ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಲ ಸಿಎಂ ಕೈಯಲ್ಲಿದೆ ಎಂದ ವಸತಿ ಸಚಿವ ವಿ.ಸೋಮಣ್ಣ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 24: "ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಯಾರನ್ನು ಬಿಡಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ‌ ವಿಚಾರ. ಯಡಿಯೂರಪ್ಪ ಅವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ" ಎಂದು ಪ್ರತಿಕ್ರಿಯಿಸಿದ್ದಾರೆ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ.

ನಂಜನಗೂಡಿನ ಸುತ್ತೂರಿನಲ್ಲಿ ಉಪಚುನಾವಣೆಯಲ್ಲಿ ಸೋತವರಿಗೂ ಮಂತ್ರಿಗಿರಿ ನೀಡುವ ಚರ್ಚೆಯ ಕುರಿತು ಮಾತನಾಡಿದ ಅವರು, "ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡದಂತೆ ಎಲ್ಲರಿಗೂ ಸೂಚನೆ ನೀಡಲಾಗಿದೆ. ಎಲ್ಲದರ ಕುರಿತು ಸಿಎಂ ನಿರ್ಧರಿಸುತ್ತಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ಬೆಳವಣಿಗೆಗಳಿಗೂ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ" ಎಂದು ತಿಳಿಸಿದರು.

ನಿಮ್ಮ ಇತಿಹಾಸ ನಾ ಕೆದಕಿದರೆ ಮರ್ಯಾದೆ ಏನಾಗುತ್ತೆ ಕುಮಾರಣ್ಣ? ಸೋಮಣ್ಣ ತಿರುಗೇಟು ನಿಮ್ಮ ಇತಿಹಾಸ ನಾ ಕೆದಕಿದರೆ ಮರ್ಯಾದೆ ಏನಾಗುತ್ತೆ ಕುಮಾರಣ್ಣ? ಸೋಮಣ್ಣ ತಿರುಗೇಟು

V Somanna Speak About Cabinet Expansion In Nanjanagud

ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ವಿಚಾರವಾಗಿಯೂ ಮಾತನಾಡಿದ ಅವರು, "ಮೈಸೂರಿನ ಬಗ್ಗೆ ಯಾರಿಗೆ ಪ್ರೀತಿ ಇಲ್ಲ? ಮೈಸೂರು ಎಂದಾಕ್ಷಣ ಚಾಮುಂಡಿಬೆಟ್ಟ, ಮಹಾರಾಜರು ನೆನಪಾಗುತ್ತದೆ. ಇಂತಹ ಜಾಗದ ಬಗ್ಗೆ ಎಲ್ಲರಿಗೂ ಪ್ರೀತಿ ಇದ್ದೇ ಇರುತ್ತೆ. ನನಗೂ ಇಲ್ಲಿ ಒಳ್ಳೆಯ ಕೆಲಸ ಮಾಡುವ ಆಸೆ ಇದೆ" ಎಂದರು.

English summary
“It is up to the chief ministers to decide who should be inducted into the cabinet and whom to leave.Yeddyurappa will make the right decision," said v somanna in nanjanangud,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X