ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಷಾಢ ಬಂದರೂ ಇಳಿದಿಲ್ಲ ತರಕಾರಿ, ಹಣ್ಣು, ಹೂ ಬೆಲೆ

|
Google Oneindia Kannada News

ಮೈಸೂರು, ಜುಲೈ 9: ಆಷಾಢ ಮಾಸವೆಂದರೆ ಶುಭ ಕಾರ್ಯಗಳು ಕಡಿಮೆ. ಹಾಗಾಗಿ ಈ ಕಾಲದಲ್ಲಿ ತರಕಾರಿ, ಹಣ್ಣು, ಹೂವಿನ ಬೆಲೆ ಇಳಿಮುಖವಾಗಬೇಕು. ಆದರೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮಳೆ ಪ್ರಮಾಣ ಕಡಿಮೆಯಾಗಿರುವುದೇ ಬೆಲೆ ಏರಿಕೆಗೆ ಕಾರಣ ಎನ್ನುತ್ತಿದ್ದಾರೆ ವ್ಯಾಪಾರಿಗಳು.

ಮೋಡ ಕವಿದ ವಾತಾವರಣ ಸೊಪ್ಪು ಬೆಳೆಯಲು ಪೂರಕವಾಗಿದ್ದು, ಕಳೆದ ವಾರ 50ರೂಗೆ ಒಂದು ಕಟ್ಟು ಮಾರಾಟವಾಗುತ್ತಿದ್ದ ಕೊತ್ತಂಬರಿ ಈ ವಾರ 30ರೂಗೆ ಇಳಿಮುಖವಾಗಿದೆ. ಕಳೆದ ಮೂರು ತಿಂಗಳಿಂದ ಬೇಸಿಗೆ ಕಾರಣ 40 ರಿಂದ 70ರೂಗೆ ಒಂದು ಕಟ್ಟು ಮಾರಾಟವಾಗುತ್ತಿದ್ದ ಕೊತ್ತಂಬರಿ, ಸಾಮಾನ್ಯ ಗ್ರಾಹಕರಿಗೆ ಕೈಗೆಟುಕದಂತಾಗಿತ್ತು. ಆದರೆ ಈಗ ಸೊಪ್ಪು ಬೆಳೆಯಲು ಅನುಕೂಲವಾದ ಮೋಡ ಕವಿದ ವಾತಾವರಣವಿದ್ದು, ಆಗಾಗ ತುಂತುರು ಮಳೆ ಬರುತ್ತಿದೆ. ಸ್ಥಳೀಯವಾಗಿ ಹೆಚ್ಚು ಕೊತ್ತಂಬರಿ ಬೆಳೆಯಲಾಗಿದ್ದು, ಮಾರುಕಟ್ಟೆಗೂ ಭಾರೀ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ.

 ಮೆದುಳು ಜ್ವರ, ಬಿಹಾರದಿಂದ ಬರುವ ತರಕಾರಿ,ಹಣ್ಣುಗಳಿಗೆ ನೇಪಾಳ ಬ್ರೇಕ್ ಮೆದುಳು ಜ್ವರ, ಬಿಹಾರದಿಂದ ಬರುವ ತರಕಾರಿ,ಹಣ್ಣುಗಳಿಗೆ ನೇಪಾಳ ಬ್ರೇಕ್

ಆಷಾಢ ಮಾಸ ಪ್ರಾರಂಭವಾಗಿದ್ದು, ಯಾವುದೇ ಶುಭ ಕಾರ್ಯಗಳು ನಡೆಯುತ್ತಿಲ್ಲ. ಹೀಗಾಗಿ ಸೊಪ್ಪಿನ ಬೇಡಿಕೆ ಕಡಿಮೆಯಾಗಿದೆ. ಇನ್ನೊಂದೆಡೆ ಸ್ಥಳೀಯವಾಗಿ ಬೆಳೆದ ಸೊಪ್ಪು ಹೆಚ್ಚಾಗಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು. ಎರಡು ವಾರಗಳ ಹಿಂದೆ 60ಕ್ಕೆ ಕೆ.ಜಿ ಮಾರಾಟವಾಗುತ್ತಿದ್ದ ಬೀನ್ಸ್ ಈ ವಾರ 30ರೂಕ್ಕೆ ಕೆ.ಜಿ ಮಾರಾಟವಾಗುತ್ತಿದೆ. ದಪ್ಪಮೆಣಸಿನಕಾಯಿ, ಹಾಗಲಕಾಯಿ ಕೆ.ಜಿಗೆ 6೦ ರೂ ಮಾರಾಟವಾಗುತ್ತಿದೆ. ಕ್ಯಾರೆಟ್ ಕೆ.ಜಿಗೆ 50 ರೂ, ಬೀಟ್‌ರೂಟ್, ಚವಳೆಕಾಯಿ, ಸೀಮೆ ಬದನೆ, ಸುವರ್ಣ ಗೆಡ್ಡೆ 40. ರೂಕ್ಕೆ ಮಾರಾಟವಾಗುತ್ತಿವೆ.

Vegetables flowers rates didnt come down in ashada

ಟೊಮೆಟೊ, ಹೀರೇಕಾಯಿ, ಬದನೆ, ಗೆಡ್ಡೆಕೋಸು, ಪಡವಲಕಾಯಿ, ಹೂಕೋಸು, ಎಲೆಕೋಸು, ತೊಂಡೆ ಕಾಯಿ, ಕುಂಬಳಕಾಯಿ 30 ರೂ, ಈರುಳ್ಳಿ, ಆಲೂಗಡ್ಡೆ 25. ರೂ, ಮೂಲಂಗಿ, ಬೆಂಡೆಕಾಯಿ ಸೌತೆ 20ರೂಗೆ ಕೆ.ಜಿ ಮಾರಾಟವಾಗುತ್ತಿವೆ.

ಗಗನಕ್ಕೇರಿದ ಕೊತ್ತಂಬರಿ ಸೇರಿ ಇತರೆ ಸೊಪ್ಪು, ತರಕಾರಿಗಳ ಬೆಲೆ ಗಗನಕ್ಕೇರಿದ ಕೊತ್ತಂಬರಿ ಸೇರಿ ಇತರೆ ಸೊಪ್ಪು, ತರಕಾರಿಗಳ ಬೆಲೆ

ಬಹುಪಾಲು ಎಲ್ಲ ತರಕಾರಿಗಳ ಬೆಲೆಗಳು ಏರಿಕೆಯ ಗತಿಯಲ್ಲೇ ಇವೆ. ಹಸಿಮೆಣಸಿನಕಾಯಿಯ ಸಗಟು ಧಾರಣೆ ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ 40ರಿಂದ 35ರೂಕ್ಕೆ ಕಡಿಮೆಯಾಗಿರುವುದನ್ನು ಬಿಟ್ಟರೆ ಇನ್ನಾವ ತರಕಾರಿಗಳ ಬೆಲೆಗಳೂ ಕಡಿಮೆಯಾಗಿಲ್ಲ.

English summary
Vegetables, flowers rates in mysuru market didnt come down in ashada month also. lack of rain is the main reason for price hike according to merchants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X