ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಆಹಾರ ಮೇಳದಲ್ಲಿ ಈ ಬಾರಿ ಟಿಬೇಟಿಯನ್ ಸ್ಪೆಷಲ್ ಖಾದ್ಯ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 6: ಸೆ.30ರಿಂದ ಅ.8ವರೆಗೆ ನಡೆಯುವ ದಸರಾ ಮಹೋತ್ಸವ ವೀಕ್ಷಿಸಲೆಂದು ಸಾಂಸ್ಕೃತಿಕ ನಗರಿಗೆ ಬರುವ ಪ್ರವಾಸಿಗರಿಗೆ ಈ ಬಾರಿ ಆಹಾರ ಮೇಳದಲ್ಲಿ ವಿದೇಶಿ ಖಾದ್ಯಗಳೂ ಲಭ್ಯವಾಗಲಿವೆ.

ಯುವ ದಸರೆಗೆ ಚಾಲನೆ ನೀಡಲಿದ್ದಾರೆ ಚಿನ್ನದ ಹುಡುಗಿ ಪಿ.ವಿ ಸಿಂಧುಯುವ ದಸರೆಗೆ ಚಾಲನೆ ನೀಡಲಿದ್ದಾರೆ ಚಿನ್ನದ ಹುಡುಗಿ ಪಿ.ವಿ ಸಿಂಧು

ಕಳೆದ ಬಾರಿ ಬಂಬೂ ಬಿರಿಯಾನಿ, ಬಿದಿರಕ್ಕಿ ಪಾಯಸ, ಬಿದಿರು-ಕಳಲೆ ಸಾರು, ನಳ್ಳಿ ಸಾರು ಸೇರಿದಂತೆ ಆದಿವಾಸಿ ಬುಡಕಟ್ಟು ಸಮುದಾಯದ ತಿನಿಸುಗಳನ್ನು ಪರಿಚಯಿಸಿದ್ದ ದಸರಾ ಕಾರ್ಯಕಾರಿ ಸಮಿತಿ, ಈ ಸಲ ಟಿಬೇಟಿಯನ್ನರ ತಿನಿಸುಗಳನ್ನು ಇದೇ ಮೊದಲ ಬಾರಿ ಉಣಬಡಿಸಲು ಮುಂದಾಗಿದೆ.

Variety foods will implement on Mysuru dassara-2019

ಕಳೆದ ವರ್ಷ ಚೀನಾ, ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಕಾಂಬೋಡಿಯಾ ಸೇರಿದಂತೆ ವಿವಿಧ ದೇಶಗಳ ತಿನಿಸುಗಳನ್ನು ಮೈಸೂರು ವಿಶ್ವವಿದ್ಯಾನಿಲಯ, ಜೆಎಸ್‌ಎಸ್, ಎನ್ಐಇ ಕಾಲೇಜು ಸೇರಿದಂತೆ ವಿವಿಧೆಡೆ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ತಯಾರಿಸಿದ್ದರು.

Variety foods will implement on Mysuru dassara-2019

ಹೊರ ರಾಜ್ಯದವರಿಗೆ 20 ಮಳಿಗೆಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳು ಈ ಬಾರಿಯ ಆಹಾರ ಮೇಳದಲ್ಲಿ ಭಾಗವಹಿಸಲಿವೆ. ಪ್ರತಿ ದಿನ ಒಂದು ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಹಾರ ಮೇಳದಲ್ಲಿ ಆಯೋಜಿಸಲಾಗುವುದು. ಸಸ್ಯಾಹಾರ, ಮಾಂಸಾಹಾರದ ಬಗೆ ಬಗೆ ತಿನಿಸಗಳೂ ಇರಲಿವೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ತಿಳಿಸಿದ್ದಾರೆ.

ಅಂಬಾರಿ ಹೊರುವ ಅರ್ಜುನ ಆನೆಯ ಮಾವುತ, ಕಾವಾಡಿ ಆಯ್ಕೆಯಲ್ಲೂ ರಾಜಕೀಯಅಂಬಾರಿ ಹೊರುವ ಅರ್ಜುನ ಆನೆಯ ಮಾವುತ, ಕಾವಾಡಿ ಆಯ್ಕೆಯಲ್ಲೂ ರಾಜಕೀಯ

ಇದರೊಟ್ಟಿಗೆ ಬುಡಕಟ್ಟು, ಸಾವಯವ ಆಹಾರ ತಿನಿಸುಗಳೂ ಇರಲಿವೆ. ಆಹಾರ ಮೇಳದ ಜೊತೆಗೆ ಸಾಂಪ್ರದಾಯಿಕ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ. ಈ ಬಾರಿಯೂ ಆಹಾರ ಮೇಳ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ, ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಬಳಿ ನಡೆಯಲಿದೆ. ಪ್ರತಿ ಸ್ಥಳದಲ್ಲಿ 70ಕ್ಕೂ ಹೆಚ್ಚು ಮಳಿಗೆಗಳು ಆಹಾರಪ್ರಿಯರ ನಾಲಿಗೆ ತಣಿಸಲಿವೆ.

English summary
Variety foods will implement on Mysuru dassara-2019. This year different states and places food will introduce at Food festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X