ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಸಿಗರೇ ವಿಶ್ವವಿಖ್ಯಾತ ಮೈಸೂರು ಅರಮನೆಗೆ ಸ್ವಾಗತ!

|
Google Oneindia Kannada News

ಮೈಸೂರು, ಜುಲೈ 5: ಕೊರೊನಾ ಸೋಂಕು ಕಾರಣದಿಂದ ಸುಮಾರು ಎರಡು ತಿಂಗಳಿಗೂ ಹೆಚ್ಚು ಕಾಲ ಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಪ್ರವೇಶಕ್ಕೆ ಹೇರಿದ್ದ ನಿರ್ಬಂಧವನ್ನು ತೆಗೆದು ಅರಮನೆ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗಿದೆ.

ಜುಲೈ 5ರಿಂದಲೇ ಪ್ರವಾಸಿಗರು ಅರಮನೆ ವೀಕ್ಷಣೆಗೆ ಬರಬಹುದಾಗಿದ್ದು, ಮೈಸೂರಿನ ಪ್ರಮುಖ ಆಕರ್ಷಣೆಯೇ ಮೈಸೂರು ಅರಮನೆಯಾಗಿದೆ. ಕೊರೊನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡುವ ಮುನ್ನವೇ ಅಂದರೆ ಏ.24ರಿಂದಲೇ ಅರಮನೆ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ನಿರ್ಬಂಧ ತೆಗೆದು ಕೋವಿಡ್ ನಿಯಮ ಪಾಲನೆಯೊಂದಿಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಸಾರ್ವಜನಿಕರು ಅರಮನೆಗೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ.

ಧರ್ಮಸ್ಥಳ, ಕುಕ್ಕೆಗೆ ಬರುವ ಭಕ್ತಾದಿಗಳಿಗೆ ಹಲವು ನಿಯಮಗಳುಧರ್ಮಸ್ಥಳ, ಕುಕ್ಕೆಗೆ ಬರುವ ಭಕ್ತಾದಿಗಳಿಗೆ ಹಲವು ನಿಯಮಗಳು

ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರು ಅರಮನೆ ಪ್ರವೇಶಕ್ಕೆ ಬೇಕಾದ ಟಿಕೆಟ್‌ನ್ನು ಅರಮನೆಯ ಟಿಕೆಟ್ ಕೌಂಟರ್‌ನಲ್ಲಿ ಪಡೆಯಬಹುದಾಗಿದೆ. ಅಥವಾ ಆನ್‌ಲೈನ್‌ನಲ್ಲಿ ಅರಮನೆ ವೆಬ್‌ಸೈಟ್ (www.mysorepalace.gov.in) ನಲ್ಲಿ ಟಿಕೆಟ್ ಪಡೆಯಲು ಅವಕಾಶವಿದೆ.

Unlock 3.0 : Mysore Palace Open To Tourists After Covid-19 Cases Drops

ಪ್ರವಾಸಿಗರಿಗೆ ಅರಮನೆಯ ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್ ಪಡೆಯುವ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ ಟಿಕೆಟ್ ಕೌಂಟರ್‌ನಲ್ಲಿ ಚೌಕಾಕಾರದ ಗುರುತುಗಳನ್ನು ಹಾಕಲಾಗಿದ್ದು, ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯಬೇಕಾಗುತ್ತದೆ.

"ಈಗಾಗಲೇ ಅರಮನೆಯಲ್ಲಿ ಪ್ರವಾಸಿಗರು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು, ಮಾಸ್ಕ್ ತಪ್ಪದೇ ಧರಿಸಬೇಕೆಂಬ ಅರಿವು ಮೂಡಿಸುವ ಸೂಚನಾ ಫಲಕ ಹಾಕಲಾಗಿದ್ದು, ಸಿಸಿಟಿವಿ ಕಾವಲು ಮೂಲಕ ಪ್ರವಾಸಿಗರ ಮೇಲೆ ನಿಗಾವಹಿಸಲಾಗುತ್ತಿದೆ,'' ಎಂದು ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.

Unlock 3.0 : Mysore Palace Open To Tourists After Covid-19 Cases Drops

ಮೈಸೂರು ಅರಮನೆ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಸುತ್ತಮುತ್ತ ವ್ಯಾಪಾರ ನಡೆಸುವ, ಟಾಂಗಾ ಓಡಿಸುವ ಟಾಂಗಾವಾಲ ಮತ್ತು ಆಟೋ ಚಾಲಕರ ಮೊಗದಲ್ಲಿ ಮಂದಹಾಸ ಮೂಡಿದೆ. ಪ್ರವಾಸಿಗರನ್ನೇ ನಂಬಿ ಜೀವನ ನಡೆಸುತ್ತಿದ್ದವರ ಬದುಕು ಮೂರಾಬಟ್ಟೆಯಾಗಿತ್ತು. ಆದರೆ ಈಗ ಅವರೆಲ್ಲರೂ ಸಂತಸ ಪಡುತ್ತಿದ್ದಾರೆ. ಕಾರಣ ಪ್ರವಾಸಿಗರು ಬಂದರೆ ಅವರಿಗೂ ಒಂದಷ್ಟು ಅನುಕೂಲವಾಗಲಿದೆ.

English summary
Unlock 3.0: World Famous Mysore Palace allowed to Tourists from July 5th..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X