ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ರೈಲ್ವೆ ಟ್ರ್ಯಾಕ್ ನಿರ್ವಹಣೆ ಬೆಸ್ಟ್ ಎಂದ ಕೇಂದ್ರ ಸಚಿವ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 31: ರೈಲ್ವೆ ಪ್ರಯಾಣದಲ್ಲಿ ಅಲುಗಾಟ ಸರ್ವೇ ಸಾಮಾನ್ಯ. ರೈಲಿನಲ್ಲಿ ಪ್ರಯಾಣಿಸುವಾಗ ಕೂತಿರಲಿ, ನಿಂತಿರಲಿ, ಅಲುಗಾಟವಂತೂ ಇದ್ದೇ ಇರುತ್ತದೆ. ಕೆಲವೊಮ್ಮೆ ರೈಲಿನ ಇಂಜಿನ್ ಜರ್ಕ್ ಹೊಡೆದಾಗ ಸ್ವಲ್ಪ ಓಲಾಟವೂ ಇರುತ್ತದೆ.

ಆದರೆ ಬೆಂಗಳೂರು- ಮೈಸೂರು ನಡುವಿನ ರೈಲ್ವೇ ಪ್ರಯಾಣದಲ್ಲಿ ಅಲುಗಾಟವೇ ಇಲ್ಲ ಎಂದು ರೈಲ್ವೆ ಸಚಿವರೇ ಶಹಭಾಸ್ ಗಿರಿ ಕೊಟ್ಟಿದ್ದಾರೆ.

ಮೈಸೂರು ರೈಲ್ವೆ ನಿಲ್ದಾಣಕ್ಕೆ ಮೈಸೂರು ರೈಲ್ವೆ ನಿಲ್ದಾಣಕ್ಕೆ "ಅತ್ಯುತ್ತಮ ನಿರ್ವಹಣೆಯ ನಿಲ್ದಾಣ" ಪ್ರಶಸ್ತಿ

ರೈಲು ಚಲಿಸುವಾಗ ಬೋಗಿಯಲ್ಲಿ ನೀರು ತುಂಬಿದ ಗ್ಲಾಸ್ ಇಟ್ಟಿರುವಾಗ ಒಂದೇ ಒಂದು ಸ್ವಲ್ಪವೂ ಗ್ಲಾಸ್ ಅಲ್ಲಾಡುವುದಿಲ್ಲ. ಜೊತೆಗೆ ಒಂದು ತೊಟ್ಟು ನೀರು ಕೂಡ ಹೊರಗೆ ಚೆಲ್ಲುವುದಿಲ್ಲ. ಇದು ಉತ್ತಮ ಟ್ರ್ಯಾಕ್ ನಿರ್ವಹಣೆಯನ್ನು ತೋರಿಸುತ್ತದೆ. ಮೈಸೂರು ಮತ್ತು ಬೆಂಗಳೂರು ನಡುವಿನ ರೈಲ್ವೆ ಟ್ರ್ಯಾಕ್ ನಿರ್ವಹಣೆ ಉತ್ತಮವಾಗಿದೆ ಎಂದು ಸ್ವತಃ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಶ್ಲಾಘಿಸಿದ್ದಾರೆ.

Union Minister Piyush Goyal Appreciated Bengaluru Mysuru Railway Track Maintainance
.
ರೈಲಿನಲ್ಲಿ ನೀರಿನ ಗ್ಲಾಸ್ ಇಟ್ಟಿರುವ ವೇಳೆ ಅದು ಸ್ವಲ್ಪವೂ ಅಲ್ಲಾಡದಿರುವ ದೃಶ್ಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಬೆಸ್ಟ್ ಟ್ರ್ಯಾಕ್ ನಿರ್ವಹಣೆ ಬಗ್ಗೆ ಪಿಯೂಶ್ ಗೋಯಲ್ ಶಹಭಾಸ್ ಹೇಳಿದ್ದಾರೆ.
English summary
Union Railway minister Piyush Goyal appreciated bengaluru-mysuru railway track maintainance and tweeted about this,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X