ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ಷದ ವಿಶೇಷ; ಕೋವಿಡ್ ನಡುವೆ ಸರಳವಾಗಿ ನಡೆದ ಮೈಸೂರು ದಸರಾ

By Coovercolly Indresh
|
Google Oneindia Kannada News

ವಿಶ್ವವಿಖ್ಯಾತ ಮೈಸೂರು ದಸರಾ ಎಂದರೆ ಅದೊಂದು ದೊಡ್ಡ ಹಬ್ಬ, ಎಲ್ಲೆಡೆ ಸಂಭ್ರಮ, ಸಡಗರವಿರುತ್ತದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರವಾಸಿಗರ ಕಲರವ ಕೂಡ ಜೋರಾಗಿರುತ್ತದೆ. ಆದರೆ, 2020ರ ಚಿತ್ರಣವೇ ಬೇರೆಯಾಗಿತ್ತು.

ಈ ಬಾರಿ ಕೋವಿಡ್ ಕಾರಣದಿಂದಾಗಿ ಮೈಸೂರು ದಸಾರದ ಸಡಗರ ಕಡಿಮೆಯಾಗಿತ್ತು. ಕೋವಿಡ್ ಸೋಂಕು ಹರಡದಂತೆ ತಡೆಯಲು ಸರಳವಾಗಿ ದಸರಾ ಆಚರಣೆ ಮಾಡುವುದಾಗಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರ ಹೊರಡಿಸಿದ್ದ ಕೋವಿಡ್ ಮಾರ್ಗಸೂಚಿಗಳು ಉಲ್ಲಂಘನೆಯಾಗದಂತೆ ಎಚ್ಚರ ವಹಿಸಲಾಯಿತು.

ಮೈಸೂರು ದಸರಾ-2020ರ ವೆಚ್ಚದ ಲೆಕ್ಕ ಕೊಟ್ಟ ಸಚಿವ ಎಸ್‌.ಟಿ ಸೋಮಶೇಖರ್ ಮೈಸೂರು ದಸರಾ-2020ರ ವೆಚ್ಚದ ಲೆಕ್ಕ ಕೊಟ್ಟ ಸಚಿವ ಎಸ್‌.ಟಿ ಸೋಮಶೇಖರ್

ಸರಳ ದಸರಾ ಹೇಗಿರುತ್ತದೆ ಎಂಬ ಮಾರ್ಗಸೂಚಿ ಸೆಪ್ಟೆಂಬರ್‌ ತಿಂಗಳಿನಲ್ಲಿ ರೂಪಗೊಂಡಿತು. ಯಾವುದೇ ಸಂಪ್ರದಾಯಗಳಿಗೆ ಧಕ್ಕೆ ಆಗದಂತೆ, ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸದಂತೆ ಯೋಜನೆ ತಯಾರಿಸಿ ದಸರಾವನ್ನು ಆಚರಣೆ ಮಾಡಲಾಯಿತು. 'ಅಭಿಮನ್ಯು' ಆನೆ ಚಿನ್ನದ ಅಂಬಾರಿ ಹೊತ್ತು ಜಂಬೂ ಸವಾರಿಯನ್ನು ನಡೆಸಿಕೊಟ್ಟಿತ್ತು.

ಸರಳ ದಸರಾ; ಮೃಗಾಲಯದ ಆದಾಯ ಭಾರಿ ಕುಸಿತ! ಸರಳ ದಸರಾ; ಮೃಗಾಲಯದ ಆದಾಯ ಭಾರಿ ಕುಸಿತ!

ಸರ್ಕಾರದಿಂದ ನಡೆಯುವ ದಸರಾ ಒಂದು ಕಡೆ. ಮೈಸೂರು ದಸರಾದ ಪ್ರಮುಖ ಆಕರ್ಷಣೆಯಲ್ಲಿ ಖಾಸಗಿ ದಸರಾ ಸಹ ಸೇರಿದೆ. ಆದರೆ, ಈ ಬಾರಿ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್‌, ಪೂಜಾ ವಿಧಿವಿಧಾನಗಳನ್ನು ವೀಕ್ಷಿಸಲು ಜನವರಿಗೆ ಅವಕಾಶವಿರಲಿಲ್ಲ.

ದಸರಾ ಉತ್ಸವ ಯಶಸ್ವಿ: ಚಾಮುಂಡೇಶ್ವರಿಗೆ ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ ದಸರಾ ಉತ್ಸವ ಯಶಸ್ವಿ: ಚಾಮುಂಡೇಶ್ವರಿಗೆ ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ

ವ್ಯಾಪಾರ ಕುಸಿತವಾಯಿತು

ವ್ಯಾಪಾರ ಕುಸಿತವಾಯಿತು

ಮೈಸೂರು ನಗರದಲ್ಲಿ ಮಳೆಗಾಲದಲ್ಲಿ ವ್ಯಾಪಾರ ವಹಿವಾಟು ಕುಸಿತದಿಂದ ನಷ್ಟ ಅನುಭವಿಸಿದ ಸಾವಿರಾರು ವ್ಯಾಪಾರಿಗಳು, ಹೋಟೆಲ್‌ ಉದ್ಯಮಿಗಳು ದಸರಾ ಸಂದರ್ಭದಲ್ಲಿ ಒಂದಷ್ಟು ಹಣ ಮಾಡಿಕೊಳ್ಳುವ ತವಕದಲ್ಲಿರುತ್ತಾರೆ. ದಸರಾ ಸಮಯದಲ್ಲಿ ನಗರದ ಹೋಟೆಲ್‌ಗಳಲ್ಲಿ ಕೊಠಡಿಗಳು ಸಿಗುವುದಿಲ್ಲ, ಸಿಕ್ಕರೂ ಬಾಡಿಗೆ ದುಬಾರಿ ಆಗಿರುತ್ತದೆ. ಆದರೆ, ಸರಳ ದಸರಾ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಒಂದಷ್ಟು ವಹಿವಾಟು ನಡೆಸುವ ವ್ಯಾಪಾರಿಗಳ ಆಸೆಯೂ ಈಡೇರಲಿಲ್ಲ.

ಹಲವಾರು ಕಾರ್ಯಕ್ರಮಗಳು ರದ್ದು

ಹಲವಾರು ಕಾರ್ಯಕ್ರಮಗಳು ರದ್ದು

ಈ ಬಾರಿ ಜನ ಸಂದಣಿಯನ್ನು ತಡೆಯಲು ಆಹಾರ ಮೇಳ, ಯುವ ದಸರಾ, ಕ್ರೀಡಾ ದಸರಾ ಮತ್ತು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿತ್ತು. ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಕೇವಲ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿತ್ತು. ದಸರಾ ಸಂದರ್ಭದಲ್ಲಿ 15 ಆನೆಗಳು ಮೈಸೂರಿಗೆ ಆಗಮಿಸುತ್ತವೆ. ಈ ಬಾರಿ ಕೇವಲ 5 ಆನೆಗಳು ಮಾತ್ರ ಆಗಮಿಸಿದ್ದವು. ಜಂಬೂ ಸವಾರಿ ವೀಕ್ಷಿಸಲು ನೂರು ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಕೋವಿಡ್ ಯೋಧರಿಗೆ ಸನ್ಮಾನ

ಕೋವಿಡ್ ಯೋಧರಿಗೆ ಸನ್ಮಾನ

ಈ ಬಾರಿಯ ದಸರಾವನ್ನು ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ. ಸಿ. ಎನ್. ಮಂಜುನಾಥ್ ಉದ್ಘಾಟಿಸಿದರು. ಪೌರ ಕಾರ್ಮಿಕರು, ವೈದ್ಯರು, ನರ್ಸ್‌ಗಳು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸ್ ಸಿಬ್ಬಂದಿಗಳನ್ನು ವಿಶೇಷವಾಗಿ ಆಹ್ವಾನಿಸಿ ಸನ್ಮಾನಿಸಲಾಯಿತು. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದವರಿಗೆ ಈ ಮೂಲಕ ಗೌರವ ಸಲ್ಲಿಸಲಾಯಿತು.

ಪ್ರವಾಸಿಗರ ದಂಡು ಇರಲಿಲ್ಲ

ಪ್ರವಾಸಿಗರ ದಂಡು ಇರಲಿಲ್ಲ

ಸಾಮಾನ್ಯವಾಗಿ ದಸರಾ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಪ್ರವಾಸಿಗರ ದಂಡು ಇರುತ್ತದೆ. ಸುಮಾರು 10 ಲಕ್ಷ ಜನ ಪ್ರವಾಸಿಗರು ನಗರಕ್ಕೆ ಭೇಟಿ ನೀಡುತ್ತಾರೆ ಎಂದು ಅಂದಾಜಿಸಲಾಗಿದೆ. ಆದರೆ, ಈ ಬಾರಿ ಸರಳ ದಸರಾ ಹಿನ್ನಲೆಯಲ್ಲಿ ವಿಶೇಷ ರೈಲು, ಬಸ್ ವ್ಯವಸ್ಥೆ ಇರಲಿಲ್ಲ. ದಸರಾಕ್ಕೆ ಸುಮಾರು 1 ಲಕ್ಷ ಜನರೂ ಆಗಮಿಸಿಲ್ಲ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಮೃಗಾಲಯ ಸೇರಿದಂತೆ ಪ್ರವಾಸಿ ತಾಣಗಳ ಆದಾಯದಲ್ಲಿಯೂ ಕುಸಿತವಾಗಿದೆ.

ಸರಳ ದಸರಾ ವೆಚ್ಚವೂ ಕಡಿತ

ಸರಳ ದಸರಾ ವೆಚ್ಚವೂ ಕಡಿತ

ಸಾಮಾನ್ಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮೈಸೂರು ದಸರಾಕ್ಕೆ ಸುಮಾರು 20 ಕೋಟಿ ವೆಚ್ಚ ಮಾಡುತ್ತದೆ. ಆದರೆ, ಈ ಬಾರಿ 10 ಕೋಟಿ ರೂ. ನಿಗದಿ ಮಾಡಲಾಗಿತ್ತು. ಸರಳ ದಸರಾ ಸಮಯದಲ್ಲಿಯೂ ಸಹ 52 ಕಿ. ಮೀ. ಉದ್ದದ ರಸ್ತೆಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಕೋವಿಡ್ ಆತಂಕ ಈಗ ಕಡಿಮೆಯಾಗಿದ್ದು, ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದೆ. ಮುಂದಿನ ಬಾರಿ ವೈಭವದ ದಸರಾಗೆ ಎಲ್ಲರೂ ಎದುರು ನೋಡುತಿದ್ದಾರೆ.

English summary
Due to COVID 19 Historical Mysuru Dasara held in simple manner in the year 2020. First time Jamboo Savari has been limited to the Mysuru palace premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X