• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹದೇಶ್ವರ ಬೆಟ್ಟದಲ್ಲಿ ವೀರಪ್ಪನ್-2 ಹಾವಳಿ ಜೋರು

By Srinath
|

ಮೈಸೂರು, ಜೂನ್ 11: ಕಾಡುಗಳ್ಳ ವೀರಪ್ಪನ್ ಹಾವಳಿಯಿಂದ ಹೈರಾಣಗೊಂಡಿದ್ದ ಮಹದೇಶ್ವರಬೆಟ್ಟ ಪ್ರದೇಶದಲ್ಲಿರುವ ಜನರಿಗೆ ಈಗ ಅಂತಹುದೆ ಮತ್ತೊಬ್ಬನ ಕಾಟ ಜೋರಾಗಿ ಕಾಡತೊಡಗಿದೆ. ವೀರಪ್ಪನ್ -2 ಆನೆಗಳನ್ನು ಸಾಯಿಸುತ್ತಾ, ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸುತ್ತಾ, ಸುತ್ತಮುತ್ತಲ ಗ್ರಾಮಸ್ಥರನ್ನು ಬೆದರಿಸುತ್ತಾ ಅಟ್ಟಹಾಸ ಮೆರೆಯುತ್ತಿದ್ದಾನೆ.

ವೀರಪ್ಪನ್ ಅಪರಾವತಾರಿ ಶರವಣನ್: (ವೀರಪ್ಪನ್ ಬಂಟರಿಗೆ ಮರಣದಂಡನೆ ಖಾಯಂ ಆಯ್ತು)

ಶರವಣನ್ ಹೆಸರಿನ ವೀರಪ್ಪನ್ ಅಪರಾವತಾರಿ ಮೂಲತಃ ಸೇಲಂ ಜಿಲ್ಲೆಯ ಕಾರ್ಯೆಕಾಡು ಗ್ರಾಮದವನು. ಕಳೆದೊಂದು ವರ್ಷದಿಂದ ಇತ್ತ ಕರ್ನಾಟಕ ಭಾಗದಲ್ಲಿ ಠಳಾಯಿಸುತ್ತಿದ್ದು, ಸ್ಥಳೀಯರಿಗೆ ತಲೆನೋವಾಗಿದ್ದಾನೆ. ತಮಿಳುನಾಡಿನಲ್ಲಿ ಅವನ ವಿರುದ್ಧ ಈಗಾಗಲೇ 17 ಕೇಸುಗಳು ದಾಖಲಾಗಿವೆ.

ಶರವಣನ ಭೀಬತ್ಸ, ಅಕ್ರಮ ಚಟುವಟಿಕೆಯನ್ನು ನೋಡಿ ದಶಕಗಳ ಕಾಲ ಇಲ್ಲಿನ ಅರಣ್ಯ ಪ್ರದೇಶಗಳಲ್ಲಿ ಅಟ್ಟಹಾಸ ಮೆರೆದಿದ್ದ ವೀರಪ್ಪನನ ದುಃಸ್ವಪ್ನ ಕಂಡವರಂತೆ ಆತಂಕಕ್ಕೊಳಗಾಗಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸೆಣಬು, ಕತ್ತಾಳೆ ಮತ್ತು ಕಾಡು ಮಾಂಸಕ್ಕೆ ಬೇಡಿಕೆ ವಿಪರೀತವಾಗಿದ್ದು, ಶರವಣನ್ ಗುಪ್ತವಾಗಿ ಆ ವ್ಯಾಪಾರದಲ್ಲಿ ತೊಡಗಿದ್ದು, ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾನೆ ಎಂದು ಸ್ಥಳೀಯರು ಹೇಳುತ್ತಾರೆ.

ಪಾಲಾರ್ ಪ್ರದೇಶದಲ್ಲಿ ಹಾವಳಿ ಹೆಚ್ಚು:

ಸಣ್ಣ ಪ್ರಮಾಣದ ಕಾಡುಬೇಟೆಗಾರನಾಗಿ ಧುತ್ತನೆ ಕಾಣಿಸಿಕೊಳ್ಳುತ್ತಿದ್ದ ಈ ಧೂರ್ತ ಇದೀಗ ತನ್ನ ಕಾನೂನಬಾಹಿರ ಚಟುವಟಿಕೆಗೆ ಅಡ್ಡಬರುವವರನ್ನು ಅಟ್ಟಾಡಿಸುತ್ತಾ ಕುಖ್ಯಾತಿ ಗಳಿಸುತ್ತಿದ್ದಾನೆ. ಕಾಡುಗಳಲ್ಲಿ ಪ್ರತ್ಯಕ್ಷನಾಗುವ ಶರವಣನ್ ಮತ್ತು ಅವನ ತಂಡದವರು ತಮ್ಮನ್ನು ಹಿಡಿಯಲು ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಜನರಿಗೆ ಬೆದರಿಸುತ್ತಿದ್ದಾರೆ.

ರಾತ್ರಿ ಕಾರ್ಯಚರಣೆಯಲ್ಲಿ ತೊಡಗುವ ಅರಣ್ಯ ಸಿಬ್ಬಂದಿಯನ್ನು ಗೋಳುಹೊಯ್ದುಳ್ಳುತ್ತಿದ್ದಾನೆ. ಅರಣ್ಯ ಪಾಲಕರು ಮತ್ತೆ ಕಾಡಿನತ್ತ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಬಂದೂಕು, ಗನ್ನುಗಳು ಅರಣ್ಯ ಪ್ರದೇಶದಲ್ಲಿ ಪ್ರತ್ಯಕ್ಷವಾಗುತ್ತಿವೆ.

ಅಗತ್ಯಬಿದ್ದರೆ ಹೆಚ್ಚುವರಿ ಪಡೆಗಳನ್ನು ತರಿಸಿಕೊಂಡು, ತಮಿಳುನಾಡು ಪೊಲೀಸರ ನೆರವು ಪಡೆದು ಶರವಣನ್ ಮತ್ತು ಅವನ ತಂಡದವರನ್ನು ಹಿಡಿಯುತ್ತೇವೆ ಎಂದು ಕರ್ನಾಟಕದ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರಾ ಭರವಸೆಯ ಮಾತು ಹೇಳುತ್ತಾರೆ. ಶರವಣನ್ ಪೂರ್ಣಪ್ರಮಾಣದಲ್ಲಿ ಚಿಗಿತುಕೊಳ್ಳುವ ಮುನ್ನ ಈಗಲೇ ಚಿವುಟಿ ಹಾಕುವ ಜರೂರತ್ತು ಬಹಳಷ್ಟಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Veerappan-2 Saravanan on Prowl in Male Mahadeshwara Hills region. The poacher, Saravanan, a native of Karyekadu in Salem district, has been active in the area for the past year. He has 17 cases against him in Tamil Nadu. Due to his violent ways and activities, villagers have begun referring to him as Veerappan, who reigned in the region for decades.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more