• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೂಪರ್ ಸ್ಟಾರ್ ರಜನೀಕಾಂತ್ ತಮಿಳುನಾಡಿನ ಏಜೆಂಟ್: ವಾಟಾಳ್

By Yashaswini
|

ಮೈಸೂರು, ಮೇ 21 : ಕಾವೇರಿಗೆ ಆಗ್ರಹಿಸುತ್ತಿರುವ ರಜನೀಕಾಂತ್ ಕನ್ನಡ ದ್ರೋಹಿ. ಅವನೊಬ್ಬ ತಮಿಳುನಾಡು ಏಜೆಂಟ್. ಚಿತ್ರೀಕರಣಕ್ಕೂ ಸಹ ಅವನು ಕರ್ನಾಟಕಕ್ಕೆ ಬರಬಾರದು ಎಂದು ಮಾಜಿ ಶಾಸಕ ವಾಟಾಳ್ ನಾಗರಾಜ್ ಸೂಪರ್ ಸ್ಟಾರ್ ರಜನೀಕಾಂತ್ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಸೋಮವಾರ ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಜನಿಕಾಂತ್ ಸಿನಿಮಾ ಬಿಟ್ಟು, ಪಕ್ಷ ಕಟ್ಟುತ್ತಿದ್ದು, ಅದರ ಭೂಮಿಕೆಯಾಗಿ ಕಾವೇರಿಯನ್ನು ಬಳಸುತ್ತಿದ್ದಾರೆ ಎಂದು ಟೀಕಿಸಿದರು.

ಬಹುಮತ ಕಳೆದುಕೊಂಡ ಬಿಎಸ್ವೈ, ಸಂಭ್ರಮದಲ್ಲಿ ರಜನೀಕಾಂತ್

ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆ ರಾಜ್ಯಕ್ಕೆ ತೀವ್ರ ಅಪಾಯಕಾರಿ. ಇದರಿಂದ ಜಲಾಶಯಗಳು ಪ್ರಾಧಿಕಾರದ ವ್ಯಾಪ್ತಿಗಳೊಪಡಲಿದ್ದು ಕೆರೆಗಳಿಗೆ, ಗದ್ದುಗೆಗಳಿಗೆ ಕುಡಿಯಲು ನೀರು ಬಿಡದೆ ಮಿಲ್ಟ್ರಿ ಕಾನೂನು ಬರಲಿದೆ.

ಇದರಿಂದ ನೀರಿನ ಹಕ್ಕು ಕಳೆದುಕೊಳ್ಳುತ್ತೇವೆ. ಕೇಂದ್ರ ತಮಿಳುನಾಡು ಬೆಂಬಲಕ್ಕೆ ನಿಂತಿದೆ. ರಾಜ್ಯದ ಕೇಂದ್ರ ಸಚಿವರು, ಸಂಸದರು ಸೇರಿ ಪ್ರಾಧಿಕಾರ ರಚಿಸದಂತೆ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದು, ಈಗ ಬರುತ್ತಿರುವುದು ಸಮ್ಮಿಶ್ರ ಸರ್ಕಾರವಲ್ಲ. ಬದಲಾಗಿ ತತ್ವ ಸಿದ್ಧಾಂತಗಳಿಲ್ಲದ ಸಮಯ ಸಾಧಕ ಸರ್ಕಾರ. ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಚುನಾವಣೆಗಳು ನಡೆಯುತ್ತಿದ್ದು, ಇದರಿಂದ ಚುನಾವಣೆ ಬಗ್ಗೆ ಸಾರ್ವಜನಿಕರಿಗೆ ನಂಬಿಕೆ ಹೋಗಿದೆ.

ತತ್ತ್ವ - ಸಿದ್ಧಾಂತ, ನಂಬಿಕೆ ಹೋರಾಟಗಳಿಗೆ ರಾಜಕೀಯ ಪಕ್ಷಗಳು ತಿಲಾಂಜಲಿ ಹೇಳುತ್ತಿದ್ದು, ಪಕ್ಷಗಳ ಪ್ರಣಾಳಿಕೆಗಳು ಬೋಗಸ್ ಆಗಿವೆ. ಚುನಾವಣೆಗಳು ಜಾತಿ ಹಣದ ಮೇಲೆ ನಡೆಯುತ್ತಿದೆ ಎಂದು ಕಿಡಿಕಾರಿದರು.

ಚುನಾವಣೆಗಳು ನ್ಯಾಯಯುತವಾಗಿ ನಡೆಯುತ್ತಿಲ್ಲ. ಇದರಿಂದ ದೇಶದಲ್ಲಿ ಅರಾಜಕತೆ ಶುರುವಾಗಿದೆ. ಈ ಬಗ್ಗೆ ಲೋಕಸಭೆ, ಶಾಸನ ಸಭೆಗಳಲ್ಲಿ ಗಂಭೀರವಾಗಿ ಚರ್ಚೆ ನಡೆಯಬೇಕು. ಪ್ರಧಾನಿಯಿಂದ ಕೆಳಮಟ್ಟದ ಜನಪ್ರತಿನಿಧಿಗಳಲ್ಲೂ ಅಕ್ರಮ ತಾಂಡವವಾಡುತ್ತಿದೆ.

ಇದೇ ರೀತಿ ನಡೆದರೆ ಎಂಎಲ್ಎ, ಸಿಎಂ, ಪ್ರಧಾನಿ ಸ್ಥಾನಗಳಿಗೆ ಇಂತಿಷ್ಟು ಎಂದು ಹಣ ನಿಗದಿ ಮಾಡಿದರೆ ಆಯಿತು. ಚುನಾವಣೆ ನಡೆಸುವ ಅವಶ್ಯಕತೆಯೇ ಇಲ್ಲ ಎಂದು ವ್ಯಂಗ್ಯವಾಡಿದರು.

ಕಾನೂನು ಮಸೂದೆಗಳು ಚರ್ಚೆ ಇಲ್ಲದೆ ಕೇವಲ ಗಲಾಟೆಗೆ ಮಾತ್ರ ನಡೆಯುತ್ತಿವೆ. ಶಾಸಕಾಂಗ ಸಭೆಗಳು ಸೀಮಿತವಾಗಿದೆ.

ರಿಯಲ್ ಎಸ್ಟೇಟ್ ನಡೆಸುವವರು, ಹಣವಂತರು, ವ್ಯಾಪಾರಿಗಳು ವಿಧಾನಸಭೆಗೆ ದಾಳಿ ಇಡುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದರು.

ನನ್ನ ಸೋಲು ಅಸಾಧ್ಯವಾಗಿತ್ತು. ನಾನೇನು ಅಪರಾಧಿಯೂ ಅಲ್ಲ. ಯಾರನ್ನೂ ದರೋಡೆ ಲೂಟಿಯೂ ಮಾಡಿಲ್ಲ. ಯಾವುದೇ ಕಪ್ಪು ಚುಕ್ಕೆ ಇಲ್ಲ. ನಾನು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದ ತತ್ವ ಸಿದ್ಧಾಂತಗಳ ಹೋರಾಟಗಾರನಾಗಿ ಐವತ್ತು ವರ್ಷಗಳ ಕಾಲ ರಾಜಕಾರಣ ಮಾಡಿದ್ದೇನೆ.

ನನ್ನನ್ನು ಜಾತಿ ಹಾಗೂ ಕಪ್ಪು ಹಣ ಕೊಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಚಾಮರಾಜನಗರದಲ್ಲಿ ಪಾರದರ್ಶಕ ಚುನಾವಣೆ ನಡೆದಿಲ್ಲ. ಮತಯಂತ್ರಗಳ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದು, ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಆಯೋಗಕ್ಕೆ ದೂರು ನೀಡುವೆ.

ನಾನು ಸೋಲಿಗೆ ಹಿಂಜರಿಯುವುದಿಲ್ಲ. ಆದರೆ ಜಾತಿ, ಹಣ, ಯಂತ್ರದ ದುರುಪಯೋಗವಾಗಿದ್ದು ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಸಲ್ಲಿಸಿ ತನಿಖೆಗಾಗಿ ಒತ್ತಾಯಿಸುತ್ತೇನೆ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Election Results 2018: Former MLA Vatal Nagaraj Said Super Star rajinikanth Kannada Traitor. He is a Tamil Nadu agent. He should not come to Karnataka for shooting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more