ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿಗೆ ಕೇಂದ್ರ ಸರ್ಕಾರದಿಂದ NIRF ಪ್ರಶಸ್ತಿ

|
Google Oneindia Kannada News

ಮೈಸೂರು, ಜೂನ್ 12: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯಕ್ಕೆ ಮತ್ತೊಂದು ಪ್ರಶಸ್ತಿಯ ಗರಿ ಸಿಕ್ಕಿದೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ನೀಡುವ ನ್ಯಾಷನಲ್ ಇನ್ಸ್ ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ (NIRF) ಪ್ರಶಸ್ತಿಗೆ ಮೈಸೂರು ವಿಶ್ವವಿದ್ಯಾಲಯ ಆಯ್ಕೆಯಾಗಿದೆ.

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಇಲಾಖೆ ದೇಶದ ಐಐಟಿ, ಐಐಸಿಗಳ ಮಾಹಿತಿಯನ್ನು ಸಂಗ್ರಹಿಸಿ ಈ ಶ್ರೇಯಾಂಕ ನೀಡುತ್ತದೆ. ಈ ಶ್ರೇಯಾಂಕದಲ್ಲಿ ಇಡೀ ದೇಶದಲ್ಲೇ ಮೈಸೂರು ವಿವಿ 27 ನೇ ಸ್ಥಾನದಲ್ಲಿದೆ. ಕಳೆದ ಹಲವು ದಶಕಗಳ ಬಳಿಕ ಮೈಸೂರು ವಿವಿ ಈ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಮೈಸೂರು ವಿವಿ ಉಪ ಕುಲಪತಿ ಪ್ರೊ. ಹೇಮಂತ್ ಕುಮಾರ್ ಸಂತಸ ವ್ಯಕ್ತಪಡಿಸಿದರು.

NIRF Rankings 2020: ಐಐಎಸ್ಸಿ ಬೆಂಗಳೂರು ನಂ.1 ವಿವಿNIRF Rankings 2020: ಐಐಎಸ್ಸಿ ಬೆಂಗಳೂರು ನಂ.1 ವಿವಿ

ಕಳೆದ ಬಾರಿ ಮೈಸೂರು ವಿವಿ 54 ನೇ ಶ್ರೇಯಾಂಕದಲ್ಲಿತ್ತು, ಈ ಬಾರಿ 27 ನೇ ಶ್ರೇಯಾಂಕ ಬಂದಿರುವುದು ನಿಜವಾದ ಗಣನೀಯ ಸಾಧನೆಯಾಗಿದ್ದು, ಇದು ವಿಶ್ವವಿದ್ಯಾಯದ ಅಭಿವೃದ್ಧಿ ಸಹಕಾರಿಯಾಗಿದೆ. ಇದಕ್ಕೆ ಕಾರಣರಾದ ಎಲ್ಲಾ ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

NIRF Award To Mysuru University From Central Government

ಹಾಗೆಯೇ ಇನ್ನು ಮುಂದೆ ಮೈಸೂರು ವಿವಿ ಹೆಚ್ಚಿನ ಶ್ರೇಯಾಂಕ ಪಡೆಯಲು ಪ್ರಯತ್ನಿಸುತ್ತೇವೆ. ಇದೇ ವರ್ಷ ನ್ಯಾಕ್ ಗೆ ಹೋಗುತ್ತೆ. ಹೀಗಾಗಿ ಮೈಸೂರು ವಿವಿ ನ್ಯಾಕ್ ನಲ್ಲಿ ಹೆಚ್ಚಿನ ಅಂಕ ಗಳಿಸಲು ಈ ಶ್ರೇಯಾಂಕ ಅನುಕೂಲವಾಗಲಿದೆ ಎಂದು ಉಪ ಕುಲಪತಿ ಪ್ರೊ. ಹೇಮಂತ್ ಕುಮಾರ್ ಹರ್ಷ ವ್ಯಕ್ತಪಡಿಸಿದರು.

English summary
The University of Mysuru has been selected for the National Institutional Ranking Frame (NIRF) Award given by the Human Resources Department of Central Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X