• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆ

|
Google Oneindia Kannada News

ಮೈಸೂರು, ಮೇ 19: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮರಳಿ ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಓಡಾಡುತ್ತಿತ್ತು. ಈ ಬಗ್ಗೆ ಖುದ್ದು ಸಚಿವೆ ಸ್ಪಷ್ಟನೆಯನ್ನು ನೀಡಿದ್ದಾರೆ. ಆ ಸುದ್ದಿಗಳೆಲ್ಲಾ ಊಹಾಪೋಹ ಎಂದಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಶೋಭಾ ಕರಂದ್ಲಾಜೆ, "ಈಗಾಗಲೇ ನಮ್ಮ ಕೇಂದ್ರದ ನಾಯಕರು ಸಚಿವೆಯನ್ನಾಗಿ ಮಾಡಿದ್ದಾರೆ. ದೇಶದಾದ್ಯಂತ ಪ್ರವಾಸ ಮಾಡುವಂತಹ ಅವಕಾಶ ನನಗೆ ಸಿಕ್ಕಿದೆ. ನಾನೇ ನೋಡಿರದ ಹಲವು ರಾಜ್ಯಗಳನ್ನು ನೋಡಿದ್ದೇನೆ"ಎಂದು ಸಚಿವೆ ಸ್ಪಷ್ಟನೆಯನ್ನು ನೀಡಿದರು.

ಪ್ರಮೋದ್ ಮಧ್ವರಾಜ್ ಬಿಜೆಪಿಗೆ: ಶೋಭಾ ಕರಂದ್ಲಾಜೆ ಎಲ್ಲಿಗೆ? ಉಡುಪಿ ರಾಜಕೀಯ ಕುತೂಹಲ!ಪ್ರಮೋದ್ ಮಧ್ವರಾಜ್ ಬಿಜೆಪಿಗೆ: ಶೋಭಾ ಕರಂದ್ಲಾಜೆ ಎಲ್ಲಿಗೆ? ಉಡುಪಿ ರಾಜಕೀಯ ಕುತೂಹಲ!

"ಇಂತಹ ಒಳ್ಳೆಯ ಅವಕಾಶ ಸಿಕ್ಕಿರುವಂತಹ ಈ ಸಂದರ್ಭದಲ್ಲಿ ನಾನು ಬೇರೆ ಯಾವ ಯೋಚನೆಯನ್ನೂ ಮಾಡಿಲ್ಲ. ಏನೇ ಊಹಾಪೋಹ ಸುದ್ದಿಗಳು ಹರಿದಾಡುತ್ತಿದ್ದರೂ, ಖಂಡಿತವಾಗಿಯೂ ನನಗೆ ಆ ಬಗ್ಗೆ ಮಾಹಿತಿಯಿಲ್ಲ"ಎಂದು ಶೋಭಾ ಕರಂದ್ಲಾಜೆ ಹೇಳುವ ಮೂಲಕ ರಾಜ್ಯ ರಾಜಕಾರಣಕ್ಕೆ ಮರಳಿ ಬರುವ ವಿಚಾರದ ಬಗ್ಗೆ ಸ್ಪಷ್ಟನೆಯನ್ನು ನೀಡಿದರು.

"ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ಸಿನವರಿಗೆ ಭಯ ಕಾಡಲಾರಂಭಿಸಿದೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನಡುವೆ ಪೈಪೋಟಿ ನಡೆಯುತ್ತಿದೆ. ಈ ಕಾರಣದಿಂದಾಗಿ ಇಬ್ಬರೂ ನಾಯಕರು ಭಯದಿಂದ ಬಾಯಿಗೆ ಬಂದಂತೆ ಹೇಳಿಕೆಯನ್ನು ನೀಡುತ್ತಿದ್ದಾರೆ"ಎಂದು ಶೋಭಾ ಅಭಿಪ್ರಾಯ ಪಟ್ಟರು.

"ಸಿದ್ದರಾಮಯ್ಯನವರಿಗೆ ರಾಜ್ಯವಾಳಲು ಐದು ವರ್ಷಗಳ ಅವಕಾಶವನ್ನು ಕೊಟ್ಟಿತ್ತು, ಯಾವುದೇ ಗೊಂದಲ ಅಡೆತಡೆಗಳು ಅವರಿಗೆ ಇರಲಿಲ್ಲ. ಸ್ಥಿರ ಸರಕಾರವನ್ನು ಅವರು ನೀಡಿದ್ದರು. ಅಂತಹ ಸಮಯದಲ್ಲೂ ಅವರು ಯಾವುದೇ ನಿರ್ಧಾರವನ್ನು ಮಾಡಿರಲಿಲ್ಲ. ಟಿಪ್ಪು ಜಯಂತಿ ಸೇರಿದಂತೆ ಬರೀ ಗೊಂದಲದ ನಿರ್ಧಾರವನ್ನು ಅವರು ಮಾಡಿದ್ದರು"ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.

Union Minister Shobha Karandlaje Clarification On Returning To State Politics

"ಹಿಂದುಳಿದ ಮತ್ತು ವೀರಶೈವ ಸಮಾಜವನ್ನು ಒಡೆದು ಆಳುವ ಕೆಲಸವನ್ನು ಕಳೆದ ಕಾಂಗ್ರೆಸ್ ಸರಕಾರ ಮಾಡಿತ್ತು. ಮೈಸೂರಿಗೆ ಸಿದ್ದರಾಮಯ್ಯನವರ ಕೊಡುಗೆ ಏನು? ಮೈಸೂರಿನ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ ಎಂದು ಸಿದ್ದರಾಮಯ್ಯ ಎದೆಮುಟ್ಟಿ ಹೇಳಲಿ ನೋಡೋಣ"ಎಂದು ಶೋಭಾ ಕರಂದ್ಲಾಜೆ ಸವಾಲು ಎಸೆದರು.

Recommended Video

   Rinku Singh ಆಟ ಕಡೆಗೆ ಯಾವ ರೀತಿ ಬದಲಾಯ್ತು | Oneindia Kannada
   English summary
   Union Minister Shobha Karandlaje Clarification On Returning To State Politics. Know More,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X