರ್ಷ ಪ್ರಾಯದ್ದೆನ್ನಲಾದ ಈ ಚಿರತೆ ಏಕಾಏಕಿ ಮುಖ್ಯ ರಸ್ತೆಯಲ್ಲಿ ವಾಹನಗಳ ಮಧ್ಯೆಯೇ ಆರಾಮವಾಗಿ ತಿರುಗಾಡಿಕೊಂಡು ಕಾಡಿಗೆ ಹೋಗಿದೆ.

 ದಾರಿ ಮಧ್ಯೆ ಚಿರತೆಗಳ ಮಿಲನ; ವೈರಲ್ ಆಯ್ತು ವೀಡಿಯೋ ದಾರಿ ಮಧ್ಯೆ ಚಿರತೆಗಳ ಮಿಲನ; ವೈರಲ್ ಆಯ್ತು ವೀಡಿಯೋ

Video Of Leopard Cub Walking On Hunsur Gonikoppa Road Viral

ಹುಣಸೂರು - ಗೋಣಿಗೊಪ್ಪ ಮುಖ್ಯರಸ್ತೆಯ ತಿತಿಮತಿ ಅರಣ್ಯ ಪ್ರದೇಶದ ಆನೆಚೌಕೂರು ಮುಂದೆ ಇರುವ ಮಾರಮ್ಮ ದೇವಸ್ಥಾನದ ಬಳಿ ಚಿರತೆ ಮರಿಯೊಂದು ತಾಯಿಯಿಂದ ಬೇರ್ಪಟ್ಟು ಮುಖ್ಯರಸ್ತೆಗೆ ಬಂದು ತಿರುಗಾಡುತ್ತಿತ್ತು. ಈ ದೃಶ್ಯವನ್ನು ಜನರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

English summary
A video of leopard cub appeared in the middle of a hunsur-gonikoppa main road in between people gone viral,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X