ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಜರಾತ್ ವಾಯು ಚಂಡಮಾರುತದಿಂದ ಮೈಸೂರಿನಲ್ಲಿ ಮುಂಗಾರಿಗೆ ಅಡ್ಡಿ

|
Google Oneindia Kannada News

ಮೈಸೂರು, ಜೂನ್ 14: ಗುಜರಾತ್ ನಲ್ಲಿ ವಾಯು ಚಂಡಮಾರುತದ ಅಬ್ಬರ ಹೆಚ್ಚಾದ ಹಿನ್ನೆಲೆ, ಮೈಸೂರು ಜಿಲ್ಲೆ ಹಾಗೂ ಅಕ್ಕಪಕ್ಕದ ಪ್ರದೇಶದಲ್ಲಿ ಮುಂಗಾರಿಗೆ ಅಡ್ಡಿಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಎದ್ದಿರುವ ವಾಯುಭಾರದಿಂದಾಗಿ ಕೇರಳ ರಾಜ್ಯ ಪ್ರವೇಶಿಸಿದ ಮುಂಗಾರು, ಮೈಸೂರು ಹಾಗೂ ಸುತ್ತಲಿನ ಪ್ರದೇಶದಲ್ಲಿ ಒಂದು ದಿನ ಮಾತ್ರ ಕಾಣಿಸಿಕೊಂಡು ನಂತರ ಮೋಡ ಚದುರಿ ನಿಂತುಹೋಗಿದೆ. ಮಡಿಕೇರಿಯಲ್ಲೂ ಒಂದು ದಿನ ಮಾತ್ರ ಮುಂಗಾರು ಮಳೆ ಬಿದ್ದಿದೆ. ಅಲ್ಲಿ ಇನ್ನು ಕೆಲವು ದಿನಗಳಲ್ಲಿ ಮುಂಗಾರು ಮತ್ತೆ ಆರಂಭವಾಗುವ ನಿರೀಕ್ಷೆಯಿದೆ.

 ಅಬ್ಬರಿಸಲಿದೆ 'ವಾಯು' ಚಂಡಮಾರುತ, ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ ಅಬ್ಬರಿಸಲಿದೆ 'ವಾಯು' ಚಂಡಮಾರುತ, ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯ ಇನ್ನೂ ನಾಲ್ಕೈದು ದಿನಗಳಲ್ಲಿ ಇಳಿಮುಖಗೊಳ್ಳಲಿದೆ. ಕೆಲವೇ ದಿನದಲ್ಲಿ ಮತ್ತೆ ಮುಂಗಾರು ಮಳೆ ಆರಂಭವಾಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಹವಾಮಾನ ಅಧಿಕಾರಿಗಳು. ಮೈಸೂರು ನಗರದಲ್ಲಿ ಗಾಳಿಯ ವೇಗ ಗಂಟೆಗೆ 10-12 ಕಿ.ಮೀ ಇರುವುದಾಗಿ ದಾಖಲಾಗಿದೆ. ಸಾಮಾನ್ಯವಾಗಿ ಪ್ರತಿದಿನದ ಗಾಳಿಯ ವೇಗ 2-4 ಕಿ.ಮೀ ಇರುತ್ತದೆ.

Vayu storm in Gujarat effects on Mysuru

 ಕರ್ನಾಟಕದಲ್ಲಿ ಮುಂಗಾರಿಗೂ ಮುನ್ನ ಅಬ್ಬರಿಸಲಿದೆ ಸೈಕ್ಲೋನ್ 'ವಾಯು' ಕರ್ನಾಟಕದಲ್ಲಿ ಮುಂಗಾರಿಗೂ ಮುನ್ನ ಅಬ್ಬರಿಸಲಿದೆ ಸೈಕ್ಲೋನ್ 'ವಾಯು'

ಗುಜರಾತ್ ಭಾಗದ ಕಬ್ಬಡಿ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಹೆಚ್ಚಾಗಿದೆ. ಅಲ್ಲಿಂದ ಮಹಾರಾಷ್ಟ್ರ, ಗೋವಾ, ಮಂಗಳೂರು ತಲುಪುವಷ್ಟರಲ್ಲಿ ಅದರ ವೇಗ ಸಂಪೂರ್ಣ ಕಡಿತಗೊಳ್ಳುತ್ತದೆ. ಮುಂಗಾರು ಕೈಕೊಟ್ಟಿತು ಎಂದು ರೈತರು ಚಿಂತಿಸುವುದು ಬೇಡ. ಮಳೆ ಒಂದೆರಡು ದಿನ ತಡವಾಗಿದೆ ಅಷ್ಟೇ. ರೈತರು ದೀರ್ಘಾವಧಿ ಬೆಳೆಗಿಂತ ಅಲ್ಪಾವಧಿ ಬೆಳೆ ಬೆಳೆಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ ಹವಾಮಾನ ಇಲಾಖೆ ಅಧಿಕಾರಿ ನರೇಂದ್ರ ಬಾಬು.

English summary
Vayu storm in Gujarat effects on mysuru. it brings Cold weather. Per hour 10 to 12 km air Intensity has been recorded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X