ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಾಹನ ಸವಾರರ ಜೇಬಿಗೆ ಕತ್ತರಿ

By Coovercolly Indresh
|
Google Oneindia Kannada News

ಮೈಸೂರು, ನವೆಂಬರ್ 27: ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ವ್ಯಾಪಾರ ವಹಿವಾಟು ಕುಸಿದಿದೆ. ಈ ಸಂದರ್ಭದಲ್ಲಿ ಜನರಿಗೆ ಆರ್ಥಿಕ ಹೊರೆ ಆಗದಂತೆ ಸರ್ಕಾರ ಕೆಲಸ ಮಾಡಬೇಕಿದೆ. ಆದರೆ ಇದೀಗ ಹೊಸದಾಗಿ ಶುಲ್ಕ ವಿಧಿಸುವ ಮೂಲಕ ಸರ್ಕಾರಿ ಸಂಸ್ಥೆಯೇ ಹಣ ಸುಲಿಗೆಗೆ ಮುಂದಾಗಿದೆ.

ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರದಿಂದ ಚಾಮುಂಡೇಶ್ವರಿಯ ದರ್ಶನಕ್ಕೆ ತೆರಳುವಾಗ ವಾಹನವನ್ನೇನಾದರೂ ಕೊಂಡೊಯ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಹೊಸದಾಗಿ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತಿದೆ.

 ಪ್ರವಾಸಿಗರಿಗೆ ತೆರೆದುಕೊಂಡ ಹಾರಂಗಿ ಜಲಾಶಯ, ಉದ್ಯಾನ ಪ್ರವಾಸಿಗರಿಗೆ ತೆರೆದುಕೊಂಡ ಹಾರಂಗಿ ಜಲಾಶಯ, ಉದ್ಯಾನ

ಚಾಮುಂಡಿ ಬೆಟ್ಟದಲ್ಲಿ ಹೊಸದಾಗಿ ವಾಹನ ನಿಲುಗಡೆ ಶುಲ್ಕವನ್ನು ನಿಗದಿ ಮಾಡಲಾಗಿದೆ. ಕಾರು, ಬೈಕ್, ಟಿ.ಟಿ ವಾಹನಗಳ ನಿಲುಗಡೆಗೆ ಶುಲ್ಕ ವಿಧಿಸಲಾಗುತ್ತಿದೆ. ಬಹುಮಹಡಿ ಪಾರ್ಕಿಂಗ್ ಕಟ್ಟಡದಲ್ಲಿ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದೇವಾಲಯದ ಆಡಳಿತ ಮಂಡಳಿಯಿಂದಲೇ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಶುಲ್ಕದಿಂದ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ತಾಯಿಯ ದರ್ಶನಕ್ಕೆ ಬರುವ ಪ್ರವಾಸಿಗರಿಗೆ ಮತ್ತಷ್ಟು ಹೊರೆಯಾಗಲಿದೆ.

Mysuru: Vehicles Parking Charge For Pilgrims Visiting Chamundi Hills

ಈ ಹಿಂದೆ ಉಚಿತವಾಗಿ ನಿಲುಗಡೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಕಾರಿಗೆ 40 ರೂ, ಬಸ್ಸಿಗೆ 100 ರೂ ನಿಗದಿ ಮಾಡಲಾಗಿದೆ. ಬೆಟ್ಟದ ನಿವಾಸಿಗಳನ್ನು ಹೊರತು ಪಡಿಸಿ ಎಲ್ಲರಿಗೂ ನಿಲುಗಡೆ ಶುಲ್ಕ ಕಡ್ಡಾಯ ಎನ್ನಲಾಗಿದೆ. ಇದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ಈ ಶುಲ್ಕವನ್ನು ರದ್ದು ಮಾಡಬೇಕು ಎಂದು ಭಕ್ತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

English summary
Parking charge will be imposed on pilgrims who are visiting Chamundi Hills from friday in Mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X