ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮದು ಸದ್ಯಕ್ಕೆ ಸಮ್ಮಿಶ್ರ ಸರ್ಕಾರ ಎಂದ ಸಚಿವ ಸೋಮಣ್ಣ, ಹೀಗಂದಿದ್ದೇಕೆ?

|
Google Oneindia Kannada News

Recommended Video

ನಮ್ಮದು ಸದ್ಯಕ್ಕೆ ಸಮ್ಮಿಶ್ರ ಸರ್ಕಾರ ಎಂದ ಸಚಿವ ಸೋಮಣ್ಣ, ಹೀಗಂದಿದ್ದೇಕೆ? | Oneindia Kannada

ಮೈಸೂರು, ಆಗಸ್ಟ್ 22: "ರಾಜ್ಯದ ಅಭಿವೃದ್ಧಿಗಾಗಿ ಸಚಿವ ಸಂಪುಟ ವಿಸ್ತರಣೆಯಾಗಿದೆ. ಆದರೆ ನಮ್ಮದು ಸಮ್ಮಿಶ್ರ ಸರ್ಕಾರ" ಎಂದಿದ್ದಾರೆ ನೂತನ ಸಚಿವ ವಿ.ಸೋಮಣ್ಣ.

ಯಡಿಯೂರಪ್ಪ ಸಂಪುಟ- ಸಂಕಟ: ಡಿಕೆಶಿ ನುಡಿದ ಭವಿಷ್ಯ ನಿಜವಾಗುತ್ತಿದೆಯಾ?

ಮೈಸೂರಿನಲ್ಲಿ ದಸರಾ ಗಜಪಯಣಕ್ಕೆ ಚಾಲನೆ ನೀಡಿ ಮಾತನಾಡಿದ ಸೋಮಣ್ಣ, "ಈಗಾಗಲೇ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದೆ. 17 ಜನರಿಗೆ ಸಚಿವ ಸ್ಥಾನ ನೀಡಲಾಗಿದೆ. ಇನ್ನೂ 16 ಸ್ಥಾನಗಳು ಖಾಲಿ ಉಳಿದಿವೆ. ಹಾಗಾಗಿ ಮೊದಲ ಹಂತದಲ್ಲಿ ಸಂಪುಟ ವಿಸ್ತರಣೆ ಮುಗಿದಿದ್ದು, ಎರಡನೇ ಹಂತದ ಸಂಪುಟ ವಿಸ್ತರಣೆ ನಡೆಯಲಿದೆ. ಹೈ ಕಮಾಂಡ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅಳೆದು ತೂಗಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ" ಎಂದರು.

v-somanna-gives-clue-over-portfolio-for-disqualified-mlas

"ಮುಂದಿನ ದಿನದಲ್ಲೂ ಮತ್ತಷ್ಟು ಸಂಪುಟ ವಿಸ್ತರಣೆಯಾಗಲಿದೆ. ಆಗ ರಾಮ್ ದಾಸ್ ಅವರಿಗೆ ಸ್ಥಾನ ದೊರಕಲಿದೆ. ಸದ್ಯ ನಮ್ಮದು ಸಮ್ಮಿಶ್ರ ಸರ್ಕಾರದಂತೆ ಅನಿಸುತ್ತಿದೆ. ಎಲ್ಲರನ್ನೂ ತೃಪ್ತಿಪಡಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ" ಎನ್ನುವ ಮೂಲಕ ಪರೋಕ್ಷವಾಗಿ ಅತೃಪ್ತರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ್ದು ಅನುಮಾನ ಮೂಡಿದೆ.

English summary
Minister V Somanna gives clue over portfolio for disqualified MLAs. He said that our BJP Party is now become Coalition government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X