ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನ ಕಣ್ಮುಚ್ಚಿ ಕುಳಿತಿಲ್ಲ ಎಂದು ಮೋದಿ ವಿರುದ್ಧ ಗರಂ ಆದ ಬಿಜೆಪಿ ಸಂಸದ

By ಮೈಸೂರು ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಅಕ್ಟೋಬರ್ 4: ನೆರೆ ಪರಿಹಾರ ವಿಚಾರದಲ್ಲಿ ಆಗುತ್ತಿರುವ ವಿಳಂಬದ ವಿರುದ್ಧ ಬಿಜೆಪಿ ಸಂಸದ ವಿ ಶ್ರೀನಿವಾಸ್​ ಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದಸರಾ: ಸರ್ಕಾರದ ನಿರ್ಣಯಕ್ಕೆ ಸಂಸದ ಶ್ರೀನಿವಾಸ್‌ಪ್ರಸಾದ್ ಅಸಮಾಧಾನದಸರಾ: ಸರ್ಕಾರದ ನಿರ್ಣಯಕ್ಕೆ ಸಂಸದ ಶ್ರೀನಿವಾಸ್‌ಪ್ರಸಾದ್ ಅಸಮಾಧಾನ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜನ ಕಣ್ಣು ಮುಚ್ಚಿ ಕುಳಿತಿಲ್ಲ. ನಿಮ್ಮೆಲ್ಲಾ ಆಟ ಪಾಠ ನೋಡುತ್ತಿದ್ದಾರೆ. ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ" ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗರಂ ಆದರು.

V Srinivas Prasad Opposed The Delay Of Relief Fund

ಯಾವ ಕಾರಣಕ್ಕೂ ದಸರಾಗೆ ಹೋಗುವುದಿಲ್ಲ; ಶ್ರೀನಿವಾಸ್ ಪ್ರಸಾದ್ ಯಾವ ಕಾರಣಕ್ಕೂ ದಸರಾಗೆ ಹೋಗುವುದಿಲ್ಲ; ಶ್ರೀನಿವಾಸ್ ಪ್ರಸಾದ್

"ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ಏನು ಮಾಡಬೇಕು? ಒಮ್ಮೆಯೂ ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿಲ್ಲ. ನೆರೆ ಪರಿಹಾರ ಕೊಡಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಸಹಾಯಕರಾಗಿದ್ದಾರೆ" ಎಂದು ವಾಕ್​ ಪ್ರಹಾರ ನಡೆಸಿದರು. "ಈಗಾಗಲೇ ಸರ್ವಪಕ್ಷ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ಯಬೇಕಿತ್ತು. ಆದರೆ, ಕೇಂದ್ರ ಸಚಿವರು ಹಾರಿಕೆ ಉತ್ತರ ನೀಡುತ್ತಾ ಸಬೂಬು ಹೇಳುತ್ತಿದ್ದಾರೆ. ನಮಗೂ ಒಂದು ಮಿತಿಯಿದೆ. ಮಾತನಾಡಲೇಬೇಕಿದೆ" ಎಂದರು.

English summary
BJP MP V Srinivas Prasad has opposed the delay in giving relief fund to the flood victims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X