ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ನಿರ್ಲಕ್ಷ್ಯ: ವಾಹನಗಳನ್ನು ವಶಕ್ಕೆ ಪಡೆದ ಮೈಸೂರು ಪೊಲೀಸ್‌

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 27: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವೇ ಸಂಪೂರ್ಣ ಭಾರತವನ್ನು ಲಾಕ್ ಡೌನ್ ಘೋಷಿಸಿದೆ.

ಮೈಸೂರು ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶ ನೀಡಿದ್ದರೂ, ತರಕಾರಿ ವ್ಯಾಪಾರಿಗಳು ಕ್ಯಾರೆ ಎನ್ನುತ್ತಿಲ್ಲ. ಮೈಸೂರಿನಲ್ಲಿಂದು ಹತ್ತು ಆಟೋ ರಿಕ್ಷಾಗಳು ಮತ್ತು ಮೂರು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿರ್ಗತಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಮೈಸೂರು ಜಿಲ್ಲಾಡಳಿತನಿರ್ಗತಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಮೈಸೂರು ಜಿಲ್ಲಾಡಳಿತ

ಇಂದು ಮೈಸೂರು ಎಂ.ಜಿ ರಸ್ತೆಯಲ್ಲಿ ಮಾರುಕಟ್ಟೆಯ ಗಿಜಿಗಿಜಿ ಮುಂದುವರಿದಿದ್ದು, ನಿನ್ನೆ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರು ಆದೇಶ ನೀಡಿ, ಮಾರುಕಟ್ಟೆಯನ್ನು ದಸರಾ ವಸ್ತು ಪ್ರದರ್ಶನ ಮೈದಾನಕ್ಕೆ ಸ್ಥಳಾಂತರ ಮಾಡಿಸಿದ್ದರು. ಅವರ ಆದೇಶ ಪಾಲಿಸದ ವ್ಯಾಪಾರಸ್ಥರು ಮತ್ತು ರೈತರು ಮತ್ತದೇ ಸ್ಥಳದಲ್ಲಿ ವ್ಯಾಪಾರ ಮುಂದುವರಿಸಿದ್ದಾರೆ.

Corona Negligence: Mysuru Police Have Been Seized Vehicles

ಇಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯ ಬಳಿ ಸೇರಿದ್ದರಿಂದ ಅವರನ್ನು ಕರೆದೊಯ್ಯಲು ರಸ್ತೆಗಿಳಿದ ಹತ್ತು ಆಟೋಗಳನ್ನು ಮತ್ತು ಮೂರು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದರು.

ದಸರಾ ವಸ್ತು ಪ್ರದರ್ಶನ ಮೈದಾನವನ್ನು ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗ ಸಮತಟ್ಟುಗೊಳಿಸಲಾಗುತ್ತಿದೆ. ಕೊರೊನಾ ಬಗೆಗೆ ಪೊಲೀಸರು ಎಷ್ಟು ಹೇಳಿದರೂ ಜನರು ಕೇಳುತ್ತಿಲ್ಲ.

ಮೈಸೂರು ನಗರದಲ್ಲಿ ರಾಸಾಯನಿಕ ಸಿಂಪಡಣೆ ಏಕೆ?ಮೈಸೂರು ನಗರದಲ್ಲಿ ರಾಸಾಯನಿಕ ಸಿಂಪಡಣೆ ಏಕೆ?

ಬಿದಿಗಿಳಿಯುತ್ತಿರುವ ಜನದಟ್ಟಣೆಯನ್ನು ತಡೆಯಲು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಜಿಲ್ಲಾಡಳಿತವು ಕ್ರಮಕ್ಕೆ ಮುಂದಾಗಿದೆ. ಎಲ್ಲ ಅಂಗಡಿಗಳಲ್ಲೂ 4 ಅಡಿಗಳ ವರೆಗೆ ಮಾರ್ಕಿಂಗ್ ಮಾಡಿದ ನಂತರವೇ ಅಂಗಡಿ ತೆರೆಯುವಂತೆ ಸೂಚಿಸಲಾಗಿದೆ.

English summary
Ten auto rickshaws and Three bikes were seized by the police in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X